ಕರಾವಳಿ

ಆಪ್ತಮಿತ್ರರಿಬ್ಬರ ಬರ್ಬರ ಕೊಲೆ ಪ್ರಕರಣ: ಕೋಟ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ (Video)

Pinterest LinkedIn Tumblr

ಕುಂದಾಪುರ: ಶೌಚಾಲಯ ಗುಂಡಿ ತೆಗೆಯುವ ವಿಚಾರದ ತಗಾದೆಯಲ್ಲಿ ಗೆಳೆಯನ ಸಹಕಾರಕ್ಕೆ ತೆರಳಿ ರೌಡಿ ಶೀಟರ್ ಹಾಗೂ ಆತನ ಸಹಚರರಿಂದ ಬರ್ಬರವಾಗಿ ಕೊಲೆಯಾದ ಆಪ್ತ ಮಿತ್ರರಾದ ಯತೀಶ್ ಕಾಂಚನ್ (26) ಹಾಗೂ ಕೋಟ ಬಾರಿಕೆರೆ ನಿವಾಸಿ ಭರತ್ ಶ್ರಿಯಾನ್ (25) ಮೃತದೇಹವನ್ನು ಕೋಟ ಬಸ್ ನಿಲ್ದಾಣದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಅರ್ದಗಂಟೆಗಳ ಕಾಲವಿಟ್ಟು ನ್ಯಾಯಕ್ಕಾಗಿ ಪ್ರತಿಭಟಿಸಲಾಯಿತು.

ಮಣಿಪಾಲದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸುಮಾರು 3.15ಕ್ಕೆ ಕೋಟಕ್ಕೆ ಶವವನ್ನು ಅಂಬುಲೆನ್ಸ್ ಮೂಲಕ ತರಲಾಗಿದ್ದು ಈ ವೇಲೆ ಕೋಟ ಬಸ್ ನಿಲ್ದಾಣ ಸಮೀಪದ ಜಮಾಯಿಸಿದ ಸಾರ್ವಜನಿಕರು ಹಾಗೂ ಕುಟುಂಬಿಕರು ಶವವನ್ನು ಹೆದ್ದಾರಿಯಲ್ಲಿಟ್ಟು ಪ್ರತಿಭಟಿಸಿದರು. ಸ್ಥಳಕ್ಕೆ ಜಿಲ್ಲಾ ಎಸ್ಪಿ ಆಗಮಿಸುವಂತೆಯೂ ಆಗ್ರಹಿಸಿದರು. ಹೆದ್ದಾರಿಯಲ್ಲಿ ಪ್ರತಿಭಟಿಸಿದ ಕಾರಣ ಪೊಲೀಸರು ಮನವೊಲಿಸಲೂ ಮುಂದಾದರೂ ಕೂಡ ಅದಕ್ಕೆ ಒಪ್ಪದ ನಾಗರಿಕರ ಬೇಡಿಕೆಯಂತೆಯೇ ಕೊನೆಗೂ ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿ ಪ್ರತಿಭಟನಾ ಸ್ಥಳಕ್ಕಾಗಮಿಸಿದರು.

ಬಳಿಕ ಮಾತನಾಡಿದ ಅವರು ಉಡುಪಿ ಡಿವೈಎಸ್ಪಿ ಜಯಶಂಕರ್ ನೇತ್ರತ್ವದಲ್ಲಿ ಈಗಾಗಲೇ ನಾಲ್ಕು ತನಿಖಾ ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಳ್ಳಲಾಗಿದೆ. ಆರೋಪಿಗಳು ಯಾರೆಂಬುದು ತಿಳಿದಿರುವ ಕಾರಣ ಅವರ ಬಂಧನ ಅತಿ ಶೀಘ್ರದಲ್ಲಿ ಆಗುವ ಭರವಸೆಯಿದೆ. ಹರೀಶ್ ರೆಡ್ಡಿ ಸಹಚರರಾದ ರಾಜಶೇಖರ್ ರೆಡ್ಡಿ, ಚಂದ್ರಶೇಖರ್ ರೆಡ್ಡಿ ಇತರರು ಈ ಕುಕ್ರತ್ಯ ನಡೆಸಿದ್ದು ಶೀಘ್ರವೇ ಬಂಧಿಸುತ್ತೇವೆಂದರು.

ಶನಿವಾರ ತಡರಾತ್ರಿ ಕೋಟ ಸಮೀಪದ ಮಣೂರು ಬಳಿಯಲ್ಲಿ ಈ ದುರ್ಘಟನೆ ನಡೆದಿತ್ತು. ಯತೀಶ್ ಹಾಗೂ ಭರತ್ ಎಂಬಿಬ್ಬರ ಸ್ನೇಹಿತನಾದ ಲೋಹಿತ್ ತನ್ನ ಮನೆಯ ಜಾಗದ ತಕರಾರಿನಲ್ಲಿ ರೌಡಿಶೀಟರ್ ಹರೀಶ್ ರೆಡ್ಡಿ ಹಾಗೂ ಆತನ ಸಹಚರರೊಂದಿಗೆ ದ್ವೇಷ ಕಟ್ಟಿಕೊಂಡಿದ್ದು ಶನಿವಾರ ರಾತ್ರಿ ರೆಡ್ಡಿ ತನ್ನ ಗ್ಯಾಂಗ್ ಜೊತೆ ಲೋಹಿತ್ ಮನೆಗೆ ಎಂಟ್ರಿ ಕೊಟ್ಟಿದ್ದಾನೆ. ರೆಡ್ಡಿ ಗ್ಯಾಂಗ್ ಮನೆಯ ಹೊರಗೆ ನಿಂತು ಸಮಸ್ಯೆ ಮಾಡಲಾರಂಭಿಸಿದಾಗ ಬೆದರಿದ ಲೋಹಿತ್ ತನ್ನ ಸ್ನೇಹಿತರಾದ ಭರತ್ ಮತ್ತು ಯತೀಶನಿಗೆ ಅರೆ ಮಾಡಿ ಕರೆಸಿಕೊಳ್ಳುತ್ತಾನೆ. ಇರ್ವರು ಲೋಹಿತ್ ಮನೆಗೆ ಬಂದಾಗ ಅಲ್ಲಿದ್ದ ಹರೀಶ್ ರೆಡ್ಡಿ ಹಾಗೂ ಆತನ ಸೋದರರಾದ ರಾಜಶೇಖರ್ ರೆಡ್ಡಿ, ಚಂದ್ರಶೇಖರ್ ರೆಡ್ಡಿ ಹಾಗೂ ಇತರ ಸಹಚರರು ಲಾಂಗ್ ಬೀಸಿ ಇಬ್ಬರನ್ನು ಕೊಲೆಗೈಯುತ್ತಾರೆ.

– ವರದಿ- ಯೋಗೀಶ್ ಕುಂಭಾಸಿ

Related News-

ಕೋಟದಲ್ಲಿ ತಲವಾರು ದಾಳಿ: ಕ್ಷುಲ್ಲಕ ಕಾರಣಕ್ಕೆ ಹರಿಯಿತು ಇಬ್ಬರ ನೆತ್ತರು (Updated)

ಟಾಯ್ಲೆಟ್ ಪಿಟ್ ನಿರ್ಮಾಣದ ತಕರಾರು: ಆಪ್ತ ಮಿತ್ರರಿಬ್ಬರ ಮೇಲೆ ತಲವಾರು ಬೀಸಿದ ಹಂತಕರು

Comments are closed.