ಕರಾವಳಿ

ಕೋಟದಲ್ಲಿ ತಲವಾರು ದಾಳಿ: ಕ್ಷುಲ್ಲಕ ಕಾರಣಕ್ಕೆ ಹರಿಯಿತು ಇಬ್ಬರ ನೆತ್ತರು (Updated)

Pinterest LinkedIn Tumblr

ಕುಂದಾಪುರ: ಜಾಗದ ತಕರಾರೊಂದಕ್ಕೆ‌‌‌ ಸಂಬಂಧಿಸಿದಂತೆ ಶನಿವಾರ ತಡರಾತ್ರಿ ಉಡುಪಿ ಜಿಲ್ಲೆಯ ಕೋಟ ಸಮೀಪ ತಲವಾರು ದಾಳಿ ನಡೆದಿದ್ದು ದಾಳಿಗೊಳಗಾಗಿ ಇಬ್ಬರು ಯುವಕರು ಜೀವನ್ಮರಣ ಹೋರಾಟ ನಡೆಸುತ್ತಿದ್ದವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಇಬ್ಬರು ಮೃತಪಟ್ಟಿದ್ದಾರೆಂದು ನಂಬಲರ್ಹ ಮೂಲಗಳು ತಿಳಿಸಿದೆ.

ಇಲ್ಲಿಗೆ ಸಮೀಪದ ನಿವಾಸಿಗಳಾದ ಯತೀಶ್ ಹಾಗೂ ಭರತ್ ಎಂಬಿಬ್ಬರ ಮೇಲೆ ದಾಳಿ ನಡೆದಿದ್ದು ದಾಳಿಯಿಂದ ಇಬ್ಬರು ಗಂಭೀರವಾಗಿ‌ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆಯಾದರೂ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ‌ ಎನ್ನಲಾಗಿದೆ.

 (ಸಂಗ್ರಹ ಚಿತ್ರ)

ಕೋಟ ಬಳಿಯಲ್ಲಿ ಈ ಘಟನೆ ನಡೆದಿದೆ. ನಾಲ್ಕೈದು ಮಂದಿ‌ಯಿದ್ದ ದುಷ್ಕರ್ಮಿಗಳ ತಂಡ ಈ ದುಷ್ಕೃತ್ಯ ನಡೆಸಿದೆ ಎನ್ನಲಾಗಿದೆ. ಕೋಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ಮುಂದುವರೆದಿದೆ.

Updated: 

ದುಷ್ಕರ್ಮಿಗಳಿಂದ ತಲವಾರು ದಾಳಿಗೊಳಗಾಗಿ ಮೃತಪಟ್ಟ ಯತೀಶ್ ಕಾಂಚನ್ ಈ ಹಿಂದೆ ಮಾಧ್ಯಮದಲ್ಲಿ ಕೆಲಸ ಮಾಡಿದ್ದು ಬಳಿಕ ಇತರೆ ವ್ಯವಹಾರ ಮಾಡುತ್ತಿದ್ದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿಯವರ ಆಪ್ತ ಸಹಾಯಕರಗಿದ್ದರು. ಭರತ್ ರಿಕ್ಷಾ ಚಾಲಕರಾಗಿದ್ದು ಇಬ್ಬರು ಕೂಡ ಆತ್ಮೀಯ ಸ್ನೇಹಿತರಾಗಿದ್ದರು.

ಲೋಹಿತ್ ಎಂಬವರ ಹಾಗೂ ಹರೀಶ್ ರೆಡ್ಡಿ ಎನ್ನುವ ವ್ಯಕ್ತಿ ನಡುವೆ ಜಾಗದ ತಕರಾರಿದ್ದು ಶೌಚಾಲಯ ಗುಂಡಿ ತೆಗೆಯುವ ವಿಚಾರದಲ್ಲಿ ಇಬ್ಬರ ಕುಟುಂಬದ ನಡುವೆ ಕಲಹವಿತ್ತು. ಈ ಹಿನ್ನೆಲೆ ಹರೀಶ್ ರೆಡ್ಡಿ ಹಾಗೂ ಸಹಚರರು ಲೋಹಿತ್ ಅವರಿಗೆ ಬೆದರಿಕೆಯೊಡ್ಡಲು ಏಳೆಂಟು ಮಂದಿಯೊಂದಿಗೆ ತಲವಾರು ಹಿಡಿದು ಬಂದಿದ್ದು ಜಗಳ ತಪ್ಪಿಸಲು ಬಂದ ಪ್ರಾಣ ಸ್ನೇಹಿತರು ಕೊಲೆಯಾಗಿದ್ದಾರೆ.

Related News-

ಆಪ್ತಮಿತ್ರರಿಬ್ಬರ ಬರ್ಬರ ಕೊಲೆ ಪ್ರಕರಣ: ಕೋಟ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ (Video)

ಟಾಯ್ಲೆಟ್ ಪಿಟ್ ನಿರ್ಮಾಣದ ತಕರಾರು: ಆಪ್ತ ಮಿತ್ರರಿಬ್ಬರ ಮೇಲೆ ತಲವಾರು ಬೀಸಿದ ಹಂತಕರು

Comments are closed.