ಕರಾವಳಿ

ಚಿನ್ನದ ಸರಕಳ್ಳತನ : 30.000 ರೂ ಮೌಲ್ಯದ ಚಿನ್ನದ ಸರ ಸಮೇತಾ ಮನೆಗೆಲಸದಾಕೆ ಬಂಧನ

Pinterest LinkedIn Tumblr

ಮಂಗಳೂರು : ನಗರ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಪ್ರಕರಣದ ಆರೋಪಿ ಮನೆಗೆಲಸದಾಕೆಯನ್ನು ನಗರದ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆಯುವಲ್ಲಿ ಉರ್ವ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೊಟ್ಟಾರ ಸಮೀಪದ ಜೆ.ಬಿ ಲೋಬೋ 2 ನೇ ಅಡ್ಡ ರಸ್ತೆ ನಿವಾಸಿ ಕುಮಾರಿ ಸೌಂದರ್ಯ ( 18 ) ಬಂಧಿತ ಆರೋಪಿ. ಆರೋಪಿ ವಶದಿಂದ ಕಳವು ಮಾಡಿದ ಸುಮಾರು 8.200 ಗ್ರಾಂ ತೂಕದ ಸುಮಾರು 30.000/ ರೂ ಮೌಲ್ಯದ ಚಿನ್ನದ ಸರವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ದಿನಾಂಕ 04-01-2019 ರಂದು ಶ್ರೀಮತಿ ದೀಪ್ತಿ ಎಂಬವರು ತನ್ನ ಗಂಡನೊಂದಿಗೆ ಕೆಲಸದಾಕೆ ಸೌಂದರ್ಯ ಎಂಬಾಕೆಯನ್ನು ಜೊತೆಯಲ್ಲಿ ಕರೆದುಕೊಂಡು ಕಾರವಾರದ ಸಂಬಂಧಿಕರ ವಿವಾಹದ ಔತಣಕೂಟಕ್ಕೆ ತೆರಳಿದವರು ದಿನಾಂಕ 05-01-2019 ರಂದು ಗೋವಾ ಮುಂತಾದ ಕಡೆ ಸಂಚರಿಸಿ, ದಿನಾಂಕ 08-01-2019 ರಂದು ಮಂಗಳೂರಿನ ಮನೆಗೆ ರಾತ್ರಿ 8.00 ಗಂಟೆಗೆ ತಲುಪಿ ಕಾರಿನ ಡ್ಯಾಶ್ ಬೋರ್ಡ್‌ ನಲ್ಲಿ ಇರಿಸಿದ್ದ ಚಿನ್ನದ ಸರವನ್ನು ತೆಗೆಯಲು ನೋಡಿದಾಗ ಚಿನ್ನದ ಸರ ಇರದೇ ಇದ್ದ ಬಗ್ಗೆ ಶ್ರೀಮತಿ ದೀಪ್ತಿ ರವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು.

ಆರೋಪಿತಳ ತಂದೆ ತಾಯಿ ಮೂಲತಃ ಬಾಗಲಕೋಟೆ ಜಿಲ್ಲೆಯವರಾಗಿದ್ದು, ಉದ್ಯೋಗದ ನಿಮಿತ್ತ ಮಂಗಳೂರಿನಲ್ಲಿ ನೆಲೆಸಿರುತ್ತಾರೆ. ಆರೋಪಿಯ ವಿರುದ್ದ ಬೆಂಗಳೂರಿನ ಠಾಣೆಯೊಂದರಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದು, ಜಾಮೀನಿನ ಮೇಲೆ ಹೊರಬಂದ ಬಳಿಕ ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿದೆ.

ಸದ್ರಿ ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಉರ್ವ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು

Comments are closed.