
ಕನ್ನಡ ಚಿತ್ರರಂಗದಲ್ಲಿ ಐತಿಹಾಸಿಕ ದಾಖಲೆ ಬರೆದಿರುವ ಯಶ್ ಅಭಿನಯದ ಕೆಜಿಎಫ್ ಚಿತ್ರ ಸದ್ಯದಲ್ಲೇ ಟಿವಿ ವಾಹಿನಿಯಲ್ಲಿ ಪ್ರವಾರವಾಗಲಿದೆ.
ಕನ್ನಡದಲ್ಲಿ 100 ಕೋಟಿ ಕ್ಲಬ್ ಸೇರಿ ದಾಖಲೆ ಬರೆದಿರುವ ಕೆಜಿಎಫ್ ಚಿತ್ರ ಕಿರುತೆರೆಯಲ್ಲಿ ಬರುತ್ತಿರುವುದು ಕನ್ನಡದಲ್ಲಿ ಅಲ್ಲ. ಹಿಂದಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಹಿಂದಿಯ ಸೋನಿ ಮ್ಯಾಕ್ಸ್ ಚಾನೆಲ್ ನಲ್ಲಿ ಫೆಬ್ರವರಿ ತಿಂಗಳಲ್ಲಿ ಕೆಜಿಎಫ್ ಚಿತ್ರ ಬಿಡುಗಡೆಯಾಗಲಿದೆ.
ಕೆಜಿಎಫ್ ಐದು ಭಾಷೆಗೆ ಡಬ್ ಆಗಿತ್ತು. ಇದೀಗ ಹಿಂದಿ ಅವತರಣಿಕೆ ಟಿವಿಯಲ್ಲಿ ಪ್ರಸಾರವಾಗುತ್ತಿರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಡುಗಡೆಯಾಗಿ ಇನ್ನು ಮೂರು ತಿಂಗಳು ಕಳೆದಿಲ್ಲ. ಆಗಲೇ ಕಿರುತೆರೆಯಲ್ಲಿ ಪ್ರಸಾರ ಮಾಡಬಾರದಿತ್ತು ಎಂದು ಆಗ್ರಹಿಸಿದ್ದಾರೆ.
Comments are closed.