ಕರಾವಳಿ

ಕೋಟ ಡಬಲ್ ಮರ್ಡರ್ ಕೇಸಿನ 16 ಆರೋಪಿಗಳು ನ್ಯಾಯಾಲಯಕ್ಕೆ ಹಾಜರು: ಇಬ್ಬರಿಗೆ ಪೊಲೀಸ್ ಕಸ್ಟಡಿ (Video)

Pinterest LinkedIn Tumblr

ಕುಂದಾಪುರ: ಕೋಟದ ಮಣೂರು ಗ್ರಾಮದ ಚಿಕ್ಕನಕೆರೆಯಲ್ಲಿ ಜ.26 ತಡರಾತ್ರಿ ನಡೆದ ಆಪ್ತಮಿತ್ರರಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 16 ಮಂದಿ ಆರೋಪಿಗಳನ್ನು ಶುಕ್ರವಾರದಂದು ಕುಂದಾಪುರ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಪೈಕಿ ಹದಿನಾಲ್ಕು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಪ್ರಮುಖ ಆರೋಪಿ ಚಂದ್ರಶೇಖರ್ ರೆಡ್ಡಿ ಮತ್ತು ಸುಜಯ್ ಎಂಬ ಇಬ್ಬರಿಗೆ ಫೆ.20ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

 

ಪ್ರಮುಖ ಆರೋಪಿಗಳಾದ ಹರೀಶ್ ರೆಡ್ಡಿ, ರಾಜಶೇಖರ್ ರೆಡ್ಡಿ, ಜಿಲ್ಲಾಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ಮಹೇಶ ಗಾಣಿಗ, ರವಿಚಂದ್ರ, ರವೀಂದ್ರ ಅಲಿಯಾಸ್ ಮೆಡಿಕಲ್ ರವಿ, ಉಡುಪಿ ಪುತ್ತೂರು ಸುಬ್ರಹ್ಮಣ್ಯ ನಗರದ ಅಭಿಷೇಕ ಅಲಿಯಾಸ್ ಅಭಿ ಪಾಲನ್ (23), ಬಾರ್ಕೂರು ಹನೆಹಳ್ಳಿ ಗ್ರಾಮದ ಸಂತೋಷ್ ಕುಂದರ್ (35) ಬ್ರಹ್ಮಾವರ ನಿವಾಸಿ ನಾಗರಾಜ ಅಲಿಯಾಸ್ ರೊಟ್ಟಿ ನಾಗರಾಜ(44), ಭದ್ರಾವತಿ ನಿವಾಸಿ ಪ್ರಣವ್ ರಾವ್ (20) ಮತ್ತು ಅಂಜಾರು ನಿವಾಸಿ ಶಂಕರ ಮೊಗವೀರ(41), ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಾದ ಪವನ್ ಅಮಿನ್ ಮತ್ತು ವೀರೇಂದ್ರ ಆಚಾರ್ಯ, ಉಡುಪಿ ನಿವಾಸಿ ರತೀಶ್ ಕರ್ಕೇರಾ ಎನ್ನುವ ಆರೋಪಿಗಳಿಗೆ ಮಾ.1ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಆರೋಪಿಗಳೆಲ್ಲರನ್ನೂ ಹಿರಿಯಡಕ ಸಬ್ ಜೈಲಿಗೆ ರವಾನಿಸಲಾಗಿದೆ.

ಅಭಿಷೇಕ ಅಲಿಯಾಸ್ ಅಭಿ ಪಾಲನ್, ಸಂತೋಷ್ ಕುಂದರ್, ನಾಗರಾಜ ಅಲಿಯಾಸ್ ರೊಟ್ಟಿ ನಾಗರಾಜ, ಪ್ರಣವ್ ರಾವ್, ಶಂಕರ ಮೊಗವೀರ, ರತೀಶ್ ಕರ್ಕೇರಾ, ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಗಳಾದ ಪವನ್ ಅಮಿನ್ ಮತ್ತು ವೀರೇಂದ್ರ ಆಚಾರ್ಯ ಎನ್ನುವರು ಈ ಹಿಂದೆ ನ್ಯಾಯಾಂಗ ಬಂಧನದಲ್ಲಿದ್ದು ಇವರೆಲ್ಲರನ್ನೂ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.ಉಡುಪಿ ಜಿಪಂ ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್, ರೌಡಿಶೀಟರ್ ರಾಜಶೇಖರ ರೆಡ್ಡಿ, ಹರೀಶ್ ರೆಡ್ಡಿ, ಮಹೇಶ್ ಗಾಣಿಗ, ಮೆಡಿಕಲ್ ರವಿ, ರವಿಚಂದ್ರ ಪೂಜಾರಿ, ಚಂದ್ರಶೇಖರ್ ರೆಡ್ಡಿ ಹಾಗೂ ಸುಜಯನನ್ನು ಸಂಜೆ 4 ಗಂಟೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

3 ಆರೋಪಿಗಳಿಗೆ ಜಾಮೀನು ಅರ್ಜಿ ಸಲ್ಲಿಕೆ
ಇನ್ನು ಆರೋಪಿಗಳಾದ ಪೊಲೀಸ್ ಸಿಬ್ಬಂದಿಗಳಾದ ಪವನ್ ಅಮಿನ್, ವಿರೇಂದ್ರ ಆಚಾರ್ಯ, ಕಾಲೇಜು ವಿದ್ಯಾರ್ಥಿ ಪ್ರಣವ್ ರಾವ್ ಅವರಿಗೆ ಜಾಮೀನು ಕೋರಿ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಅರ್ಜಿ ಸಲ್ಲಿಸಿದ್ದಾರೆ. ಆರೋಪಿಗಳು ಘಟನೆಯ ಸಂದರ್ಭದಲ್ಲಿ ನೇರವಾಗಿ ಭಾಗಿಯಾಗಿಲ್ಲ. ಪ್ರಕರಣದ ಒಳ ಸಂಚು ಹಾಗೂ ಪ್ರಚೋದನೆಯಲ್ಲಿ ಭಾಗಿಯಾಗಿಲ್ಲ . ಅವರ ಮೇಲಿರುವ ಸಾಕ್ಷೀ ನಾಶ ಹಾಗೂ ಆರೋಪಿಗಳು ತಪ್ಪಿಸಿಕೊಳ್ಳಲು ಸಹಕರಿಸಿದ್ದಾರೆ ಎನ್ನುವ ಆರೋಪಗಳು ಜಾಮೀನು ಪರಿಗಣನೆಗೆ ಅರ್ಹವಾಗಿರುವ ಪ್ರಕರಣವಾಗಿರುವುದರಿಂದ ಜಾಮೀನು ಅರ್ಜಿಯನ್ನು ಪರಿಗಣಿಸಬೇಕು ಎಂದು ಮುರ್ಡೇಶ್ವರ ವಾದ ಮಂಡಿಸಿದ್ದರು. ಪ್ರಾಸಿಕ್ಯೂಶನ್‌ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಸುಮಂಗಲ ನಾಯಕ್‌ ನಾಳೆ ವಾದ ಮಂಡಿಸಲಿರುವುದರಿಂದಾಗಿ ಪ್ರಕರಣದ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಲಾಗಿದೆ.

ಪೊಲೀಸ್ ತಂಡಕ್ಕೆ ವ್ಯಾಪಕ ಪ್ರಶಂಸೆ..
ಕೊಲೆ ಪ್ರಕರಣ ನಡೆದು ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಯಾವುದೇ ಒತ್ತಡಕ್ಕೂ ಮಣಿಯದೇ ಬಂಧಿಸಿದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ನಿಸ್ಪಕ್ಷಪಾತ ತನಿಖೆ ನಡೆಸುತ್ತಿರುವ ಜಿಲ್ಲಾ ಎಸ್ಪಿ ಲಕ್ಷ್ಮಣ ನಿಂಬರಗಿ ತಂಡಕ್ಕೆ ಜನರು ಸೆಲ್ಯುಟ್ ನೀಡಿದ್ದಾರೆ. ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಕಾರ್ಕಳ ಎ.ಎಸ್ಪಿ ಕೃಷ್ಣಕಾಂತ್, ತನಿಖಾಧಿಕಾರಿ ಉಡುಪಿ ಡಿವೈಎಸ್ಪಿ ಟಿ. ಜೈಶಂಕರ್, ಬ್ರಹ್ಮಾವರ ಸಿಪಿಐ ಶ್ರೀಕಾಂತ್ ತನಿಖೆ ಮುಂದುವರೆಸುತ್ತಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

ಈ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಗಳು-

ಕೋಟದಲ್ಲಿ ತಲವಾರು ದಾಳಿ: ಕ್ಷುಲ್ಲಕ ಕಾರಣಕ್ಕೆ ಹರಿಯಿತು ಇಬ್ಬರ ನೆತ್ತರು (Updated)

ಆಪ್ತಮಿತ್ರರಿಬ್ಬರ ಬರ್ಬರ ಕೊಲೆ ಪ್ರಕರಣ: ಕೋಟ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ (Video)

ಟಾಯ್ಲೆಟ್ ಪಿಟ್ ನಿರ್ಮಾಣದ ತಕರಾರು: ಆಪ್ತ ಮಿತ್ರರಿಬ್ಬರ ಮೇಲೆ ತಲವಾರು ಬೀಸಿದ ಹಂತಕರು

ಕೋಟ ಆಪ್ತಮಿತ್ರರನ್ನು ಕೊಂದ ಕೊಲೆಗಾರರ ಪತ್ತೆಗೆ ಚುರುಕುಗೊಂಡ ತನಿಖೆ

ಕೋಟದಲ್ಲಿ ಸ್ನೇಹಿತರಿಬ್ಬರ ಮರ್ಡರ್ ಕೇಸ್: ಆರೋಪಿಗಳಿಗಾಗಿ ಮುಂದುವರಿದ ಶೋಧ

ಕೋಟ ಅವಳಿ ಕೊಲೆ: ಹರೀಶ್ ರೆಡ್ಡಿ ಸಹಚರರು ಇನ್ನೂ ಭೂಗತ!

ಇನ್ನೂ ಪತ್ತೆಯಾಗದ ಕೊಲೆಗಾರರು; ನ್ಯಾಯಕ್ಕಾಗಿ ಆಗ್ರಹಿಸಿ ಫೆ.3ಕ್ಕೆ ಕೋಟ ಬಂದ್

ಕೋಟದಲ್ಲಿ ಅವಳಿ ಕೊಲೆ ಪ್ರಕರಣ: ಆರೋಪಿಗಳ ಶೀಘ್ರ ಬಂಧನಕ್ಕೆ ಆಗ್ರಹಿಸಿ ಬಂದ್, ಪ್ರತಿಭಟನೆ (Video)

ಕೋಟ ಅವಳಿ ಕೊಲೆ ಪ್ರಕರಣದ ಆರೋಪಿಗಳ ಬಂಧನ? ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಅಂತೆಕಂತೆ!

ಕೋಟ ಡಬ್ಬಲ್ ಮರ್ಡರ್ ಕೇಸ್: ಇಬ್ಬರು ಆರೋಪಿಗಳ ಬಂಧನ

ಕೋಟ ಸ್ನೇಹಿತರ ಕೊಲೆಗೆ ಜಿ.ಪಂ ಸದಸ್ಯನೇ ಸೂತ್ರಧಾರಿ; ಪೊಲೀಸರಿಂದ 6 ಮಂದಿ ಬಂಧನ

ಕೋಟ ಅವಳಿ ಕೊಲೆಯ ಆರು ಆರೋಪಿಗಳಿಗೆ ಫೆ.15ರವರೆಗೆ ಪೊಲೀಸ್ ಕಸ್ಟಡಿ, ಮುಂದುವರಿಯಲಿದೆ ತನಿಖೆ

ಕೋಟ ಜೋಡಿ ಕೊಲೆ ಪ್ರಕರಣ ನಡೆದ ಮನೆಯಲ್ಲಿ ಮಹಜರು; ಕೃತ್ಯಕ್ಕೆ ಬಳಸಿದ್ದ 2 ಬೈಕ್ ವಶ

ಕೋಟ ಸ್ನೇಹಿತರಿಬ್ಬರ ಕೊಲೆ ಪ್ರಕರಣ: ರೆಡ್ಡಿಗೆ ಸಹಕರಿಸಿದ ಇಬ್ಬರು ಪೊಲೀಸರು ಅರೆಸ್ಟ್

ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡಿದ ಬಿಜೆಪಿಯವರಿಂದ ಕೊಲೆಗಡುಕರಿಗೆ ಬೆಂಬಲ: ಮಾಜಿ ಸಚಿವ ಸೊರಕೆ

ಕೋಟ ಸ್ನೇಹಿತರಿಬ್ಬರ ಕೊಲೆಯಲ್ಲಿ ಭಾಗಿಯಾದವನೂ ಸೇರಿ ಮತ್ತೆ ಐದು ಮಂದಿ ಬಂಧನ

ಕೋಟ ಜೋಡಿ ಕೊಲೆಗೆ ನ್ಯಾಯ ಕೇಳಿ ದೇವರ ಮೊರೆ ಹೋದವರಿಗೆ ಸಿಕ್ಕಿತು ಭರವಸೆಯ ನುಡಿ (Video

ಕೋಟ ಡಬಲ್ ಮರ್ಡರ್ ಕೇಸಿನ ಪ್ರಮುಖ ಆರೋಪಿ ಚಂದ್ರಶೇಖರ್ ರೆಡ್ಡಿ ಸಮೇತ ಇನ್ನೋರ್ವ ಬಂಧನ(Updated)

Comments are closed.