ಆರೋಗ್ಯ

ಚಿಟಿಕೆ ಹೊಡೆಯುವಷ್ಟರಲ್ಲಿ ನೆಗಡಿ ಮಾಯ

Pinterest LinkedIn Tumblr

ಯಾವುದೇ ಸಮಯದಲ್ಲಿ ನೆಗಡಿಯಾದರೆ ಕಡಿಮೆಯಾಗುವ ಸಾಧ್ಯತೆಯಿದೆ. ಆದರೆ, ಇದು ಮಳೆಗಾಲವಲ್ಲವೇ? ನೆಗಡಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ಅತ್ಯಂತ ಆಕ್ಟಿವ್ ಆಗಿ ಇರುವ ಕಾಲವಿದು. ಅದಕ್ಕೆ ಈಗೇನಾದರೂ ನೆಗಡಿಯಾದರೆ, ನರಕ ದರ್ಶನವಾಗುತ್ತದೆ. ಶ್ವಾಸಕೋಶ ಸಂಬಂಧಿ ರೋಗಗಳು, ಕಿರಿಕಿರಿ ಇರುವವರಿಗೆ ನಿದ್ದೆಯೂ ಬರುವುದಿಲ್ಲ. ಮೂಗು ಮುಚ್ಚಿಕೊಂಡು ಶರೀರವೆಲ್ಲಾ ನೋವಿನಿಂದ ಕೂಡಿದ್ದು ಲವಲವಿಕೆ ಮಾಯವಾಗುತ್ತದೆ. ಇದರಿಂದ ಏನನ್ನೂ ಮಾಡಲಾಗದೆ ನೆಗಡಿಯ ಉಪಶಮನಕ್ಕಾಗಿ, ಆರಾಮವಾಗಿರಲು ಇಂಗ್ಲಿಷ್ ಔಷದಿಗಳನ್ನು ಉಪಯೋಗಿಸುತ್ತಾರೆ. ತಾತ್ಕಾಲಿಕವಾಗಿ ಉಪಶಮನವಾದರೂ, ಶಾಶ್ವತ ಪರಿಹಾರ ದೊರೆಯುವುದಿಲ್ಲ. ಅದೇ ನಮ್ಮ ಮನೆಗಳಲ್ಲೇ ದೊರೆಯುವ ಪದಾರ್ಥಗಳಿಂದ ಉಪಶಮನ ಪಡೆಯಬಹುದು. ಅದು ಹೇಗೆಂದರೆ…

1. ಸ್ವಲ್ಪ ಹಸಿ ಶುಂಠಿಯನ್ನು ಜಜ್ಜಿ ರಸ ಹಿಂಡಿಕೊಳ್ಳಬೇಕು. ಅದಕ್ಕೆ ಸಮ ಪಾಲು ಜೇನನ್ನು ಬೆರೆಸಿ ಕುಡಿಯಬೇಕು. ಇಲ್ಲವೇ ಬಿಸಿ ಹಾಲಿಗೆ ಹಾಕಿ ಕುಡಿಯಬಹುದು. ಇದರಿಂದಾಗಿ ಮೂಗು ಮುಚ್ಚಿಕೊಂಡಿರುವುದು, ನೆಗಡಿ ಒಡನೆಯೇ ಕಡಿಮೆಯಾಗುತ್ತದೆ. ಗಂಟಲು ನೋವು ಸಹ ಕಡಿಮೆಯಾಗುತ್ತದೆ.

2. ಅರಶಿನ ಕೊಂಬನ್ನು ತೆಗೆದುಕೊಂಡು ಅದರ ಕೊನೆಯನ್ನು ಸುಡಬೇಕು. ಬರುವ ಹೊಗೆಯನ್ನು ಸೇವಿಸಬೇಕು ಅಥವಾ ಸ್ವಲ್ಪ ಅರಶಿನದ ಪುಡಿಯನ್ನು ಹಾಲಿಗೆ ಹಾಕಿ ಕುಡಿಯಬೇಕು. ಇದರಿಂದ ನೆಗಡಿ ಕಡಿಮೆಯಾಗುತ್ತದೆ.

3. ಒಂದು ಪಾತ್ರೆಗೆ ಅಗಸೆ ಬೀಜಗಳನ್ನು ಹಾಕಬೇಕು. ಅದಕ್ಕೆ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಕುದಿಸಬೇಕು. ಈಗ ಕಷಾಯ ತಯಾರಾಗಿರುತ್ತದೆ. ಇದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸ, ಜೇನು ಬೆರೆಸಿ ಕುಡಿಯಬೇಕು. ಹೀಗೆ ಬೆಳಿಗ್ಗೆ,ಮಧ್ಯಾನ್ಹ, ರಾತ್ರಿ ಹೀಗೆ ಮೂರು ಹೊತ್ತು ಈ ಕಷಾಯವನ್ನು ಕುಡಿದರೆ ನೆಗಡಿ ಮಾಯವಾಗುತ್ತೆ.

4.ಒಂದು ಪಾತ್ರೆಗೆ ನೀರು ಹಾಕಿ, ಕಾಳು ಮೆಣಸಿನ ಪುಡಿಯನ್ನು ಹಾಕಿ ಕುದಿಸಬೇಕು. ನಂತರ ಜೀರಿಗೆ ಹಾಕಿ ಮತ್ತೆ ಕುದಿಸಬೇಕು. ಸ್ವಲ್ಪ ಬೆಲ್ಲ ಸೇರಿಸಿ ಕರಗಿದನಂತರ ಸೋಸಿಕೊಂಡು ನಂತರ ಈ ಕಷಾಯವನ್ನು ಸೇವಿಸುತ್ತಿದ್ದರೆ,ಕೆಮ್ಮು, ನೆಗಡಿ, ಗಂಟಲು ನೋವು ಮಾಯವಾಗುತ್ತವೆ.

5. ಒಂದು ಪಾತ್ರೆಯಲ್ಲಿ ನೀರು ಹಾಕಿಸ್ವಲ್ಪ ಟೀ ಪುಡಿ,ಲವಂಗಗಳು, ದಾಲ್ಚಿನ್ನಿ ಚಕ್ಕೆ, ಶುಂಠಿ, ಕಾಳು ಮೆಣಸು ಹಾಕಿ ಚೆನ್ನಾಗಿ ಕುದಿಸಿ ಸೋಸಿಕೊಳ್ಳಬೇಕು. ಇದಕ್ಕೆ ಹಾಲು ಬೆರೆಸಿ ದಿಕ್ಕೆ ಮೂರು ಸಲ ಕುಡಿದರೆ, ನೆಗಡಿ, ಗಂಟಲು ನೋವು ಗುಣವಾಗುತ್ತವೆ.

Comments are closed.