ಕುಂದಾಪುರ: ಇತ್ತೀಚೆಗೆ ತೆರೆಕಂಡು ಇತಿಹಾಸ ಸೃಷ್ಟಿಸಿದ ‘ಕಾಂತಾರ’ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚಿದ ಬಾಲ ಪ್ರತಿಭೆ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಸಮೀಕ್ಷಾ ಸುರೇಶ್ ಹಕ್ಲಾಡಿ ಅವರಿಗೆ ಡಾ.ಶಿವರಾಮ ಕಾರಂತ ಬಾಲ ಪುರಸ್ಕಾರವನ್ನು ನ.30ರಂದು ಡಾ.ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಪ್ರದಾನಿಸಲಾಯಿತು.

ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯಿತಿ, ಮಣೂರು ಗೀತಾನಂದ ಫೌಂಡೇಷನ್, ಉಸಿರು ಸಂಸ್ಥೆ, ಬಾಳ್ಕುದ್ರು ಕೈಂಡ್ ಹಾರ್ಟ್ಸ್, ಬಾರ್ಕೂರು ಮೂಡುಕೇರಿ ವೇಣುಗೋಪಾಲ ಎಜುಕೇಷನಲ್ ಸೊಸೈಟಿ, ಕೋಟತಟ್ಟು ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ವತಿಯಿಂದ ನೀಡುವ 5ನೇ ವರ್ಷದ ಡಾ.ಶಿವರಾಮ ಕಾರಂತ ಬಾಲ ಪುರಸ್ಕಾರ ಇದಾಗಿದೆ. ಸಮೀಕ್ಷಾ ಅವರಿಗೆ ಉದ್ಯಮಿ ಹಾಗೂ ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ್ ಸಿ ಕುಂದರ್ ಹಾಗೂ ಗಣ್ಯರು ಪ್ರಶಸ್ತಿ ಪ್ರದಾನಿಸಿ ಗೌರವಿಸಿದರು.
Comments are closed.