ರಾಷ್ಟ್ರೀಯ

ಪ್ರಧಾನಿ ಮೋದಿಗೆ ಬಂದ 1700 ಉಡುಗೊರೆ ಹರಾಜು: ನಿಮಗೂ ಬೇಕಿದ್ರೆ ಹೀಗೆ ಮಾಡಿ

Pinterest LinkedIn Tumblr

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾದ ಉಡುಗೊರೆಗಳ ಹರಾಜು ಪ್ರಕ್ರಿಯೆಯು ಇಲ್ಲಿನ ನ್ಯಾಷನಲ್‌ ಗ್ಯಾಲರಿ ಆಫ್‌ ಮಾಡರ್ನ್‌ ಆರ್ಟ್‌(ಎನ್‌ಜಿಎಂಎ)ಯಲ್ಲಿ ಭಾನುವಾರ ಆರಂಭವಾಗಿದೆ. ಅವರು ಪಡೆದಿದ್ದ ಶಿವಾಜಿ ವಿಗ್ರಹವೊಂದು 22,000 ರೂ.ಗಳಿಗೆ ಹರಾಜಾಗಿದೆ. ಉಡುಗೊರೆಗಳ ಹರಾಜಿನಿಂದ ಬರುವ ಹಣವನ್ನು ಗಂಗಾ ನದಿ ಶುಚಿತ್ವಕ್ಕೆ ರೂಪಿಸಲಾಗಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ನಮಾಮಿ ಗಂಗೆ’ ಯೋಜನೆಗೆ ಬಳಸಲಾಗುತ್ತದೆ.

ಜ.27 ಮತ್ತು 28ರಂದು ಮ್ಯೂಸಿಯಂನಲ್ಲೇ ಹರಾಜು ಪ್ರಕ್ರಿಯೆ ನಡೆದಿದ್ದು ಬಳಿಕ 2 ದಿನಗಳ ಕಾಲ ಆನ್‌ಲೈನ್‌ ಮೂಲಕವೂ ಹರಾಜು ನಡೆಸಲಾಗುತ್ತದೆ. ಉಡುಗೊರೆಗಳನ್ನು https://pmmementos.gov.in/ ಇ-ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ. ಇವುಗಳ ಬೆಲೆಯು ಬೆಲೆ 100 ರು.ಯಿಂದ 30000 ರು.ವರೆಗೂ ನಿಗದಿಯಾಗಿದ್ದು, ಸಾರ್ವಜನಿಕರು ಖರೀದಿಸಬಹುದಾಗಿದೆ. ಅವರು ಪಡೆದಿದ್ದ ಶಿವಾಜಿ ವಿಗ್ರಹವೊಂದು 22,000 ರೂ.ಗಳಿಗೆ ಹರಾಜಾಗಿದೆ.

ಬಂಗಾರ, ಲೋಟ, ಬಟ್ಟೆಗಳು, ಬೆಳ್ಳಿ, ಸೇರಿದಂತೆ ಇತರ ವಸ್ತುಗಳ ಚಿತ್ರದ ಕೆಳಗೆ ಅವುಗಳ ಕುರಿತು ವಿವರಣೆ ನೀಡಲಾಗಿರುತ್ತದೆ.

Comments are closed.