ಕರಾವಳಿ

ಕೋಟ ಸ್ನೇಹಿತರ ಕೊಲೆಗೆ ಜಿ.ಪಂ ಸದಸ್ಯನೇ ಸೂತ್ರಧಾರಿ; ಪೊಲೀಸರಿಂದ 6 ಮಂದಿ ಬಂಧನ

Pinterest LinkedIn Tumblr

ಉಡುಪಿ: ಜ.26 ಶನಿವಾರ ಉಡುಪಿ ಜಿಲ್ಲೆ ಕೋಟದಲ್ಲಿ ನಡೆದ ಸ್ನೇಹಿತರಿಬ್ಬರ ಕೊಲೆ ಪ್ರಕರಣದಲ್ಲಿ ಪ್ರಮುಖ ರುವಾರಿಗಳು ಸೇರಿದಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಈ ಕೊಲೆಗೆ ಸೂತ್ರಧಾರಿಯೆನ್ನಲಾದ ಕೋಟ ಜಿಲ್ಲಾ ಪಂಚಾಯತ್ ಸದಸ್ಯನನ್ನು ಬಂಧಿಸಲಾಗಿದೆ. ಭರತ್ ಮತ್ತು ಯತೀಶ್ ಕೊಲೆಯಾದ ದುರ್ದೈವಿಗಳಾಗಿದ್ದಾರೆ.

(ಕೊಲೆಯಾದ ಯತೀಶ್ ಮತ್ತು ಭರತ್ )

ರೌಡಿಶೀಟರ್ ಹರೀಶ್ ರೆಡ್ಡಿ , ರಾಜಶೇಖರ್ ರೆಡ್ಡಿ, ರವೀಂದ್ರ ಪೂಜಾರಿ, ಮಹೇಶ್ ಗಾಣಿಗ, ರವಿ ಯಾನೆ ಮೆಡಿಕಲ್ ರವಿ, ಕೋಟ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ (38) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಲ್ಲಿ ಜಿ.ಪಂ ಸದಸ್ಯ ರಾಘವೇಂದ್ರ, ರೆಡ್ಡಿ ಸಹೋದರರು ರೌಡಿಶೀಟರ್ ಗಳು. ಇವರಲ್ಲಿ ರಾಜಶೇಖರ ರೆಡ್ಡಿ, ರವಿಯನ್ನು ಗುರುವಾರ ವಶಕ್ಕೆ ಪಡೆದಿದ್ದರು. ಉಳಿದವರನ್ನು ಇಂದು ಬಂಧಿಸಲಾಗಿದೆ. ಉಳಿದವರ ಬಂಧನಕ್ಕೆ ಬಲೆಬೀಸಲಾಗಿದೆ.

(ರೌಡಿಶೀಟರ್ ಹರೀಶ್ ರೆಡ್ಡಿ , ರಾಜಶೇಖರ್ ರೆಡ್ಡಿ,ರಾಘವೇಂದ್ರ ಕಾಂಚನ್ )

ಜಿ.ಪಂ ಸದಸ್ಯನೇ ರುವಾರಿ…
ಕೋಟದಲ್ಲಿ ನಡೆದ ಡಬ್ಬಲ್ ಮರ್ಡರ್ ಗೆ ಜಿ.ಪಂ ಸದಸ್ಯನೇ ಸೂತ್ರಧಾರಿ ಎನ್ನುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ರೌಡಿ ಶೀಟರ್ ಹರೀಶ್ ರೆಡ್ಡಿಯಿಂದ ರಾಘವೇಂದ್ರ ಕಾಂಚನ್ ನಿಗೆ ಬಂದ ಕರೆಗಳು ಬಹಳಷ್ಟು. ಅಲ್ಲದೇ ಕೊಲೆ ನಡೆದ ಕೆಲವೇ ಹೊಲ್ಲಿ ಕಾಂಚನ್ ನಿಗೆ ಕರೆ ಮಾಡಿದ ಬಳಿಕ ಎಲ್ಲಾ ಫೋನುಗಳು ಸ್ವಿಚ್ಡ್ ಆಫ್ ಆಗಿದ್ದು ಬೆಳಕಿಗೆ ಬಂದಿದೆ. ಇದೇ ಮಾಹಿತಿ ಆಧಾರದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಇಡೀ ಕೊಲೆ ಪ್ರಕರಣದ ರುವಾರಿ ರಾಘವೇಂದ್ರ ಕಾಂಚನ್ ಬಾರಿಕೆರೆ ಎನ್ನುವುದು ತಿಳಿದುಬಂದಿದೆ.

(ಪೊಲೀಸರಿಂದ ಸ್ಥಳ ಮಹಜರು)

ದ್ವೇಷವ್ಯಾಕೇ?
ಬಿಜೆಪಿಯಿಂದ ಆಯ್ಕೆಯಾದ ರಾಘವೇಂದ್ರ ಕಾಂಚನ್ ಆ ಭಾಗದಲ್ಲಿ ಒಂದು ಯುವಕರ ಸಂಘ ಕಟ್ಟಿಕೊಂಡಿದ್ದ. ಬರಬರುತ್ತಾ ಕೋಟ ಭಾಗದಲ್ಲಿ ನಿನ್ನೊಂದು ಸಂಘಟನೆ ಹುಟ್ಟಿಕೊಂಡಿದ್ದು ಅದರ ಮುಖಂಡನಾಗಿ ಭರತ್ ಶ್ರೀಯಾನ್ ಗುರುತಿಸಿಕೊಂಡಿದ್ದ. ತನ್ನ ಸಂಘಟನೆಗೆ ಪರ್‍ಯಾಯ ಸಂಘಟನೆ ಹುಟ್ಟಿಕೊಂಡಿದ್ದಲ್ಲದೇ ಹೆಸರು ಮಾಡುತ್ತಿದ್ದ ಭರತ್ ಮೇಲೆ ರಾಘವೆಂದ್ರನಿಗೆ ಮುನಿಸಿತ್ತು. ಇದೇ ದ್ವೇಷದಲ್ಲಿ ಸಂಚು ನಡೆಸಿ ಭರತನನ್ನು ಕೊಲೆ ಮಾಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

(ಪ್ರತಿಭಟನೆಯಲ್ಲಿ ಭಾಗವಹಿಸಿದ ರಾಘವೇಂದ್ರ ಕಾಂಚನ್-ಫೈಲ್ ಫೋಟೋ)

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ..
ಇನ್ನು ರಾಘವೇಂದ್ರ ಕಾಂಚನ್ ಬಂಧನ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಜವಬ್ದಾರಿಯುತ ಸ್ಥಾನದಲ್ಲಿದ್ದು ಇಂತಹ ಕ್ರತ್ಯ ಮಾಡಿದ ಆತನ ಬಗ್ಗೆ ಠಿಕೆಗಳು ವ್ಯಕ್ತವಾಗುತ್ತಿದೆ. ಇನ್ನು ಆರೋಪಿಗಳ ಬಂಧನಕ್ಕೆ ಹಾಗೂ ಕಠಿಣ ಶಿಕ್ಷೆಗೆ ಒತ್ತಾಯಿಸಿ ಕಳೆದ ಭಾನುವಾರ ಕೋಟದಲ್ಲಿ ನಡೆದ ಪ್ರತಿಭಟನೆಯಲ್ಲಿಯೂ ರಾಘವೇಂದ್ರ ಕಾಂಚನ್ ಭಾಗವಹಿಸಿದ್ದ. ಈ ಫೋಟೋಗಳನ್ನು ಹರಿಬಿಟ್ಟು ಅದಕ್ಕೆ ಬರಹ ರೂಪದಲ್ಲಿ ಕಮೆಂಟ್ ಮಾಡಿ ಜನರು ಆಕ್ರೋಷ ಹೊರಹಾಕುತ್ತಿದ್ದಾರೆ.

(ಕೊಲೆಗೆ ಬಳಸಿದ ತಲವಾರು ಎಸೆದ ಪೊದೆ)

ಪೊದೆಯಲ್ಲಿ ಸಿಕ್ಕ ತಲವಾರು!
ಆರೋಪಿಗಳ ಪೈಕಿ ಐದು ಮಂದಿಯನ್ನು ಕೋಟ ಬಾಳೆಬೆಟ್ಟು ಪರಿಸರಕ್ಕೆ ಪೊಲೀಸರು ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಕರೆತಂದಿದ್ದಾರೆ. ಇದೇವೇಳೆ ರಾಜಶೇಖರ್ ರೆಡ್ಡಿ ತನ್ನ ಮನೆಯಿಂದ ಮುನ್ನೂರು ಮೀಟರ್ ದೂರದಲ್ಲಿರುವ ಹೆದ್ದಾರಿ ಬಳಿ ಸರ್ವೀಸ್ ರಸ್ತೆಯ ಪಕ್ಕದಲ್ಲಿದ್ದ ಪೊದೆಯಲ್ಲಿ ಎಸೆದ ಎರಡು ತಲವಾರುಗಳನ್ನು ತೋರಿಸಿದ್ದು ಪೊಲೀಸರು ಅದನ್ನು ವಶಕ್ಕೆ ಪಡೆದಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ: 

ಕೋಟದಲ್ಲಿ ತಲವಾರು ದಾಳಿ: ಕ್ಷುಲ್ಲಕ ಕಾರಣಕ್ಕೆ ಹರಿಯಿತು ಇಬ್ಬರ ನೆತ್ತರು (Updated)

ಆಪ್ತಮಿತ್ರರಿಬ್ಬರ ಬರ್ಬರ ಕೊಲೆ ಪ್ರಕರಣ: ಕೋಟ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ (Video)

ಟಾಯ್ಲೆಟ್ ಪಿಟ್ ನಿರ್ಮಾಣದ ತಕರಾರು: ಆಪ್ತ ಮಿತ್ರರಿಬ್ಬರ ಮೇಲೆ ತಲವಾರು ಬೀಸಿದ ಹಂತಕರು

ಕೋಟ ಆಪ್ತಮಿತ್ರರನ್ನು ಕೊಂದ ಕೊಲೆಗಾರರ ಪತ್ತೆಗೆ ಚುರುಕುಗೊಂಡ ತನಿಖೆ

ಕೋಟದಲ್ಲಿ ಸ್ನೇಹಿತರಿಬ್ಬರ ಮರ್ಡರ್ ಕೇಸ್: ಆರೋಪಿಗಳಿಗಾಗಿ ಮುಂದುವರಿದ ಶೋಧ

ಕೋಟ ಅವಳಿ ಕೊಲೆ: ಹರೀಶ್ ರೆಡ್ಡಿ ಸಹಚರರು ಇನ್ನೂ ಭೂಗತ!

ಇನ್ನೂ ಪತ್ತೆಯಾಗದ ಕೊಲೆಗಾರರು; ನ್ಯಾಯಕ್ಕಾಗಿ ಆಗ್ರಹಿಸಿ ಫೆ.3ಕ್ಕೆ ಕೋಟ ಬಂದ್

ಕೋಟದಲ್ಲಿ ಅವಳಿ ಕೊಲೆ ಪ್ರಕರಣ: ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಬಂದ್, ಪ್ರತಿಭಟನೆ (Video)

ಕೋಟ ಅವಳಿ ಕೊಲೆ ಪ್ರಕರಣದ ಆರೋಪಿಗಳ ಬಂಧನ? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಅಂತೆಕಂತೆ!

Comments are closed.