ಕರಾವಳಿ

ಕೋಟ ಆಪ್ತಮಿತ್ರರನ್ನು ಕೊಂದ ಕೊಲೆಗಾರರ ಪತ್ತೆಗೆ ಚುರುಕುಗೊಂಡ ತನಿಖೆ

Pinterest LinkedIn Tumblr

ಉಡುಪಿ: ಜಿಲ್ಲೆಯ ಕೋಟ ಸಮೀಪದ ಮಣೂರು ಲೋಹಿತ್ ಪೂಜಾರಿ ಮನೆ ಬಳಿ ಶನಿವಾರ ರಾತ್ರಿ ಹರೀಶ್ ರೆಡ್ಡಿ ತಂಡದಿಂದ ಹತರಾದ ಭರತ್ ಹಾಗೂ ಯತೀಶ್ ಕೊಲೆ ಪ್ರಕರಣ ಬೇಧಿಸಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಬೇರೆ ಬೇರೆ ಸ್ಥಳದಲ್ಲಿ ಕೊಲೆಗಾರರ ಪತ್ತೆಗೆ ತಂಡ ತೆರಳಿದೆ.

ಅವಳಿ ಕೊಲೆಗೆ ಸಂಬಂಧಿಸಿದಂತೆ ಅನೇಕರ ವಿಚಾರಣೆ ನಡೆಸಿದಲ್ಲದೆ ಇದರ ಜಾಡು ಪತ್ತೆಗೆ ಡಿವೈಎಸ್ಪಿ ಜಯಶಂಕರ್ ನೇತ್ರತ್ವದಲ್ಲಿ ಹಲವು ತಂಡವಾಗಿ ಕಾಯೋನ್ಮುಖವಾಗಿದ್ದು, ರಚನೆಯಾದ ನಾಲ್ಕು ತಂಡ ತೆರಳಿದ್ದು, ಹತ್ಯೆಯಾದ ಕುಂಟುಂಬಿಕರ ಮನೆಗೆ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಹಲವು ರಾಜಕೀಯ ಮುಖಂಡರು ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಇದರ ನಡುವೆ ಮನೆ ಮಕ್ಕಳ ಕಳೆದುಕೊಂಡ ಕುಟುಂಬಿಕರ ರೋಧನ ಮಾತ್ರ ನಿಂತಿಲ್ಲ.

ಅಂತರ್ಜಾದಲ್ಲಿ ಹರಿದಾಡುತ್ತಿದೆ ಆಗ್ರಹ
ಕೊಟದಲ್ಲಿ ಹಿಂದೆ ಪಿಇಎಸ್ಸೈ ಆಗಿದ್ದ ಮಹೇಶ್ ಪ್ರಸಾದ್ ಮತ್ತೆ ಕರೆತರುಯವಂತೆ ಒತ್ತಾಯ ಆಂತರ್ ಜಾಲದಲ್ಲಿ ವೈರಲ್ ಆಗುತ್ತಿದೆ.ಹಿಂದೊಮ್ಮೆ ಕೋಟ ಠಾಣೆಯಲ್ಲಿ ಕಾರ್ಯನಿರ್ವಹಿಸಿ ಜನಪ್ರಿಯರಾಗಿದ್ದ ಪಿಎಸ್‌ಐ ಪ್ರಸಕ್ತ ಪುತ್ತೂರು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಬ್ರಹ್ಮಾವರ ಭಾಗಕ್ಕೆ ಕರೆತನ್ನಿ ಎಂಬ ಆಗ್ರಹವು ಎಲ್ಲೆಡೆ ಹರಿದಾಡುತ್ತಿದೆ. ಇದರಿಂದಾದರೂ ನ್ಯಾಯ ಸಿಗಬಹುದೆಂಬ ಗ್ರಹಿಕೆ ಜನರಿಗಿದೆ.

ಕೋಟ ಸುತ್ತಮುತ್ತಲಿನ ಭಾಗಗಳಲ್ಲಿ ಕೆಲ ದಿನಗಳಿಂದ ಸೃಷ್ಠಿಯಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಶೂನ್ಯವೆನ್ನುವಂತಿದ್ದು, ಇತ್ತೀಚಿಗೆ ಸಾಸ್ತಾನದಲ್ಲಿ ಅನುಮಾನಸ್ಪದ ಯುವಕನ ಸಾವಿನ ತನಿಖೆ ಕೂಡಾ ಹಳಿ ಹಿಡಿದಂತೆ ಕಂಡು ಬರುತ್ತಿದ್ದು ಶನಿವಾರ ನಡೆದ ಜೋಡಿ ಮರ್ಡರ್ ಅನ್ನಾದರೂ ನಿಷ್ಪಕ್ಷಪಾತ ತನಿಖೆ ಗೊಳಪಡಿಸಿ ನ್ಯಾಯ ಒದಗುವ ನಿರೀಕ್ಷೆಯಲ್ಲಿ ಜನ ಹಾತೋರೆಯುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಂಬರ್ಗಿ ಭರವಸೆ ನೀಡಿದ್ದು ಜನರಲ್ಲಿ ಆಶಾಭಾವನೆ ಮೂಡಿಸಿದೆ.

ಗಡಿಪಾರಿಗೆ ಆಗ್ರಹ
ಕೊಲೆ ನಡೆಸಿ ಪರಾರಿಯಾದ ರೌಡಿಶೀಟರ್ ಹರೀಶ್ ರೆಡ್ಡಿ ಮನೆ ಮಣೂರು ರಾಷ್ಟ್ರೀಯ ಹೆದ್ದಾರಿ ಸನಿಹದಲ್ಲಿದ್ದು ಅವನ ಕುಟುಂಬವನ್ನು ಗಡಿಪಾರು ಮಾಡುವಂತೆ ಅಲ್ಲದೆ ಅವನನ್ನು ಎನ್ ಕೌಂಟರ್ ಮಾಡುವಂತೆ ಇಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಸಂಬಂಧ ಪೋಲೀಸ್ ವರಿಷ್ಟ ಲಕ್ಷ್ಮಣ್ ನಿಂಬರ್ಗಿ ಅವರಲ್ಲಿ ಮನವಿ ಮಾಡಿದ್ದಾರೆ.

Comments are closed.