ಉಡುಪಿ: ಜಿಲ್ಲೆಯಲ್ಲಿ 50 ಕ್ಕೂ ಹೆಚ್ಚು ಇತಿಹಾಸ ಪ್ರಸಿದ್ದ ಸಾಂಪ್ರದಾಯಿಕ ಕಂಬಳಗಳು ನೂರಾರು ವರ್ಷದಿಂದ ನಡೆಯುತ್ತಿದ್ದು ಸುಮಾರು 10 ವರ್ಷಗಳಿಂದ ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿಯು ನೂರಾರು ವರ್ಷಗಳಿಂದ ಸಾಂಪ್ರದಾಯಿಕ ಕಂಬಳಗಳನ್ನು ನಡೆಸಿಕೊಂಡು ಬಂದಿರುವ ಕಂಬಳದ ಮನೆಯವರು, ಕೋಣಗಳಗಳ ಮಾಲೀಕರು, ಓಟಗಾರರನ್ನು ಒಳಗೊಂಡ ಸಮಿತಿಯನ್ನು ರಚಿಸಿ ಜಿಲ್ಲೆಯಲ್ಲಿ ಕ್ರಮಬದ್ದವಾಗಿ ಸಾಂಪ್ರದಾಯಿಕ ಕಂಬಳಗಳು ಆಯೋಜನೆಗೊಳ್ಳುವಂತೆ ಸಂಘಟಿಸುತ್ತಿದೆ.

(ಸಾಂದರ್ಭಿಕ ಚಿತ್ರ)
2025 ನೇ ಸಾಲಿನ ಉಡುಪಿ ಜಿಲ್ಲೆಯ ಸಾಂಪ್ರದಾಯಿಕ ಕಂಬಳಗಳ ಪಟ್ಟಿ ಈ ಕೆಳಗಿನಂತಿದೆ:-
ನವೆಂಬರ್:
21/11/2025 ಕೊಡೇರಿ
25/11/2025 ಕೆರಾಡಿ
27/11/2025 ಗುಳ್ವಾಡಿ
28/11/2025 ಬಾರ್ಕೂರು
30/11/2025 ಕೆಂಜೂರು,ಹೆರಂಜೆ,ಅಲ್ಬಾಡಿ
ಡಿಸೆಂಬರ್:
1/12/2025 ಮೂಡ್ಲಕಟ್ಟೆ
2/12/2025 ಹೊಸ್ಮಠ
5/12/2025 ಬಿಲ್ಲಾಡಿ
6/12/2025 ಮೊಳಹಳ್ಳಿ,ಹಂದಾಡಿ
7/12/2025 ಹೊರ್ಲಾಳಿ,ತೋನ್ಸೆ
7/12/2025 ವೋರ್ವಾಡಿ
9/12/2025 ಚೋರಾಡಿ,ಕುಚ್ಚೂರು
10/12/2025 ಆತ್ರಾಡಿ, ತೆಗ್ಗರ್ಸೆ
11/12/2025 ಹೊಸೂರು
14/12/2025 ಬನ್ನಾಡಿ, ಕೊರ್ಗಿ
25/12/2025 ಕಡಿಂತಾರ್

ಈವರೆಗೆ ಈ ಮೇಲಿನ ಕಂಬಳಗಳ ದಿನಾಂಕ ನಿಗದಿಯಾಗಿದ್ದು ಸಂಕ್ರಾಂತಿಯ ನಂತರ ಐತಿಹಾಸ ಪ್ರಸಿದ್ದ ವಂಡಾರು ಕಂಬಳ ಸೇರಿದಂತೆ ಚೇರ್ಕಾಡಿ, ವಡ್ಡಂಬೆಟ್ಟು, ಯಡ್ತಾಡಿ, ಮುದ್ದುಮನೆ, ಹೆಗ್ಗುಂಜೆ, ತಲ್ಲೂರು, ಕಡ್ರಿ ಸಿದ್ದಾಪುರ, ನಡೂರು, ಕೊಡವೂರು, ಮಂಡಾಡಿ ಸೇರಿದಂತೆ ಇನ್ನೂ ಹಲವು ಕಂಬಳಗಳ ದಿನಾಂಕಗಳು ನಿಗದಿಯಾಗಲಿದೆ ಎಂದು ಉಡುಪಿ ಜಿಲ್ಲಾ ಸಾಂಪ್ರದಾಯಿಕ ಕಂಬಳ ಸಮಿತಿಯ ಜಿಲ್ಲಾ ಅಧ್ಯಕ್ಷ ಸುಧಾಕರ ಹೆಗ್ಡೆ ಹೆರಂಜೆ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.