ಕರಾವಳಿ

ಸಕ್ಕರೆಯ ನಿಜವಾದ ಬಣ್ಣ ಯಾವುದು… ಇದು ಶಾಕಾಹಾರಿಯೋ, ಮಾಂಸಹಾರಿಯೋ..?

Pinterest LinkedIn Tumblr

ಶಾಕಾಹಾರಿ ಅಥವಾ ಸಸ್ಯಹಾರಿಗಳು ಕೇವಲ ಸಸ್ಯ ಅಥವಾ ಸಸ್ಯಜನ್ಯ ಆಹಾರವನ್ನು ಮಾತ್ರ ಸೇವಿಸುತ್ತಾರೆ. ಆದರೆ ಹಾಲು ಸಸ್ಯಾಹಾರವೋ ಅಲ್ಲವೋ ಎಂಬುದು ಶತಮಾನಗಳಿಂದ ಉತ್ತರ ದೊರಕದಿರುವ ಪ್ರಶ್ನೆಯಾಗಿದೆ.

ಇಂದಿನ ದಿನಗಳಲ್ಲಿ ಕೇಳಬಹುದಾದ ಪ್ರಶ್ನೆ ಎಂದರೆ ಬಿಳಿ ಸಕ್ಕರೆ ಸಸ್ಯಾಹಾರವೋ ಮಾಂಸಾಹಾರವೋ? ಹೆಚ್ಚಿನವರು ಇದನ್ನು ಸಸ್ಯಾಹಾರ ಎಂದೇ ಉತ್ತರ ನೀಡಿದರೂ ಇದು ಶೇಖಡಾ ತೊಂಬತ್ತೊಂಬತ್ತು ಭಾಗ ಮಾತ್ರ. ಏಕೆಂದರೆ ಕಬ್ಬು ಕಂದು ಬಣ್ಣಕ್ಕಿದ್ದು ಇದರ ಕಂದುಬಣ್ಣವನ್ನು ತೆಗೆದು ಬಿಳಿಯಾಗಿಸಲು ಪ್ರಾಣಿಗಳ ಮೂಳೆಯನ್ನು ಬಳಸಲಾಗುತ್ತದೆ.

(ನಂಬಿಕೆ ಬರದಿದ್ದರೆ bone char ಎಂಬ ಪದವನ್ನು ಗೂಗಲ್ ಮಾಡಿ) ನಾವು ನಿತ್ಯ ಬಳಸುವ ಎಷ್ಟೋ ವಸ್ತುಗಳು ಹೀಗೇ ಪ್ರಾಣಿಜನ್ಯವಾಗಿವೆ. ಆದರೆ ಇದರ ಬಗ್ಗೆ ನಮಗೆ ಅರಿವೇ ಇರುವುದಿಲ್ಲ. ಬನ್ನಿ, ಇಂತಹ ಹಲವು ಉತ್ಪನ್ನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮುಂದೆ ಓದಿ…

ಹೆಚ್ಚಿನ ಸೋಪುಗಳನ್ನು ಕೊಬ್ಬರಿ ಮತ್ತು ಬಾದಾಮಿ ಎಣ್ಣೆಯನ್ನು ಬಳಸಿ ತಯಾರಿಸಲಾಗಿರುತ್ತದೆ. ಆದರೆ ಹಿಂದಿನ ದಿನಗಳಲ್ಲಿ ಕೊಬ್ಬರಿಗಿಂತಲೂ ಪ್ರಾಣಿಗಳ ಕೊಬ್ಬೇ ಸುಲಭವಾಗಿ ಸಿಗುತ್ತಿದ್ದ ಕಾರಣ ಈ ಕೊಬ್ಬನ್ನು ಬಳಸಿಯೇ ಸೋಪನ್ನು ತಯಾರಿಸಲಾಗುತ್ತಿತ್ತು. ಹಿಂದಿನ ದಿನಗಳಲ್ಲಿ ಇದಕ್ಕೆ ‘tallow’ ಎಂದು ಕರೆಯಲಾಗುತ್ತಿದ್ದು ಹಂದಿ ಅಥವಾ ದನದ ಕೊಬ್ಬನ್ನು ಬಳಸಲಾಗುತ್ತಿತ್ತು.

ಈ ಕೊಬ್ಬನ್ನು ಸೋಡಿಯಂ ಹೈಡ್ರಾಕ್ಸೈಡ್ ನೊಂದಿಗೆ ಬೆರೆಸಿ ಸೋಪಿನ ನೊರೆಬರುವಂತೆ ಮಾಡಲಾಗುತ್ತಿತ್ತು. ಈ ಪರಂಪರೆ ಇಂದಿಗೂ ಮುಂದುವರೆದಿದ್ದು ಕೆಲವು ಸೋಪುಗಳ ಹೊರತಾಗಿ ಹೆಚ್ಚಿನವುಗಳಲ್ಲಿ ಇದೇ ವಿಧಾನವನ್ನು ಬಳಸಲಾಗುತ್ತಿದೆ. (ಉದಾಹರಣೆಗೆ Lux, Dove, Shield, Caress, Lifebuoy, Dove,Beauty Wash, Lever 2000, Lever 2000 Liquid ಉತ್ಪನ್ನಗಳಲ್ಲಿ sodium tallowate (ದನದ ಕೊಬ್ಬು) ಇದೆ.

ನಿಮ್ಮ ತುಟಿಗಳಿಗೆ ಹೊಳಪು ನೀಡುವ ಲಿಪ್ ಸ್ಟಿಕ್ ಮತ್ತು ಉಗುರುಗಳ ಅಂದ ಹೆಚ್ಚಿಸುವ ನೈಲ್ ಪಾಲಿಶ್ ಗಳ ಮುಖ್ಯ ಪರಿಕರವೇನು ಗೊತ್ತೇ? ಮೀನುಗಳ ಹುರುಪೆಗಳು. ಈ ಹುರುಪೆಯನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿ ಬೆರೆಸಿದ ಉತ್ಪನ್ನಗಳು ಹೆಚ್ಚು ಜನಪ್ರಿಯವಾಗಿವೆ.

ಬಟ್ಟೆಗಳನ್ನು ಒಗೆದ ಬಳಿಕ ಮೃದುಕಾರಕವನ್ನು ಬಳಸಿ ಬಟ್ಟೆಗಳು ಹೆಚ್ಚು ಮೃದುವಾಗಿರಿಸುವ ಈ ಅದ್ಭುತ ದ್ರವದಲ್ಲಿ ಕುರಿಯ ಅಥವಾ ದನದ ಕೊಬ್ಬು ಹೇರಳ ಪ್ರಮಾಣದಲ್ಲಿದೆ.

Dihydrogenated tallow dimethyl mmonium chloride ಎಂಬ ರಾಸಾಯನಿಕ ನಿಮ್ಮ ಮೃದುಕಾರಕದಲ್ಲಿ ಇರುವ ಕಾರಣವೇ ಬಟ್ಟೆಗಳು ಮೃದುವಾಗಲು ಕಾರಣ. ಮುಂದಿನ ಬಾರಿ ಈ ಉತ್ಪನ್ನ ಕೊಳ್ಳುವಾಗ ಎಚ್ಚರವಿರಲಿ.

ಪ್ಲಾಸ್ಟಿಕ್ ಹಾಳೆಗಳು ಒಂದಕ್ಕೊಂದು ಅಂಟಿಕೊಳ್ಳದಂತೆ ಮಾಡಲು ಇದರ ಮೇಲೆ ಅತಿ ಸೂಕ್ಷ್ಮವಾಗಿ ಪುಡಿಯೊಂದನ್ನು ಸವರಲಾಗಿರುತ್ತದೆ. ಇದಕ್ಕೆ slip agents ಎಂದು ಕರೆಯುತ್ತಾರೆ. ಹೆಚ್ಚಿನವುಗಳನ್ನು ಪೆಟ್ರೋಲಿಯಂ ಉತ್ಪನ್ನಗಳಿಂದ ತಯಾರಿಸಲಾಗುತ್ತದಾದರು ಕೆಲವು ಸಂಸ್ಥೆಗಳು ತಮ್ಮ ಉತ್ಪನ್ನಗಳು ಇನ್ನಷ್ಟು ಉತ್ತಮವಾಗಿರಲೆಂದು ಪ್ರಾಣಿಜನ್ಯ ವಸ್ತುಗಳನ್ನು ಬಳಸುತ್ತಾರೆ.

Comments are closed.