ಕರಾವಳಿ

ಕೋಟ ಅವಳಿ ಕೊಲೆ: ಹರೀಶ್ ರೆಡ್ಡಿ ಸಹಚರರು ಇನ್ನೂ ಭೂಗತ!

Pinterest LinkedIn Tumblr

ಕುಂದಾಪುರ: ಕೋಟ ಅವಳಿ ಕೊಲೆ ನಂತರ ಪರಾರಿಯಾಗಿದ್ದ ರೌಡಿ ಶೀಟರ್ ಹರೀಶ್ ರೆಡ್ಡಿ ಸಹಚರರ ಸುಳಿವು ಕೊಲೆ ನಡೆದು ಐದು ದಿನ ಕಳೆದರೂ ಪತ್ತೆಯಾಗಿಲ್ಲ. ಕೋಟದ ಯತೀಶ್ ಹಾಗೂ ಭರತ್ ಎನ್ನುವ ಸ್ನೇಹಿತರ ಕೊಲೆ ಜ.26 ರಾತ್ರಿ ನಡೆದಿತ್ತು.

ಕೊಲೆ ಆಪಾದಿತರು ತಪ್ಪಿಸಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಸಿದ್ದಾಪುರ ಬಳಿ ಕೊನೆಯ ಬಾರಿ ಮೂಬೈಲ್ ಟವರ್ ಸಿಗ್ನಲ್ಲಿಗೆ ಸಿಕಿದ್ದಾರೆ ಎನ್ನಲಾಗಿದೆ. ಹರೀಶ್ ರೆಡ್ಡಿ ಸಂಬಂಧಿಕರು ಶಿವಮೊಗ್ಗದಲ್ಲಿದ್ದು, ಅಲ್ಲಿ ತಲೆ ಮರೆಸಿಕೊಂಡಿರಬಹುದೆಂದು ಹೇಳಲಾಗುತ್ತಿದೆ. ಆಪಾದಿತರು ಪೊಲೀಸರಿಗೆ ಸರೆಂಡರ್ ಆಗಿದ್ದಾರೆ ಎಂಬ ಸುದ್ದಿ ಹುಟ್ಟಿಕೊಳ್ಳುತ್ತಿದ್ದು, ಯಾವುದು ಸತ್ಯ ಹಾಗೂ ಯಾವುದು ಸುಳ್ಳು ಎಂಬ ಗೊಂದಲದಲ್ಲಿ ನಾಗರಿಕರು ಇದ್ದಾರೆ.
ಈ ನಡುವೆ ಕೊಲೆಗಾರರ ಪತ್ತೆಗೆ ಪ್ರಾಮಾಣಿಕ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮಣ ನಿಂಬರ್ಗಿ ಹೇಳಿದ್ದಾರೆ. ಕೊಲೆಗಾರರ ಪತ್ತೆಗೆ ರಚಿಸಿದ ವಿಶೇಷ ತಂಡ ಬೇರೆ ಬೇರೆ ಕಡೆ ಕೊಲೆಗಾರರ ಪತ್ತೆಗೆ ತೆರಳಿದ್ದು, ಅದಷ್ಟು ಬೇಗ ಬಂಧಿಸುವ ಭರವಸೆ ಪೊಲೀಸರು ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿರಿ: 

ಕೋಟದಲ್ಲಿ ತಲವಾರು ದಾಳಿ: ಕ್ಷುಲ್ಲಕ ಕಾರಣಕ್ಕೆ ಹರಿಯಿತು ಇಬ್ಬರ ನೆತ್ತರು (Updated)

ಆಪ್ತಮಿತ್ರರಿಬ್ಬರ ಬರ್ಬರ ಕೊಲೆ ಪ್ರಕರಣ: ಕೋಟ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ (Video)

ಟಾಯ್ಲೆಟ್ ಪಿಟ್ ನಿರ್ಮಾಣದ ತಕರಾರು: ಆಪ್ತ ಮಿತ್ರರಿಬ್ಬರ ಮೇಲೆ ತಲವಾರು ಬೀಸಿದ ಹಂತಕರು

ಕೋಟ ಆಪ್ತಮಿತ್ರರನ್ನು ಕೊಂದ ಕೊಲೆಗಾರರ ಪತ್ತೆಗೆ ಚುರುಕುಗೊಂಡ ತನಿಖೆ

ಕೋಟದಲ್ಲಿ ಸ್ನೇಹಿತರಿಬ್ಬರ ಮರ್ಡರ್ ಕೇಸ್: ಆರೋಪಿಗಳಿಗಾಗಿ ಮುಂದುವರಿದ ಶೋಧ

Comments are closed.