ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆಯಲ್ಲಿ ಗಿಲ್ಲಿ ನಟ ವಿಜಯಿಯಾಗಿದ್ದು ಅವರ ಅಭಿಮಾನಿಗಳು ಸಂಭ್ರಮಪಡುತ್ತಿದ್ದಾರೆ. ಕರಾವಳಿ ಮೂಲದ ಮುಂಬೈ ನಿವಾಸಿ ರಕ್ಷಿತಾ ಶೆಟ್ಟಿ ರನ್ನರ್‌ಅಪ್ ಆದರು. ಬಿಗ್ ಬಾಸ್ ವಿಜೇತ ಸ್ಪರ್ಧಿಗೆ ಅಶ್ವಸೂರ್ಯ ಇಂಡಿಯಾ ಅವರಿಂದ 50 ಲಕ್ಷ ರೂ. ನಗದು ಬಹುಮಾನ, ಮಾರುತಿ ಸುಝುಕಿ ಕಂಪೆನಿಯ ದುಬಾರಿ ಕಾರು ಸಿಗಲಿದೆ. ರನ್ನರ್ ಅಪ್ ಆದ ರಕ್ಷಿತಾ ಅವರಿಗೆ ಶ್ರೀ ಸಾಯಿ ಗೋಲ್ಡ್ ಫ್ಯಾಲೆಸ್ ವತಿಯಿಂದ 20 ಲಕ್ಷದ ಗಿಫ್ಟ್ ವೋಚರ್ ಸಿಕ್ಕಿದೆ. ಹಾಗೂ ಜಾರ್ ಆಪ್ ಕಡೆಯಿಂದ 5 ಲಕ್ಷ ನಗದು ಸಿಕ್ಕಿದೆ.


12ನೇ ಸೀಸನ್ ಕನ್ನಡದ ʻಬಿಗ್ ಬಾಸ್ʼನಲ್ಲಿ ಸ್ಪರ್ಧಿಸಿದ್ದವರ ಪೈಕಿ 6 ಸ್ಪರ್ಧಿಗಳು ಫಿನಾಲೆಗೆ ಎಂಟ್ರಿ ಕೊಟ್ಟಿದ್ದು ಗಿಲ್ಲಿ, ಅಶ್ವಿನಿಗೌಡ, ರಕ್ಷಿತಾ, ರಘು, ಕಾವ್ಯಾ ಹಾಗೂ ಧನುಷ್ ಇದ್ದರು. ಧನುಷ್ ಹೊರಗೆ ಬಂದ ಬೆನ್ನಲ್ಲೆ 5 ನೇ ಸ್ಥಾನದಲ್ಲಿ ರಘು ಹಾಗೂ ನಾಲ್ಕನೇ ಸ್ಥಾನದಲ್ಲಿ ಕಾವ್ಯ ಹೊರಗೆ ಬಂದರು. ಮೂರನೇ ಸ್ಥಾನದಲ್ಲಿ (ಟಾಪ್ ಥ್ರೀ) ಗಿಲ್ಲಿ ನಟ, ರಕ್ಷಿತಾ ಹಾಗೂ ಅಶ್ವಿನಿ ಗೌಡ ಉಳಿದರು. ಮೂವರ ಆಟದ ವಿಡಿಯೋ ತುಣುಕು ಪ್ರದರ್ಶಿಸಲಾಯಿತು. ಇದೇ ವೇಳೆ 12 ವರ್ಷದಿಂದ ಬಿಗ್‌ಬಾಸ್ ಕಾರ್ಯಕ್ರಮದ ನಿರೂಪಕರಾದ ಸುದೀಪ್ ಅವರನ್ನು ಅಭಿನಂದಿಸಿದ ಬಿಗ್‌ಬಾಸ್ ವಿಟಿ ಪ್ರದರ್ಶಿಸಿ ಕೃತಜ್ಞತೆ ಸಲ್ಲಿಸಿದರು. ಅಶ್ವಿನಿ ಗೌಡ ಮೂರನೇ ಸ್ಥಾನ ಪಡೆದರು. ಅವರಿಗೆ 14 ಲಕ್ಷ ನಗದು ಬಹುಮಾನ ಲಭಿಸಿದೆ.
ಅಂತಿಮವಾಗಿ ಬಿಗ್‌ಬಾಸ್ ನಿರೂಪಕ, ನಟ ಕಿಚ್ಚ ಸುದೀಪ್ ಅವರು ಗಿಲ್ಲಿ ಹಾಗೂ ರಕ್ಷಿತಾ ಅವರ ಕೈಗಳನ್ನು ಹಿಡಿದಿದ್ದು ಗಿಲ್ಲಿ ಕೈ ಎತ್ತುವ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತರಾಗಿ ಗಿಲ್ಲಿ ಅವರನ್ನು ಘೋಷಿಸಿದರು.
ಬಿಗ್‌ಬಾಸ್ ಮನೆ ಸೆಟ್ ಹಾಕಿರುವ ಜಾಲಿವುಡ್ನ ಆವರಣದಲ್ಲಿ ಫೈನಲ್ ಪ್ರವೇಶಿಸಿದ ಅಭಿಮಾನಿಗಳು ಜಮಾಯಿಸಿದ್ದರು.
Comments are closed.