ಕರಾವಳಿ

ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡಿದ ಬಿಜೆಪಿಯವರಿಂದ ಕೊಲೆಗಡುಕರಿಗೆ ಬೆಂಬಲ: ಮಾಜಿ ಸಚಿವ ಸೊರಕೆ

Pinterest LinkedIn Tumblr

ಉಡುಪಿ: ಕೋಟ ಸಮೀಪದ ಯತೀಶ್ ಕಾಂಚನ್ ಹಾಗೂ ಭರತ್ ಶ್ರೀಯಾನ್ ಎನ್ನುವ ಸ್ನೇಹಿತರಿಬ್ಬರ ಡಬಲ್ ಮರ್ಡರ್ ಪ್ರಕರಣದ ಆರೋಪದಡಿ ಬಂಧನಕ್ಕೊಳಗಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಬಿಜೆಪಿಯ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ ತತ್‌ಕ್ಷಣ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಫೆ.11ಸೋಮವಾರ ಕೋಟ ಬಸ್ ನಿಲ್ದಾಣ ಬಳಿ ಪ್ರತಿಭಟನೆ ನಡೆಯಿತು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಕೊಲೆಗಡುಕರ ಪಕ್ಷ ಎಂದು ಅಪಪ್ರಚಾರವನ್ನು ಮಾಡಿ ಬಿಜೆಪಿಗರು ಅದನ್ನು ಮತವಾಗಿ ಪರಿವರ್ತಿಸಿ ಹೆಚ್ಚು ಸೀಟು ಪಡೆದಿದ್ದರು. ಅಂದಿನ ಸಿಎಂ ಸಿದ್ದರಾಮಯ್ಯ ಸರಕಾರದ ಬಗ್ಗೆ ಅಪಪ್ರಚಾರ ನಡೆಸಿ, ಕೋಮು ಭಾವನೆ ಕೆರಳಿಸಿದ ಬಿಜೆಪಿ ಮುಖಂಡರು ಇಂದು ಕೊಲೆಗಾರರಿಗೆ ಸಹಕಾರ ನೀಡುವಲ್ಲಿ ಹಾಗೂ ಪ್ರಕರಣವನ್ನು ಮುಚ್ಚಿಹಾಕುವಲ್ಲಿ ಶ್ರಮಿಸುತ್ತಿದ್ದಾರೆ. ಕೊಲೆಗಡುಕರಿಗೆ ಬೆಂಬಲ ನೀಡುವಲ್ಲಿ ಬಿಜೆಪಿ ಎತ್ತಿದ ಕೈ ಎನ್ನುವುದು ಈ ಪ್ರಕರಣದಿಂದ ಸಾಭೀತು ಮಾಡಿದ್ದು ಅವರ ನಿಜವಾದ ಮುಖವಾಡ ಜನರೆದುರು ಕಳಚಲಿದೆ ಎಂದು ಕಿಡಿಕಾರಿದರು.

 

ಇಂಟೆಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಮಾತನಾಡಿ, ಯತೀಶ್ ನನ್ನ ಬಳಿ ಕೆಲಸ ಮಾಡಿಕೊಂಡಿದ್ದ ಒಳ್ಲೆಯ ಯುವಕ. ಬಡತನದಲ್ಲಿ ಬೆಳೆದವನು. ಇಬ್ಬರು ಕೂಡ ಶ್ರಮಜೀವಿಗಳಾಗಿದ್ದವರು. ಅಮಾಯಕ ಯುವಕರ ಕೊಲೆ ಪ್ರಕರಣದಲ್ಲಿ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ ಪಾತ್ರವಿದೆ ಎಂದು ಪೊಲೀಸರಿಗೆ ಪ್ರಥಮವಾಗಿ ತಿಳಿಸಿದ್ದೇ ನಾನು. ಪೊಲೀಸರು ಆ ವ್ಯಕ್ತಿ ಮೇಲೆ ಈ ಹಿಂದೆಯೇ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರೆ ಈ ಕೊಲೆಯೇ ನಡೆಯುತ್ತಿರಲಿಲ್ಲ. ಆದರೆ ಈಗಲೂ ಕಾಲ ಮಿಂಚಿಲ್ಲ ತಕ್ಕ ಶಿಕ್ಷೆಯಾಗಬೇಕು ಎಂದರು.

ಪ್ರಕರಣದ ಆರೋಪಿಯಾಗಿರುವ ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್ ತತ್‌ಕ್ಷಣ ರಾಜೀನಾಮೆ ನೀಡಬೇಕು. ಬಿಜೆಪಿಯವರಿಗೆ ನೈತಿಕತೆ ಇದ್ದರೆ ಆತನಿಂದ ರಾಜೀನಾಮೆ ಕೊಡಿಸಿ ಪಕ್ಷದಿಂದ ಉಚ್ಛಾಟಿಸಬೇಕು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಕಾಂಚನ್‌ನನ್ನು ಇದುವರೆಗೆ ಬೆಂಬಲಿಸಿ, ಬೆಳೆಸಿದ್ದಕ್ಕೆ ಸಾರ್ವಜನಿಕರಲ್ಲಿ ಕ್ಷಮೆ ಕೇಳಬೇಕು. ಇಲ್ಲವಾದರೆ ಜಿಲ್ಲೆಯಾದ್ಯಂತ ಈ ಕುರಿತು ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಕಾರರು ಆಗ್ರಹಿಸಿದರು.

ಸಂಸದೆ ಶೋಭ ಕರಂದ್ಲಾಜೆ ಕರಾವಳಿಯಲ್ಲಿ ಯಾವಾಗ ಹಿಂದೂ ಯುವಕರ ಹೆಣ ಬೀಳುತ್ತದೆ ಎಂದು ಕಾಗೆಯ ಹಾಗೆ ಕಾದು ಕುಳಿತುಕೊಳ್ಳುತ್ತಾರೆ. ತಮ್ಮ ಮುಖಂಡರಿಂದ ಅಮಾಯಕ ಹಿಂದೂ ಯುವಕರು ಶವವಾದರೆ ಈಕೆ ಪತ್ತೆಯೇ ಇರುವುದಿಲ್ಲ ಎಂದು ಪಕ್ಷದ ಮುಖಂಡ ಕಿಶನ್ ಹೆಗ್ಡೆ ಕೊಳ್ಕೆಬಲು ಹಾಗೂ ಗೋಪಾಲ ಭಂಡಾರಿ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ಧನ ತೋನ್ಸೆ ಹಾಗೂ ಮುಖಂಡರಾದ ಗೋಪಾಲ ಭಂಡಾರಿ, ಅಮೃತ್ ಶೆಣೈ, ವಿಕಾಸ್ ಹೆಗ್ಡೆ, ತಿಮ್ಮ ಪೂಜಾರಿ ಕೋಟ, ಮಲ್ಯಾಡಿ ಶಿವರಾಮ್ ಶೆಟ್ಟಿ ಈ ಸಂದರ್ಭ ಮಾತನಾಡಿದರು.

ರಾಜಕೀಯ ಒತ್ತಡವಿದ್ದರೂ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ ಎಸ್.ಪಿ. ಹಾಗೂ ಅವರ ತಂಡಕ್ಕೆ ಕಾಂಗ್ರೆಸ್ ಈ ಸಂದರ್ಭ ವ್ಯಾಪಕ ಅಭಿನಂದನೆಗಳು ಸಲ್ಲಿಸಿತು.

ಸಭೆಯಲ್ಲಿ ರಾಜಾರಾಮ್ ಸಾಸ್ತಾನ, ಇಸ್ಮಾಯಿಲ್ ಅತ್ರಾಡಿ ಹಾಗೂ ಕೊಲೆಯಾದ ಯುವಕರ ಕುಟುಂಬದವರು ಉಪಸ್ಥಿತರಿದ್ದರು.
ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಪ್ರಸ್ತಾವಿಕ ಮಾತನಾಡಿದರು. ಶ್ರೀನಿವಾಸ್ ಅಮೀನ್, ಗಣೇಶ್ ನೆಲ್ಲಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ಆರೊಪಿಗಳಿಗೆ ಕಠಿಣ ಶಿಕ್ಷೆಯಾಗುವ ಕುರಿತು ಕಾನೂನು ರೀತ್ಯಾ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಕೋಟ ಠಾಣಾಧಿಕಾರಿ ನರಸಿಂಹ ಶೆಟ್ಟಿಯವರ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಇದನ್ನೂ ಓದಿರಿ: 

ಕೋಟದಲ್ಲಿ ತಲವಾರು ದಾಳಿ: ಕ್ಷುಲ್ಲಕ ಕಾರಣಕ್ಕೆ ಹರಿಯಿತು ಇಬ್ಬರ ನೆತ್ತರು (Updated)

ಆಪ್ತಮಿತ್ರರಿಬ್ಬರ ಬರ್ಬರ ಕೊಲೆ ಪ್ರಕರಣ: ಕೋಟ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ (Video)

ಟಾಯ್ಲೆಟ್ ಪಿಟ್ ನಿರ್ಮಾಣದ ತಕರಾರು: ಆಪ್ತ ಮಿತ್ರರಿಬ್ಬರ ಮೇಲೆ ತಲವಾರು ಬೀಸಿದ ಹಂತಕರು

ಕೋಟ ಆಪ್ತಮಿತ್ರರನ್ನು ಕೊಂದ ಕೊಲೆಗಾರರ ಪತ್ತೆಗೆ ಚುರುಕುಗೊಂಡ ತನಿಖೆ

ಕೋಟದಲ್ಲಿ ಸ್ನೇಹಿತರಿಬ್ಬರ ಮರ್ಡರ್ ಕೇಸ್: ಆರೋಪಿಗಳಿಗಾಗಿ ಮುಂದುವರಿದ ಶೋಧ

ಕೋಟ ಅವಳಿ ಕೊಲೆ: ಹರೀಶ್ ರೆಡ್ಡಿ ಸಹಚರರು ಇನ್ನೂ ಭೂಗತ!

ಇನ್ನೂ ಪತ್ತೆಯಾಗದ ಕೊಲೆಗಾರರು; ನ್ಯಾಯಕ್ಕಾಗಿ ಆಗ್ರಹಿಸಿ ಫೆ.3ಕ್ಕೆ ಕೋಟ ಬಂದ್

ಕೋಟದಲ್ಲಿ ಅವಳಿ ಕೊಲೆ ಪ್ರಕರಣ: ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಬಂದ್, ಪ್ರತಿಭಟನೆ (Video)

ಕೋಟ ಅವಳಿ ಕೊಲೆ ಪ್ರಕರಣದ ಆರೋಪಿಗಳ ಬಂಧನ? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಅಂತೆಕಂತೆ!

ಕೋಟ ಡಬ್ಬಲ್ ಮರ್ಡರ್ ಕೇಸ್: ಇಬ್ಬರು ಆರೋಪಿಗಳ ಬಂಧನ

ಕೋಟ ಸ್ನೇಹಿತರ ಕೊಲೆಗೆ ಜಿ.ಪಂ ಸದಸ್ಯನೇ ಸೂತ್ರಧಾರಿ; ಪೊಲೀಸರಿಂದ 6 ಮಂದಿ ಬಂಧನ

ಕೋಟ ಅವಳಿ ಕೊಲೆಯ ಆರು ಆರೋಪಿಗಳಿಗೆ ಫೆ.15ರವರೆಗೆ ಪೊಲೀಸ್ ಕಸ್ಟಡಿ, ಮುಂದುವರಿಯಲಿದೆ ತನಿಖೆ

ಕೋಟ ಜೋಡಿ ಕೊಲೆ ಪ್ರಕರಣ ನಡೆದ ಮನೆಯಲ್ಲಿ ಮಹಜರು; ಕೃತ್ಯಕ್ಕೆ ಬಳಸಿದ್ದ 2 ಬೈಕ್ ವಶ

ಕೋಟ ಸ್ನೇಹಿತರಿಬ್ಬರ ಕೊಲೆ ಪ್ರಕರಣ: ರೆಡ್ಡಿಗೆ ಸಹಕರಿಸಿದ ಇಬ್ಬರು ಪೊಲೀಸರು ಅರೆಸ್ಟ್

Comments are closed.