ಬೆಂಗಳೂರು : ಕಾಂಗ್ರೆಸ್ ಜೆಡಿಎಸ್ ದೋಸ್ತಿ ಸರ್ಕಾರದ ಬಜೆಟ್ ಅಧಿವೇಶನ ಆರಂಭವಾಗಿದ್ದು, ಇಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬಜೆಟ್ ಮಂಡಿಸಲಿದ್ದಾರೆ.
ಇಂದಿನ ಬಜೆಟ್ ನಲ್ಲಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ರೈತರಿಗೆ ಬಂಪರ್ ಘೋಷಿಸುವ ಸಾಧ್ಯತೆ ಇದ್ದು, ಈಗಾಗಲೇ ವಿಧಾನಸೌಧಕ್ಕೆ ಬಜೆಟ್ ಸೂಟ್ ಕೇಸ್ ನೊಂದಿಗೆ ಆಗಮಿಸಿದ್ದಾರೆ. 12.32 ಕ್ಕೆ ಸಿಎಂ ಹೆಚ್.ಡಿಕೆ ಬಜೆಟ್ ಮಂಡಿಸಲಿದ್ದಾರೆ.
ಬಜೆಟ್ ನಲ್ಲಿ ಎಲ್ಲ ವರ್ಗದ ಜನರ ಹಿತಚಿಂತನೆ ಇರುತ್ತದೆ. ಎಲ್ಲಾ ಸದಸ್ಯರು ಸದನದ ಗೌರವ ಮತ್ತು ಪಾವಿತ್ರ್ಯವನ್ನು ಉಳಿಸುವಂತೆ ನಡೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸುತ್ತೇನೆ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Comments are closed.