ಕರ್ನಾಟಕ

ಇದು ರೈತ ಪರ, ಬಡವರ ಪರ ಬಜೆಟ್ ಆಗಿದೆ – ಸಚಿವ ಹೆಚ್.ಡಿ. ರೇವಣ್ಣ

Pinterest LinkedIn Tumblr

ಬೆಂಗಳೂರು : ಇಂದು ಬಜೆಟ್ ಮಂಡನೆ ಆಗುತ್ತೆ, ಬಿಜೆಪಿಗೆ ರಾಜ್ಯದ ಬಗ್ಗೆ ಯಾವುದೇ ಚಿಂತೆ ಇಲ್ಲ. ಇದು ರೈತ ಪರ, ಬಡವರ ಪರ ಬಜೆಟ್ ಆಗಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಯಾರನ್ನು ಆಪರೇಷನ್ ಮಾಡುವುದಕ್ಕೆ ಆಗಲ್ಲ. ಯಡಿಯೂರಪ್ಪ ಆಪರೇಷನ್ ಮಾಡುವುದಕ್ಕೆ ಹೋಗಿ ಫೇಲ್ ಆಗಿದ್ದಾರೆ. ಆಪರೇಷನ್ ಮಾಡುವುದಕ್ಕೆ 15 ದಿನ ಆಪರೇಷನ್ ಥೀಯೇಟರ್ ಖಾಲಿ ಇಲ್ಲ ಎಂದರು ಹೇಳಿದರು.

ಕುಮಾರಸ್ವಾಮಿ ಅವರನ್ನು ಟಚ್ ಮಾಡಿದವರಿಗೆ ಏನಾದರೂ ಆಗುತ್ತೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಹಾಗಾಗಿ ಸರ್ಕಾರಕ್ಕೆ ಏನು ಆಗುವುದಿಲ್ಲ. ಯಡಿಯೂರಪ್ಪ ಆಪರೇಷನ್ ಫೇಲ್ ಆಗಿದೆ. ಸರ್ಕಾರಕ್ಕೆ ಏನೂ ಆಗುವುದಿಲ್ಲ ಎಂದು ಸಚಿವ ರೇವಣ್ಣ ಹೇಳಿದರು.

Comments are closed.