ಕರಾವಳಿ

ಅತ್ಯಂತ ಜನಪ್ರಿಯ ಆಹಾರವಾದ ರಾಗಿಯ ವೈಶಿಷ್ಯತೆಗಳು.

Pinterest LinkedIn Tumblr

ರಾಗಿ ಆತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನೊಳಗೊಂಡಿದೆ. ಇದು ಒಂದು ಉತ್ತಮ ಆಹಾರ ಬೆಳೆಯಾಗಿದ್ದು ಮಕ್ಕಳು ದೊಡ್ಡವರೆನ್ನದೆ ಉಪಯೋಗಿಸಬಹುದು. ರಾಗಿಮುದ್ದೆ ಅತ್ಯಂತ ಜನಪ್ರಿಯ ಆಹಾರ ಪ್ರಕಾರವಾಗಿದೆ.

ರಾಗಿ ಆಫ್ರಿಕ ಮಾತು ಏಷ್ಯಾದ ಹಲವಾರು ಒಣ ಪ್ರದೇಶಗಳಲ್ಲಿ ಬೆಳೆಯಲಾಗುವ ಒಂದು ಬಗೆಯ ಅಹಾರ ಧ್ಯಾನ ಇತಿಯೋಪಿಯ ಮೂಲಕ್ ಈ ವಾರ್ಷಿಕ ಬೆಳೆಯ ಸುಮಾರು 4000 ವರ್ಷಗಳ ಹಿಂದೆ ಭಾರತಕ್ಕೆ ತರಲಾಯಿತು.

ರಾಗಿಯ ಉಪಯೋಗಗಳು:
ರಾಗಿಹಿಟ್ಟಿನಿಂದ ರೊಟ್ಟಿ , ಮುದ್ದೆ, ಇಪ್ಪಿಟ್ಟು, ದೋಸೆ, ಗಂಜಿ, ಹಾಲ್ವಾಯಿ(ಸಿಹಿ) ಎಂಬ ತಿನಿಸುಗಳನ್ನು ತಯಾರಿಸುತ್ತಾರೆ. ಮಕ್ಕಳ ಪೌಷ್ಠಿಕ ಆಹಾರವೆಂದರೆ -ಒಡರಾಗಿಹಿಟ್ಟು.
ಇದು ಅತ್ಯಂತ ಮಿಟಮಿನ್ ಯುಕ್ತ ಅಹಾರ. ಜೀರ್ಣಸಿಕೊಳ್ಳುಲು ಸುಲಭ ಇದನ್ನು ಸೇವಿಸಿ ಬೇಳೆದ ಮಕ್ಕಳು ಬಹಳ ಆರೋಗ್ಯದಿಂದಲೂ ಗಟ್ಟಿ -ಮುಟ್ಟಾಗಿಯೂ ಇರುತ್ತಾರೆ. ರಾಗಿ ಮಾಲ್ಟನ್ನು ಸರಿಯಾಗಿ ಡಬ್ಬಿಗಳಲ್ಲಿ ಶೇಖರಿಸಿ ಮಾರುವು ಕಂಪೆನಿಗಳು ಚೆನ್ನಾಗಿ ಹಣ ಮಾಡುತ್ತಿವೆ. ಮಧಿಮೇಹ (ಡಾಯಾಬೆಟೆಸ್) ರೋಗಿಗಳಿಗೆ ಇದು ವೈದರಿಂದ ಶಿಫಾರಿಸ್ ಪಡೆದ ಪೇಯ. ರಾಗಿ ಅರಳನ್ನು ಹುರಿದು , ಅದನ್ನು ನುಣ್ಣಗೆ ಬೀಸಿ ಪುಡಿಮಾಡಿ, ಅದಕ್ಕೆ ಸರಿಯಾದ ಪ್ರಮಾಣದಲ್ಲಿ ಬೆಲ್ಲದ ಪುಡಿಬೆರೆಸಿ, ಹುಣಸೆಹುಳಿ, ಯಾಲಕ್ಕಿ ಪುಡಿ ಸೇರಿಸಿ, ಸೇವಿಸಿದರೆ,ಬಹಳ ಚೆನ್ನಾಗಿರುತ್ತದೆ. ಅರಳು ಪುಡಿಯನ್ನು ಮೊಸರಿನಲ್ಲಿ ಸೇರಿಸಿ, ಸಕ್ಕರೆ ಅಥವಾ ಬೆಲ್ಲದ ಜೊತೆಯೂ ಸೇವಿಸಬಹುದು.

ಪೋಷಕಾಂಶಗಳ ವಿವರ :
೧೦೦ ಗ್ರಾಂ ರಾಗಿಯಲ್ಲಿನ ಪೋಷಕಾಂಶಗಳ ವಿವರ ಕೆಳಕಂಡಂತಿದೆ:
ಪೋಷಕಾಂಶ – ಪ್ರತಿಶತ
ಪ್ರೋಟಿನ್ – ೭.೩ಗ್ರಾಂ
ಕೊಬ್ಬು – ೧.೩ ಗ್ರಾಂ
ಪಿಷ್ಟ – ೭೨ ಗ್ರಾಂ
ಖನಿಜಾಂಶ -೨.೭ ಗ್ರಾಂ
ಸುಣ್ಣದಂಶ -೩.೪೪ಗಾಂ
ನಾರಿನಂಶ —೩.೬ಗ್ರಾಂ
ಶಕ್ತಿ -೩೨೮ ಕಿ.ಕ್ಯಾ

ನಿಮಗೆ ರಾಗಿಯ ಬಗ್ಗೆ ತಿಳಿದಿದೆಯೇ ? ರಾಗಿ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ ಏಕೆಂದರೆ ಅದರ ರುಚಿ ಸಪ್ಪೆಯಾಗಿರುವುದರಿಂದ ಆದರೆ ರಾಗಿ ನಮ್ಮದೇಹದಲ್ಲಿ ಉಂಟುಮಾಡುವ ಜಾದೂ ನಿಮಗೆ ತಿಳಿಯಿತೆಂದರೆ

ಇಂದೇ ನೀವು ಅದನ್ನು ಬಳಸಲು ಪ್ರಾರಂಭಿಸುವಿರಿ. ಹೆಚ್ಚಾಗಿ ರಾಗಿಯನ್ನು ಅಗೆಯುವುದಕ್ಕಿಂತ ನುಂಗುವುದು ವಾಡಿಕೆ. ರಾಗಿ ಅಂಬಲಿ, ರಾಗಿ ಮುದ್ದೆ, ರಾಗಿ ಕಷಾಯ,ರಾಗಿ ರೊಟ್ಟಿ ಹೀಗೆ ಒಂದಾ ಎರಡ ರಾಗಿಯ ರೆಸಿಪಿಗಳು. ರಾಗಿಯಿಂದ ತಯಾರಿಸುವ ಪ್ರತಿಯೊಂದು ಅಹಾರ ಪದಾರ್ಥವು ದೇಹಕ್ಕೆ ತಂಪು ಮತ್ತು ಆರೋಗ್ಯ ವರ್ಧಕ ರಾಗಿ ಧ್ಯಾನಗಳಲ್ಲಿ ಶ್ರೇಷ್ಠವಾದುದು. ಅದಕ್ಕಿರುವ ಮಹತ್ವ ಘನತೆ ಬೆರೆ ಧ್ಯಾನಗಳಿಗಿಲ್ಲ ರಾಗಿಯಿಂದ ಮಾಡಲಾದ ರಾಗಿಮುದ್ದೆ ದೇಹಕ್ಕೆ ತುಂಬಾ ತಂಪು.

ತಮ ದೇಹ ತೂಕವನ್ನು ಇಳಿಸುವ ಯೋಜನೆ ಇದ್ದವರು ರಾಗಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳಲೆಬೇಕು, ಸಸ್ಯಾಹಾರಿಗಳಿಗೆ ಪ್ರೋಟೀನ್ ಶ್ರೋಮಂತವಾಗಿರುವ ರಾಗಿ ದೇಹ ತೂಕ ಇಳಿಸುವವರಿಗೆ ವರದಾನವೇ ಸರಿ. ದಕ್ಷಿಣ ಭಾರತದಲ್ಲಿ ರಾಗಿ ಮುದ್ದೆ ತುಂಬಾ ಜನಪ್ರಿಯ. ಕರ್ನಾಟಕದಲ್ಲಂತೂ ಪ್ರತಿ ದಿನ ರಾಗುಇ ಮುದ್ದೆಯನ್ನು ತಿಂದೇ ತಮ್ಮ್ ದೈನಂದಿನ ಕಾರ್ಯವನ್ನು ಪ್ರಾರಂಭಿಸುವವರು ಬಹುತೇಕ ಮಂದಿ. ರಾಗಿ ಮುದ್ದೆಯ ಇನ್ನಷ್ಟು ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ.

* ದೇಹದ ಕೊಬ್ಬನ್ನು ಹಾಗೂ ತೂಕ ಇಳಿಸುವವಲ್ಲಿ ಸಹಕಾರಿ
* ಮೂಳೆಗಳಿಗೆ ಉತ್ತಮ್ : ಮೂಳೆಗಳನ್ನು ಬಲಪಡಿಸುವ ಶಕ್ತಿಯನ್ನು ಇದು ಹೊಂದಿದೆ.ಇದರಲ್ಲಿ ಹೆಚ್ಚು ಪ್ರಮಾಣದ ಕ್ಯಾಲ್ಯಿಯಂ ಮತ್ತು ಮಿಟಮಿನ್ ಡಿ ಇಇದು ಮಕ್ಕಳಿಗೆ ಹಾಗೂ ವೃದ್ಧರಿಗೆ ಅವಶ್ಯಕವಾಗಿರುವ ಕೆಲವೊಂದು ಪ್ರಮುಖ ಅಂಶಗಳನ್ನು ಇದು ಹೊಂದಿದೆ.
* ಮಧುಮೇಹಿಗಳಿಗೆ ಸೂಕ್ತ : ಮಧುಮೇಹದ ಮೆಲ್ಟಿಟಸ್ ಮತ್ತು ಜೀರ್ಣಾವ್ಯೂಹದ ಅಸ್ಪಸ್ಥತೆಗಳ ಅಪಾಯ ಮಟ್ಟವನ್ನು ರಾಗಿ ಮುದ್ದೆ ಕಡಿಮೆ ಮಾಡುತ್ತದೆ.
*ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
* ನೀವು ಒಬ್ಬ ಅನೀಮಿಕ್ ಆಗಿದ್ದರೆ.
* ನಿಮಗೆ ರಿಲ್ಯಕ್ಸ್ ಆಗಲು ಸಹಕಾರಿ
*ದೇಹವನ್ನು ತಂಪುಗೊಳಿಸುತ್ತದೆ.
*ಸದೃಢತೆಗೆ
*ಮಲಬದ್ಧತೆಗೆ ಉಪಯೋಗಕಾರಿ
*ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿದ್ದರೆ.
* ನೂತನ ತಾಯಂದಿರಿಗೆ ಹಿಮೋಗ್ಲೋಬೀನ್ ಮಟ್ಟವನ್ನು ಸುಧಾರಿಸಲು ಮತ್ತು ಹಾಲಿನ ಉತ್ಪಾದನೆಯಲ್ಲಿ ರಾಗಿ ಸಹಕಾರಿಯಾದುದು.
* ರಾಗಿ ತಂಪು ಗುಣ ಹೊಂದಿರುವ ಸ್ವಾತಿಕ ಆಹಾರ

” ಕ್ಯಾಲ್ಸಿಯಂ ಖನಿಜಾಂಶಗಳು, ಪ್ರೋಟಿನ್ ಹೇರಳವಾಗಿರುವ ರಾಗಿ ಪೋಷಕಾಂಶಗಳ ಆಗರ.
ಅಬಾಲವೃದ್ಧರಿಗೆ ಆದರ್ಶಪ್ರಾಯ ಆಹಾರ. ವೈದರು ಕೋಡುವ ಮಿಟಮಿನ್ ಮಾತ್ರೆಗಳನ್ನು ನುಂದುವ ಬದಲು ರಾಗಿ ಗಂಜಿಯನ್ನು ನಿಯಮಿತವಾಗಿ ಚಿಟಿಕೆ ಉಪ್ಪು ಹಾಗೂ ಮಜ್ಜಿಗೆಯೊಂದಿಗೆ ಸೇವಿಸಿ ಬಳಲಿಕೆ ಮಾಯವಾಗಿ ಶರೀರವು ಹಾಯೆನಿಸುವುದು. ಇದರಲ್ಲಿರುವ ಪೋಷಕಾಂಶಗಳು ಬಹುಬೇಗನೆ ಜೀರ್ಣವಾಗುವಂಥವು. ಹಾಗಾಗಿ ಪುಟ್ಟ ಮಗುವಿಗೆ ೬ ತಿಂಗಳಾದೊಡನೆ ರಾಗೀಮಣ್ಣಿ ಕೊಡಬಹುದಾಗಿದೆ.

Comments are closed.