ಕರಾವಳಿ

ಕೋಟ ಸ್ನೇಹಿತರಿಬ್ಬರ ಕೊಲೆ ಪ್ರಕರಣ: ರೆಡ್ಡಿಗೆ ಸಹಕರಿಸಿದ ಇಬ್ಬರು ಪೊಲೀಸರು ಅರೆಸ್ಟ್

Pinterest LinkedIn Tumblr

ಉಡುಪಿ: ಜ.26 ತಡರಾತ್ರಿ ಕೋಟ ಸಮೀಪದಲ್ಲಿ ನಡೆದ ಯತೀಶ್ ಕಾಂಚನ್ ಮತ್ತು ಭರತ್ ಶ್ರೀಯಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ಸಂಖ್ಯೆ ಎಂಟಕ್ಕೇರಿದೆ. ಪ್ರಕರಣದಲ್ಲಿ ರೌಡಿಶೀಟರ್ ಗಳಾದ ರೆಡ್ಡಿ ಸೋದರರಿಗೆ ಸಹಕರಿಸಿದ ಹಿನ್ನೆಲೆ ಇಬ್ಬರು ಡಿ.ಎ.ಆರ್ ಪೊಲೀಸರನ್ನು ಬಂಧಿಸಿ ಜೈಲಿಗಟ್ಟಲಾಗಿದೆ.

ಪವನ್ ಅಮಿನ್ ಎಪಿಸಿ 1432 ಮತ್ತು ವಿರೇಂದ್ರ ಅಚಾರ್ಯ ಎಪಿಸಿ 1423 ಬಂಧಿತ ಪೊಲೀಸ್ ಸಿಬ್ಬಂದಿಗಳು.

(ಕೊಲೆಯಾದ ಯತೀಶ್, ಭರತ್)

(ಈ ಹಿಂದೆ ಬಂಧಿತರಾದ ಆರೋಪಿಗಳು)

ಇಬ್ಬರು ಕೂಡ 2008 ರಲ್ಲಿ ಡಿಎಅರ್ ಉಡುಪಿಯಲ್ಲಿ ಕಾನ್ಸಟೇಬಲ್ ಆಗಿ ನೇಮಕಗೊಂಡಿದ್ದು ಇವರಿಗೆ ಹಲವು ವರ್ಷಗಳಿಂದ ಕೋಟ ಠಾಣೆ ವ್ಯಾಪ್ತಿಯ ರೌಡಿಶೀಟರುಗಳಾದ ಹರೀಶ್ ರೆಡ್ಡಿ, ರಾಜಶೇಖರ ರೆಡ್ಡಿ, ಮಹೇಶ ಗಾಣಿಗ, ಸಂತೋಷ ಕುಂದರ್ ಮುಂತಾದವರೊಂದಿಗೆ ಒಡನಾಟವಿತ್ತು. ಜ.26ರಂದು ಕೋಟದ ಮಣೂರುನಲ್ಲಿ ಭರತ್ ಮತ್ತು ಯತೀಶ್ ಎನ್ನುವ ಮಿತ್ರರನ್ನು ಟಾಯ್ಲೆಟ್ ಪಿಟ್ ವಿಚಾರವೊಂದರಲ್ಲಿ ತಲವಾರು ಬೀಸಿ ರಾಜಶೇಖರ ರೆಡ್ದಿ ಮತ್ತು ಸಹಚರರು ಕೊಲೆ ಮಾಡಿದ್ದು ಅಂದು ರಾತ್ರಿ ಈ ಕೇಸಿನ ಎಲ್ಲಾ ಪ್ರಮುಖ ಆರೋಪಿಗಳು ಪೊಲೀಸ್ ಸಿಬ್ಬಂದಿ ಪವನ್ ಅಮೀನನಿಗೆ ಸೇರಿದ ಹೆಬ್ರಿಯ ಕುಚ್ಚೂರಿನ ನಿವಾಸದಲ್ಲಿ ರಾತ್ರಿ ತಂಗಿದ್ದರು. ಮಾರನೇ ದಿನ ಬೆಳಿಗ್ಗೆ ಅರೋಪಿ ಹರೀಶ್ ರೆಡ್ಡಿ ಪವನ್ ಅಮೀನ್ ಗೆ ಫೋನ್ ಕರೆ ಮಾಡಿ ಒಂದು ಸಿಮ್ ಮತ್ತು ಮೊಬೈಲ್, ಹಣ ಮತ್ತು ಕೆಲವು ವಸ್ತುಗಳನ್ನು ಕಳುಹಿಸಿ ಕೊಡಲು ಕೇಳಿದ್ದು ಪವನ್ ಅಮೀನ್ ಈ ಸಂದರ್ಭ ಪ್ರಣವ್ ಭಟ್ ಎನ್ನುವವನ ಮೂಲಕ ಅವುಗಳನ್ನ ಕುಚ್ಚೂರಿನಲ್ಲಿ ತನ್ನ ಮನೆಯಲ್ಲಿರುವ ಆರೋಪಿಗಳಿಗೆ ತಲುಪಿಸಿದ್ದ. ನಂತರ ರಾತ್ರಿ ಇನ್ನೋರ್ವ ಸಿಬಂದಿ ವೀರೇಂದ್ರ ಅಚಾರ್ಯನೊಂದಿಗೆ ಸೇರಿ ಕಾರಿನ ವ್ಯವಸ್ತೆ ಮಾಡಿ ಅರೋಪಿಗಳನ್ನು ಅಗುಂಬೆ ಎನ್.ಆರ್. ಪುರ ಮಲ್ಲಂದೂರು ಎಂಬಲ್ಲಿನ ತನ್ನ ಸಂಬಂದಿಕರ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ತೆ ಮಾಡಿದ್ದ. ಜ.28ರಂದು ಅರೋಪಿಗಳನ್ನು ಮಲ್ಲಂದೂರಿನಲ್ಲಿಯೆ ಬಿಟ್ಟು ವೀರೇಂದ್ರ ಆಚಾರಿಯೊಂದಿಗೆ ವಾಪಾಸ್ಸು ಕಾರಿನಲ್ಲಿ ಬರುವಾಗ ಅರೋಪಿ ಹರೀಶ್ ರೆಡ್ಡಿ ಕೊಟ್ಟ ಮೊಬ್ಯೆಲ್ ಗಳನ್ನು ಮತ್ತು ಇತರೆ ವಸ್ತುಗಳನ್ನು ತಂದು ಬಚ್ಚಿಡಲು ಸಹಕರಿಸಿದ್ದ.

ಆರೋಪಿ ಪೊಲಿಸ್ ಪೇದೆಗಳಾದ ಪವನ್ ಅಮೀನ್ ಮತ್ತು ವೀರೇಂದ್ರ ಅಚಾರ್ಯ ಅವರಿಂದ ಕಾರು, ಮೊಬೈಲ್ ಮತ್ತು ಇತರೆ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಅವರನ್ನು ನ್ಯಾಯಾಧೀಶರೆದುರು ಹಾಜರುಪಡಿಸಿದ್ದು ಫೆ.15ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇನ್ನು ಪ್ರಕರಣಕ್ಕೆ ಸಂಬಂಧಿಸಿ ಈ ಮೊದಲು ಹರೀಶ್ ರೆಡ್ಡಿ, ರಾಜಶೇಖರ್ ರೆಡ್ಡಿ, ಮಹೇಶ್ ಗಾಣಿಗ, ರವೀಂದ್ರ, ರವಿಚಂದ್ರ, ಜಿ.ಪಂ ಸದಸ್ಯ ರಾಘವೆಂದ್ರ ಕಾಂಚನ್ ಬಂಧನವಾಗಿತ್ತು.

ಇದನ್ನೂ ಓದಿರಿ: 

ಕೋಟದಲ್ಲಿ ತಲವಾರು ದಾಳಿ: ಕ್ಷುಲ್ಲಕ ಕಾರಣಕ್ಕೆ ಹರಿಯಿತು ಇಬ್ಬರ ನೆತ್ತರು (Updated)

ಆಪ್ತಮಿತ್ರರಿಬ್ಬರ ಬರ್ಬರ ಕೊಲೆ ಪ್ರಕರಣ: ಕೋಟ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ (Video)

ಟಾಯ್ಲೆಟ್ ಪಿಟ್ ನಿರ್ಮಾಣದ ತಕರಾರು: ಆಪ್ತ ಮಿತ್ರರಿಬ್ಬರ ಮೇಲೆ ತಲವಾರು ಬೀಸಿದ ಹಂತಕರು

ಕೋಟ ಆಪ್ತಮಿತ್ರರನ್ನು ಕೊಂದ ಕೊಲೆಗಾರರ ಪತ್ತೆಗೆ ಚುರುಕುಗೊಂಡ ತನಿಖೆ

ಕೋಟದಲ್ಲಿ ಸ್ನೇಹಿತರಿಬ್ಬರ ಮರ್ಡರ್ ಕೇಸ್: ಆರೋಪಿಗಳಿಗಾಗಿ ಮುಂದುವರಿದ ಶೋಧ

ಕೋಟ ಅವಳಿ ಕೊಲೆ: ಹರೀಶ್ ರೆಡ್ಡಿ ಸಹಚರರು ಇನ್ನೂ ಭೂಗತ!

ಇನ್ನೂ ಪತ್ತೆಯಾಗದ ಕೊಲೆಗಾರರು; ನ್ಯಾಯಕ್ಕಾಗಿ ಆಗ್ರಹಿಸಿ ಫೆ.3ಕ್ಕೆ ಕೋಟ ಬಂದ್

ಕೋಟದಲ್ಲಿ ಅವಳಿ ಕೊಲೆ ಪ್ರಕರಣ: ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಬಂದ್, ಪ್ರತಿಭಟನೆ (Video)

ಕೋಟ ಅವಳಿ ಕೊಲೆ ಪ್ರಕರಣದ ಆರೋಪಿಗಳ ಬಂಧನ? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಅಂತೆಕಂತೆ!

ಕೋಟ ಡಬ್ಬಲ್ ಮರ್ಡರ್ ಕೇಸ್: ಇಬ್ಬರು ಆರೋಪಿಗಳ ಬಂಧನ

ಕೋಟ ಸ್ನೇಹಿತರ ಕೊಲೆಗೆ ಜಿ.ಪಂ ಸದಸ್ಯನೇ ಸೂತ್ರಧಾರಿ; ಪೊಲೀಸರಿಂದ 6 ಮಂದಿ ಬಂಧನ

ಕೋಟ ಅವಳಿ ಕೊಲೆಯ ಆರು ಆರೋಪಿಗಳಿಗೆ ಫೆ.15ರವರೆಗೆ ಪೊಲೀಸ್ ಕಸ್ಟಡಿ, ಮುಂದುವರಿಯಲಿದೆ ತನಿಖೆ

ಕೋಟ ಜೋಡಿ ಕೊಲೆ ಪ್ರಕರಣ ನಡೆದ ಮನೆಯಲ್ಲಿ ಮಹಜರು; ಕೃತ್ಯಕ್ಕೆ ಬಳಸಿದ್ದ 2 ಬೈಕ್ ವಶ

Comments are closed.