ಕರಾವಳಿ

ಕೋಟ ಸ್ನೇಹಿತರಿಬ್ಬರ ಕೊಲೆಯಲ್ಲಿ ಭಾಗಿಯಾದವನೂ ಸೇರಿ ಮತ್ತೆ ಐದು ಮಂದಿ ಬಂಧನ

Pinterest LinkedIn Tumblr

ಉಡುಪಿ: ಕೋಟದ ಮಣೂರು ಗ್ರಾಮದ ಚಿಕ್ಕನಕೆರೆಯಲ್ಲಿ ಜ.26 ತಡರಾತ್ರಿ ನಡೆದ ಆಪ್ತಮಿತ್ರರಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಪೊಲೀಸರು ಸೋಮವಾರ 5 ಮಂದಿಯನ್ನು ಬಂಧಿಸಿದ್ದಾರೆ.

ಉಡುಪಿ ಪುತ್ತೂರು ಸುಬ್ರಹ್ಮಣ್ಯ ನಗರದ ಅಭಿಷೇಕ ಅಲಿಯಾಸ್ ಅಭಿ ಪಾಲನ್ (23), ಬಾರ್ಕೂರು ಹನೆಹಳ್ಳಿ ಗ್ರಾಮದ ಸಂತೋಷ್ ಕುಂದರ್ (35) ಬ್ರಹ್ಮಾವರ ನಿವಾಸಿ ನಾಗರಾಜ ಲಿಯಾಸ್ ರೊಟ್ಟಿ ನಾಗರಾಜ(44), ಭದ್ರಾವತಿ ನಿವಾಸಿ ಪ್ರಣವ್ ರಾವ್ (20) ಮತ್ತು ಅಂಜಾರು ನಿವಾಸಿ ಶಂಕರ ಮೊಗವೀರ(41) ಬಂಧಿತ ಆರೋಪಿಗಳು. ಇವರಲ್ಲಿ ಅಭೀಷೇಕ ಕೊಲೆ ಪ್ರಕರಣದಲ್ಲಿ ನೇರ ಭಾಗಿಯಾಗಿದ್ದು, ಈತನು ಪೈಂಟಿಂಗ್ ಹಾಗೂ ಬಡ್ಡಿ ವ್ಯವಹಾರ ನಡೆಸುತ್ತಿದ್ದಾನೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆ.15ರ ತನಕ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇನ್ನು ಬಂಧಿತ ಇತರ ನಾಲ್ವರು ಆರೋಪಿಗಳಿಗೆ ವಿವಿಧ ರೀತಿಯಲ್ಲಿ ಸಹಕರಿಸಿದ್ದಾರೆ. ಆರೋಪಿ ಸಂತೋಷ್ ಕುಂದರ್ ಕೊಲೆ ಆರೋಪಿಗಳಿಗೆ ತಪ್ಪಿಸಿಕೊಳ್ಳಲು ಸಹಕರಿಸಿದ್ದು, ಆರೋಪಿಗಳಾದ ಶಂಕರ ಮೊಗವೀರ, ನಾಗರಾಜ ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿದ್ದರು. ಆರೋಪಿ ಪ್ರಣವ್ ರಾವ್ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದು ಆರೋಪಿತರಿಗೆ ಹಣ ಮತ್ತು ಮೊಬೈಲ್ ನೀಡಿ ಸಹಕರಿಸಿದ್ದಾನೆ ಎಂದು ಉಡುಪಿ ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಭರತ್ ಶ್ರೀಯಾನ್ ಮತ್ತು ಯತೀಶ್ ಕಾಂಚನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಪಂ ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್, ರೌಡಿಶೀಟರ್ ರಾಜಶೇಖರ ರೆಡ್ಡಿ, ಹರೀಶ್ ರೆಡ್ಡಿ, ಮಹೇಶ್ ಗಾಣಿಗ, ಮೆಡಿಕಲ್ ರವಿ, ರವಿಚಂದ್ರ ಪೂಜಾರಿಯನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು. ಭಾನುವಾರ ಕೊಲೆ ಆರೋಪಿಗಳಿಗೆ ಸಹಕರಿಸಿದ ಆರೋಪದಲ್ಲಿ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಾದ ಪವನ್ ಅಮಿನ್ ಮತ್ತು ವೀರೇಂದ್ರ ಆಚಾರ್ಯ ಎಂಬವರನ್ನು ಬಂಧಿಸಲಾಗಿದ್ದು ಯುವಕರಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ಸದ್ಯ ಹದಿಮೂರಕ್ಕೇರಿದೆ.

ಇದನ್ನೂ ಓದಿರಿ: 

ಕೋಟದಲ್ಲಿ ತಲವಾರು ದಾಳಿ: ಕ್ಷುಲ್ಲಕ ಕಾರಣಕ್ಕೆ ಹರಿಯಿತು ಇಬ್ಬರ ನೆತ್ತರು (Updated)

ಆಪ್ತಮಿತ್ರರಿಬ್ಬರ ಬರ್ಬರ ಕೊಲೆ ಪ್ರಕರಣ: ಕೋಟ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ (Video)

ಟಾಯ್ಲೆಟ್ ಪಿಟ್ ನಿರ್ಮಾಣದ ತಕರಾರು: ಆಪ್ತ ಮಿತ್ರರಿಬ್ಬರ ಮೇಲೆ ತಲವಾರು ಬೀಸಿದ ಹಂತಕರು

ಕೋಟ ಆಪ್ತಮಿತ್ರರನ್ನು ಕೊಂದ ಕೊಲೆಗಾರರ ಪತ್ತೆಗೆ ಚುರುಕುಗೊಂಡ ತನಿಖೆ

ಕೋಟದಲ್ಲಿ ಸ್ನೇಹಿತರಿಬ್ಬರ ಮರ್ಡರ್ ಕೇಸ್: ಆರೋಪಿಗಳಿಗಾಗಿ ಮುಂದುವರಿದ ಶೋಧ

ಕೋಟ ಅವಳಿ ಕೊಲೆ: ಹರೀಶ್ ರೆಡ್ಡಿ ಸಹಚರರು ಇನ್ನೂ ಭೂಗತ!

ಇನ್ನೂ ಪತ್ತೆಯಾಗದ ಕೊಲೆಗಾರರು; ನ್ಯಾಯಕ್ಕಾಗಿ ಆಗ್ರಹಿಸಿ ಫೆ.3ಕ್ಕೆ ಕೋಟ ಬಂದ್

ಕೋಟದಲ್ಲಿ ಅವಳಿ ಕೊಲೆ ಪ್ರಕರಣ: ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಬಂದ್, ಪ್ರತಿಭಟನೆ (Video)

ಕೋಟ ಅವಳಿ ಕೊಲೆ ಪ್ರಕರಣದ ಆರೋಪಿಗಳ ಬಂಧನ? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಅಂತೆಕಂತೆ!

ಕೋಟ ಡಬ್ಬಲ್ ಮರ್ಡರ್ ಕೇಸ್: ಇಬ್ಬರು ಆರೋಪಿಗಳ ಬಂಧನ

ಕೋಟ ಸ್ನೇಹಿತರ ಕೊಲೆಗೆ ಜಿ.ಪಂ ಸದಸ್ಯನೇ ಸೂತ್ರಧಾರಿ; ಪೊಲೀಸರಿಂದ 6 ಮಂದಿ ಬಂಧನ

ಕೋಟ ಅವಳಿ ಕೊಲೆಯ ಆರು ಆರೋಪಿಗಳಿಗೆ ಫೆ.15ರವರೆಗೆ ಪೊಲೀಸ್ ಕಸ್ಟಡಿ, ಮುಂದುವರಿಯಲಿದೆ ತನಿಖೆ

ಕೋಟ ಜೋಡಿ ಕೊಲೆ ಪ್ರಕರಣ ನಡೆದ ಮನೆಯಲ್ಲಿ ಮಹಜರು; ಕೃತ್ಯಕ್ಕೆ ಬಳಸಿದ್ದ 2 ಬೈಕ್ ವಶ

ಕೋಟ ಸ್ನೇಹಿತರಿಬ್ಬರ ಕೊಲೆ ಪ್ರಕರಣ: ರೆಡ್ಡಿಗೆ ಸಹಕರಿಸಿದ ಇಬ್ಬರು ಪೊಲೀಸರು ಅರೆಸ್ಟ್

ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡಿದ ಬಿಜೆಪಿಯವರಿಂದ ಕೊಲೆಗಡುಕರಿಗೆ ಬೆಂಬಲ: ಮಾಜಿ ಸಚಿವ ಸೊರಕೆ

Comments are closed.