ಕರಾವಳಿ

ಕೋಟ ಜೋಡಿ ಕೊಲೆಗೆ ನ್ಯಾಯ ಕೇಳಿ ದೇವರ ಮೊರೆ ಹೋದವರಿಗೆ ಸಿಕ್ಕಿತು ಭರವಸೆಯ ನುಡಿ (Video)

Pinterest LinkedIn Tumblr

ಉಡುಪಿ: ಜ.26 ರಂದು ಕೋಟ ಸಮೀಪದ ಚಿಕ್ಕನಕೆರೆಯಲ್ಲಿ ನಡೆದ ಭರತ್ ಹಾಗೂ ಯತೀಶ್ ಎನ್ನುವರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕೃತ್ಯದಲ್ಲಿ ಭಾಗಿಯಾದ ಅಪರಾಧಿಗಳು ಹಾಗೂ ಅವರಿಗೆ ಸಹಕಾರ ನೀಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಮೃತ ಯುವಕರ ಕುಟುಂಬಸ್ಥರು ಹಾಗೂ ಸ್ನೇಹಿತರು, ಊರಿನವರು ಫೆ.13 ಬುಧವಾರದಂದು ಕೋಟ ಅಮೃತೇಶ್ವರೀ ಹಲವು ಮಕ್ಕಳ ತಾಯಿ ದೇವಿಗೆ ಹುಯಿಲು ನೀಡಿ ನ್ಯಾಯಕೋರಿದರು.

 

ಕೋಟದಲ್ಲಿ ಹಿಂದೆ ಎಂದೂ ನಡೆಯದ ಜೋಡಿ ಕೊಲೆ ನಡೆದಿದೆ. ಇದು ನನ್ನ ಸಾನಿಧ್ಯಕ್ಕೆ ಆದ ಮಹಾ ಅಪಚಾರ ಮತ್ತು ನನಗೆ ತುಂಬಾ ನೋವಾಗಿದೆ. ಸಾನಿಧ್ಯದಲ್ಲಿ ಶಕ್ತಿ ಇರುವುದೇ ಹೌದಾದರೆ ನನ್ನ ಸತ್ಯ ಮತ್ತು ಶಕ್ತಿ ತೋರಿಸಿಕೊಡುತ್ತೇನೆ ಎನ್ನುವ ಅಭಯ ದರ್ಶನದಲ್ಲಿ ದೊರೆಯಿತು.

ಅಪರಾಧಿಗಳಿಗೆ ಸೂಕ್ತ ಶಿಕ್ಷೆಯಾದರೆ ಮನೆ-ಮನೆಯಲ್ಲಿ ಬೇಡಿ ನಾಣ್ಯದ ಕಾಣಿಕೆಯ ತುಲಾಭಾರ ಸೇವೆ ಸಲ್ಲಿಸುವುದಾಗಿ ಭಕ್ತಾಧಿಗಳು ಈ ಸಂದರ್ಭ ಹರಿಕೆ ಸಲ್ಲಿಸಿದರು. ಈ ಬಗ್ಗೆ ಸ್ಥಳಿಯ ನಿವಾಸಿ ದಿನೇಶ್ ಗಾಣಿಗ ಕೋಟ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು ದೇವರು ನೀಡಿದ ಅಭಯದಿಂದ ವಿಶ್ವಾಸ ಇಮ್ಮಡಿಯಾಗಿದೆ. ತಪ್ಪಿತಸ್ಥರಿಗೆ ದೇವರು ಬಿಡುವುದಿಲ್ಲ ಎಂದರು.

ವ್ಯವಸ್ಥಾಪನ ಸಮಿತಿ ಸದಸ್ಯರಾದ ಚಂದ್ರ ಆಚಾರ್ಯ, ವಿಶ್ವನಾಥ ಶೆಟ್ಟಿ, ಚಂದ್ರ ಪೂಜಾರಿ, ಸುಬ್ರಾಯ ಜೋಗಿ ಹಾಗೂ ಸ್ಥಳೀಯ ಮುಖಂಡರಾದ ದಿನೇಶ್ ಗಾಣಿಗ, ಪ್ರಸಾದ್ ಬಿಲ್ಲವ, ಮೃತರ ಕುಟುಂಬಿಕರು, ನಾಗರಿಕರು ಉಪಸ್ಥಿತರಿದ್ದರು.

(ವರದಿ- ಯೋಗೀಶ್ ಕುಂಭಾಸಿ)

ಈ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಗಳು-

ಕೋಟದಲ್ಲಿ ತಲವಾರು ದಾಳಿ: ಕ್ಷುಲ್ಲಕ ಕಾರಣಕ್ಕೆ ಹರಿಯಿತು ಇಬ್ಬರ ನೆತ್ತರು (Updated)

ಆಪ್ತಮಿತ್ರರಿಬ್ಬರ ಬರ್ಬರ ಕೊಲೆ ಪ್ರಕರಣ: ಕೋಟ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ (Video)

ಟಾಯ್ಲೆಟ್ ಪಿಟ್ ನಿರ್ಮಾಣದ ತಕರಾರು: ಆಪ್ತ ಮಿತ್ರರಿಬ್ಬರ ಮೇಲೆ ತಲವಾರು ಬೀಸಿದ ಹಂತಕರು

ಕೋಟ ಆಪ್ತಮಿತ್ರರನ್ನು ಕೊಂದ ಕೊಲೆಗಾರರ ಪತ್ತೆಗೆ ಚುರುಕುಗೊಂಡ ತನಿಖೆ

ಕೋಟದಲ್ಲಿ ಸ್ನೇಹಿತರಿಬ್ಬರ ಮರ್ಡರ್ ಕೇಸ್: ಆರೋಪಿಗಳಿಗಾಗಿ ಮುಂದುವರಿದ ಶೋಧ

ಕೋಟ ಅವಳಿ ಕೊಲೆ: ಹರೀಶ್ ರೆಡ್ಡಿ ಸಹಚರರು ಇನ್ನೂ ಭೂಗತ!

ಇನ್ನೂ ಪತ್ತೆಯಾಗದ ಕೊಲೆಗಾರರು; ನ್ಯಾಯಕ್ಕಾಗಿ ಆಗ್ರಹಿಸಿ ಫೆ.3ಕ್ಕೆ ಕೋಟ ಬಂದ್

ಕೋಟದಲ್ಲಿ ಅವಳಿ ಕೊಲೆ ಪ್ರಕರಣ: ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಬಂದ್, ಪ್ರತಿಭಟನೆ (Video)

ಕೋಟ ಅವಳಿ ಕೊಲೆ ಪ್ರಕರಣದ ಆರೋಪಿಗಳ ಬಂಧನ? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಅಂತೆಕಂತೆ!

ಕೋಟ ಡಬ್ಬಲ್ ಮರ್ಡರ್ ಕೇಸ್: ಇಬ್ಬರು ಆರೋಪಿಗಳ ಬಂಧನ

ಕೋಟ ಸ್ನೇಹಿತರ ಕೊಲೆಗೆ ಜಿ.ಪಂ ಸದಸ್ಯನೇ ಸೂತ್ರಧಾರಿ; ಪೊಲೀಸರಿಂದ 6 ಮಂದಿ ಬಂಧನ

ಕೋಟ ಅವಳಿ ಕೊಲೆಯ ಆರು ಆರೋಪಿಗಳಿಗೆ ಫೆ.15ರವರೆಗೆ ಪೊಲೀಸ್ ಕಸ್ಟಡಿ, ಮುಂದುವರಿಯಲಿದೆ ತನಿಖೆ

ಕೋಟ ಜೋಡಿ ಕೊಲೆ ಪ್ರಕರಣ ನಡೆದ ಮನೆಯಲ್ಲಿ ಮಹಜರು; ಕೃತ್ಯಕ್ಕೆ ಬಳಸಿದ್ದ 2 ಬೈಕ್ ವಶ

ಕೋಟ ಸ್ನೇಹಿತರಿಬ್ಬರ ಕೊಲೆ ಪ್ರಕರಣ: ರೆಡ್ಡಿಗೆ ಸಹಕರಿಸಿದ ಇಬ್ಬರು ಪೊಲೀಸರು ಅರೆಸ್ಟ್

ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡಿದ ಬಿಜೆಪಿಯವರಿಂದ ಕೊಲೆಗಡುಕರಿಗೆ ಬೆಂಬಲ: ಮಾಜಿ ಸಚಿವ ಸೊರಕೆ

ಕೋಟ ಸ್ನೇಹಿತರಿಬ್ಬರ ಕೊಲೆಯಲ್ಲಿ ಭಾಗಿಯಾದವನೂ ಸೇರಿ ಮತ್ತೆ ಐದು ಮಂದಿ ಬಂಧನ

Comments are closed.