ಕರಾವಳಿ

ಕೋಟ ಅವಳಿ ಕೊಲೆ ಪ್ರಕರಣದ ಆರೋಪಿಗಳ ಬಂಧನ? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಅಂತೆಕಂತೆ!

Pinterest LinkedIn Tumblr

ಕುಂದಾಪುರ: ಕೋಟ ಡಬ್ಬಲ್ ಮರ್ಡರ್ ಪ್ರಕರಣ ಹಿನ್ನೆಲೆಯಲ್ಲಿ ಹೊಸನಗರ ಬಳಿ ಮೂವರು ಆರೋಪಿಗಳ ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿ ಹರೀಶ್ ರೆಡ್ಡಿ ಸೆರೆ ಸಿಕ್ಕಿದ್ದು, ಜೊತೆಗೆ ಇನ್ನೊಬ್ಬ ಪೊಲೀಸರ ವಶದಲ್ಲಿದ್ದಾರೆ ಎನ್ನಲಾಗಿದೆ.

(ಕೊಲೆಯಾದ ಆಪ್ತಮಿತ್ರರು)

ರೌಡಿ ಶೀಟರ್ ಹರೀಶ್ ರೆಡ್ಡಿ ಸಹೋದರರು ಭರತ್ ಶ್ರೀಯಾನ್ ಹಾಗೂ ಯತೀಶ್ ಕಾಂಚನ್ ಎಂಬವರ ಕೊಚ್ಚಿ ಕೊಲೆ ಮಾಡಿದ ನಂತರ ತಲೆ ಮರೆಸಿಕೊಂಡಿದ್ದರು.

ಆಪ್ತ ಸ್ನೇಹಿತರ ಕೊಲೆ ಜ.26ಶನಿವಾರ ನಡೆದಿದ್ದು, ಕೊಲೆಗಾರರನ್ನು ಇನ್ನೂ ಬಂಧಿಸಿಲ್ಲ ಎಂದು ಭಾನುವಾರ ಕೋಟದಲ್ಲಿ ಬಾರೀ ಪ್ರತಿಭಟನೆ ನಡೆಸಲಾಗಿತ್ತು.
ಕೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಗಳ ವರೆಗೆ ಪತ್ತೆಯಾಗದ ಆರೋಪಿಗಳು ಕೋಟ ಬಂದ್ ನಡೆಸಿದ ಮಾರನೆಯ ದಿನ ಪತ್ತೆಯಾಗಿದ್ದಾರೆಂಬ ‌ಊಹಾಪೋಹದ ಬಗ್ಗೆ ಅನುಮಾನಗಳು ಸಾರ್ವಜನಿಕರಲ್ಲಿ ಹುಟ್ಟಿದೆ.

ಇನ್ನು ಈವರೆಗೆ ಈ ಪ್ರಕರಣದ ಯಾವುದೇ ಆರೋಪಿಗಳ ಬಂಧನವಾಗಿಲ್ಲ, ಶೀಘ್ರದಲ್ಲೇ‌ ಬಂಧಿಸಲಾಗುತ್ತದೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರ್ಗಿ ಹೇಳಿದ್ದಾರೆ.

Comments are closed.