ಕರಾವಳಿ

ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಿಲ್ಲ; ಉಡುಪಿಯಲ್ಲಿ ಮೋದಿ ಸೋದರ ಪ್ರಹ್ಲಾದ್ ಮೋದಿ

Pinterest LinkedIn Tumblr

ಉಡುಪಿ: ಕರಾವಳಿಯಲ್ಲಿ ದೇವಳ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಇಂದು ಕೃಷ್ಣ ಮಠಕ್ಕೆ ಅಗಮಿಸಿ ದೇವರ ದರ್ಶನ ಪಡೆದರು. ಶ್ರೀ ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿ ಮಠದ ಗೋಶಾಲೆಗೆ ಭೇಟಿ ನೀಡಿದರು .ಇದೇ ಸಂಧರ್ಭ ಮಾಧ್ಯಮವರ ಪ್ರಶ್ನೆಗೆ ಉತ್ತರಿಸಿದ ಅವರು ಇದೇ ಮೊದಲ ಬಾರಿಗೆ ಮಠಕ್ಕೆ ಭೇಟಿ ಕೊಡುತ್ತಿದ್ದೇನೆ ,ಇದೊಂದು ಧಾರ್ಮಿಕ ಉದ್ದೇಶದ ಭೇಟಿ ಎಂದರು.

ಮೋದಿ ಸರ್ಕಾರದ ಬಗ್ಗೆ ಖುಷಿಯಿದೆ. ಸರ್ಕಾರದಲ್ಲಿ ಕಳೆದ ಐದು ವರ್ಷಗಳಿಂದ ಎನ್ ಡಿ ಎ ಸರಕಾರ ಉತ್ತಮ ಕೆಲಸ ಮಾಡಿದೆ ,ಜನರು ಎನ್ ಡಿ ಎ ಕಾರ್ಯವೈಖರಿ ಬಗ್ಗೆ ವಿಷಯದಲ್ಲಿ ಖುಷಿಯಾಗಿದ್ದಾರೆ. ದೇಶದ ಜನತೆಗೆ ಸಂತುಷ್ಟವಾಗಿದೆ ಇಂದು ಭಾರತವನ್ನು ವಿಶ್ವವೇ ಗುರುತಿಸುವಂತೆ ಮಾಡಿದ್ದು ಎನ್ ಡಿ ಎ ಸರಕಾರದ ಸಾಧನೆ ಎಂದು ಮೋದಿ ಸರ್ಕಾರವನ್ನು ಶ್ಲಾಘಿಸಿದರು. ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ ಎಂದು ಜನತೆ ಬಯಸುತ್ತಿದ್ದಾರೆ.ನಾನು ಯಾವತ್ತೂ ಸಹೋದರ ಮೋದಿಯನ್ನು ಟೀಕಿಸಿರಲಿಲ್ಲ ಅದೆಲ್ಲಾ ಕೇವಲ ಊಹಾಪೋಹವಾಗಿದೆ.

ನಾನು ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಿದ್ದೆ ಅನ್ನೋದು ಸುಳ್ಳು, ಸಹೋದರ ನರೇಂದ್ರ ಮೋದಿಯನ್ನು ಬಿಟ್ಟು ನಾನ್ಯಾಕೆ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಲಿ? ಇನ್ನೂ ಕಾಂಗ್ರೆಸ್ ನಲ್ಲಿ ಪ್ರಿಯಾಂಕ ಗಾಂಧಿ ಪ್ರವೇಶದ ಬಗ್ಗೆ ಲೇವಾಡಿ ಮಾಡಿದ ಪ್ರಹ್ಲಾದ್ ಮೋದಿ ದೇಶದಲ್ಲಿ ಬಹಳಷ್ಟು ಪ್ರಿಯಾಂಕಾಗಳಿದ್ದಾರೆ
ಒಬ್ಬ ಪ್ರಿಯಾಂಕಾ ಬಂದರೆ ಏನಾಗುತ್ತೆ? ಎಂದರು.

Comments are closed.