ಕರ್ನಾಟಕ

ರಾಮನಗರ: ಮದುವೆ ಸಮಾರಂಭದಲ್ಲಿ ಐಸ್​ಕ್ರೀಂ ಸೇವಿಸಿ 40 ಮಂದಿ ಅಸ್ವಸ್ಥ

Pinterest LinkedIn Tumblr

ಚನ್ನಪಟ್ಟಣ: ಐಸ್‌ಕ್ರೀಂ ಸೇವಿಸಿ 40ಕ್ಕೂ ಹೆಚ್ಚು ಮಂದಿ ತೀವ್ರ ಆಸ್ವಸ್ಥರಾದ ಘಟನೆ ಚನ್ನಪಟ್ಟಣದ ಟಿಪ್ಪುನಗರ ಮಿಲನ್ ಶಾದಿ ಮಹಲ್‌ನಲ್ಲಿ ನಡೆದಿದೆ.

(ಸಾಂದರ್ಭಿಕ ಚಿತ್ರ)

ಚನ್ನಪಟ್ಟಣದ ಮಿಲನ್ ಶಾದಿ ಮಹಲ್‌ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಸುಮಾರು 80ಕ್ಕೂ ಹೆಚ್ಚು ಮಂದಿ ಐಸ್‌ಕ್ರೀಂ ಸೇವಿಸಿದ್ದರು. ಅವರ ಪೈಕಿ ಸುಮಾರು 40 ಜನರಿಗೆ ಐಸ್‌ಕ್ರೀಂ ತಿಂದ ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ತೀವ್ರ ಅಸ್ವಸ್ಥರಾಗಿದ್ದಾರೆ. ಬಳಿಕ ಅಸ್ವಸ್ಥರನ್ನು ಕೂಡಲೇ ಚನ್ನಪಟ್ಟಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಸದ್ಯಕ್ಕೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಚನ್ನಪಟ್ಟಣ ಟೌನ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Comments are closed.