ಆರೋಗ್ಯ

ಹಣ್ಣುಗಳ ಮೇಲೆ ಅಂಕೆಗಳ ಸ್ಟಿಕರ್ಸ್ ಯಾಕೆ ಇದೆ ಗೋತ್ತೆ?

Pinterest LinkedIn Tumblr

ಹಣ್ಣುಗಳನ್ನು ತಿನ್ನುವುದರಿಂದ ನಮಗೆ ಏನೆಲ್ಲಾ ಲಾಭಗಳಾಗುತ್ತವೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಅದೆಷ್ಟೋ ಮುಖ್ಯವಾದ ಪೋಷಕಾಂಶಗಳು ನಮ್ಮ ದೇಹಕ್ಕೆ ಲಭಿಸುವುದಷ್ಟೇ ಅಲ್ಲ, ಹಲವು ಅನಾರೋಗ್ಯಗಳು ಸಹ ಹಣ್ಣು ತಿನ್ನುವುದರಿಂದ ದೂರ ಮಾಡಿಕೊಳ್ಳಬಹುದು. ದೇಹದ ನಿರ್ಮಾಣಕ್ಕೆ, ಬೆಳವಣಿಗೆಗೆ ಸಹ ನಾವು ಹಣ್ಣಗಳನ್ನು ನಿತ್ಯ ತಿನ್ನುತ್ತಿರಬೇಕು. ಆಗಲೇ ಪೌಷ್ಟಿಕವಾದ ಆಹಾರ ಸಿಕ್ಕಿ ಅದರಿಂದ ಸಂಪೂರ್ಣ ಆರೋಗ್ಯ ಉಂಟಾಗುತ್ತದೆ. ಆದರೆ ಹಣ್ಣುಗಳನ್ನು ತಿನ್ನುವುದೇನೋ ಸರಿ ಆದರೆ ಅವನ್ನು ಕೊಳ್ಳುವಾಗ ಕೆಲವು ಎಚ್ಚರಿಕೆಗಳನ್ನೂ ಪಾಲಿಸಬೇಕು. ಮುಖ್ಯವಾಗಿ ಅವನ್ನು ಹೇಗೆ ಹಣ್ಣು ಮಾಡಿದ್ದಾರೆ ಎಂಬುದು ನಮಗೆ ಗೊತ್ತಾಗಬೇಕು. ಇಲ್ಲದಿದ್ದರೆ ಕೃತಕ ರಾಸಾಯನಿಕಗಳನ್ನು ಬಳಸಿ ಹಣ್ಣು ಮಾಡಿದ್ದರೆ ಪೋಷಕಾಂಶಗಳ ಕಥೆ ಬಿಡಿ ಆರೋಗ್ಯಕ್ಕೇ ತೊಂದರೆ. ಹಾಗಾಗಿ ಹಣ್ಣುಗಳನ್ನು ಕೊಳ್ಳುವಾಗ ಅವನ್ನು ಸಹಜವಾಗಿ ಹಣ್ಣಾಗಿಸಿದ್ದಾರಾ? ಅಥವಾ ರಾಸಾಯನಿಕಗಳನ್ನು ಬಳಸಿದ್ದಾರಾ? ಎಂಬ ವಿಷಯಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳಬೇಕು. ಆ ಸಂಗತಿಗಳನ್ನು ನಮಗೆ ಅಂಗಡಿಯವ ಯಾವುದೇ ಕಾರಣಕ್ಕೂ ಹೇಳಲ್ಲ. ಅಂತಹ ಸಂದರ್ಭದಲ್ಲಿ ಹಣ್ಣುಗಳನ್ನು ಹೇಗೆ ಹಣ್ಣಾಗಿಸಿದ್ದಾರೆ ಎಂಬುದು ನಮಗೆ ಹೇಗೆ ಗೊತ್ತಾಗುತ್ತದೆ? ಎಂದರೆ ಅದಕ್ಕೂ ಒಂದು ಮಾರ್ಗವಿದೆ..!

ನೀವು ಎಂದಾದರೂ ಹಣ್ಣುಗಳನ್ನು ಕೊಳ್ಳುವಾಗ ಅವುಗಳ ಮೇಲೆ ಹಲವು ಸಂಖ್ಯೆಗಳಲ್ಲಿ ಬರೆದ ಸ್ಟಿಕರ್ಸ್ ಗಮನಿಸಿಯೇ ಇರುತ್ತೀರ. ಅವನ್ನು ನೀವು ನೋಡಿಯೇ ಇರುತ್ತೀರ. ಆದರೆ ಅವುಗಳ ಬಗ್ಗೆ ನಿಮಗೆ ಗೊತ್ತಿರಲ್ಲ. ಇದೇ ಸಂಖ್ಯೆಗಳು ಮೇಲೆ ತಿಳಿಸಿದ ಮಾಹಿತಿಯನ್ನು ತಿಳಿಸುತ್ತವೆ. ಅಂದರೆ ಆ ಹಣ್ಣುಗಳು ಸಹಜವಾಗಿ ಹಣ್ಣಾಗಿರುವುದಾ, ಅಥವಾ ರಾಸಾಯನಿಕಗಳನ್ನು ಬಳಸಿ ಹಣ್ಣಾಗಿಸಿದ್ದಾರಾ ಎಂಬ ಮಾಹಿತಿಯನ್ನು ಆ ಸ್ಟಿಕರ್ಸ್ ತಿಳಿಸುತ್ತವೆ. ಅದು ಹೇಗೆ ಎಂದು ತಿಳಿದುಕೊಳ್ಳಬೇಕೆಂದರೆ…

3 ಅಥವಾ 4 ಅಂಕೆಯ ನಂಬರ್ ಇದ್ದರೆ…
ಹಣ್ಣುಗಳ ಮೇಲೆ ಹಾಕುವ ಸ್ಟಿಕರ್ಸ್ ಮೇಲೆ ನಾಲ್ಕು ಅಂಕೆಗಳ ಸಂಖ್ಯೆ ಇದ್ದರೆ, ಆ ನಂಬರ್ 3 ಅಥವಾ 4ರಿಂದ ಪ್ರಾರಂಭವಾದರೆ ಆಗ ಆ ಹಣ್ಣುಗಳನ್ನು ಕೃತಕ ರಾಸಾಯನಿಕಗಳು, ಸಹಜಸಿದ್ಧವಾದ ಗೊಬ್ಬರ ಹಾಕಿ ಬೆಳೆಸಿದ್ದಾರೆ ಎಂದು ತಿಳಿಸುತ್ತದೆ. ಸಾಮಾನ್ಯವಾಗಿ ಅಂತಹ ಸ್ಟಿಕ್ಕರ್‌ಗಳು ಇರುವ ಹಣ್ಣುಗಳನ್ನು 20ನೇ ಶತಮಾನದಲ್ಲಿ ಕೃಷಿಯಲ್ಲಾದ ಕ್ರಾಂತಿಕಾರಿ ಬದಲಾವಣೆಗಳ ಆಧಾರವಾಗಿ, ನೂತನ ಪದ್ಧತಿಗಳನ್ನು ಉಪಯೋಗಿಸಿ ಬೆಳೆಸಿದ್ದಾರೆಂದು ತಿಳಿದುಕೊಳ್ಳಬೇಕು.

9 ಅಂಕೆಯ ನಂಬರ್ ಇದ್ದರೆ….
ಹಣ್ಣುಗಳ ಮೇಲೆ ಹಾಕುವ ಸ್ಟಿಕರ್ ಮೇಲೆ ಐದಂಕಿ ನಂಬರ್ ಇದ್ದು ಅದು 9ರಿಂದ ಪ್ರಾರಂಭವಾದರೆ ಆಗ ಆ ಹಣ್ಣುಗಳು ಸಾವಯವ ಗೊಬ್ಬರ ಬಳಸಿ ಅತ್ಯಂತ ಸಹಜ ಸಿದ್ಧವಾದ ಪದ್ಧತಿಯಲ್ಲಿ ಬೆಳೆದಿದ್ದಾರೆಂದು ಅರ್ಥ. ಇವು ನಮ್ಮ ದೇಹಕ್ಕೆ ಯಾವುದೇ ರೀತಿಯ ಹಾನಿಯನ್ನು ಉಂಟು ಮಾಡಲ್ಲ. ಸಂಪೂರ್ಣ ಸುರಕ್ಷಿತ.

8 ಅಂಕೆಯ ನಂಬರ್ ಇದ್ದರೆ…
ಹಣ್ಣುಗಳ ಮೇಲೆ ಹಾಕುವ ಸ್ಟಿಕರ್ ಮೇಲೆ ಐದಂಕೆ ನಂಬರ್ ಇದ್ದು ಅದು 8ರಿಂದ ಆರಂಭವಾದರೆ ಆಗ ಆ ಹಣ್ಣುಗಳನ್ನು ಕುಲಾಂತರಿ ತಳಿಯಿಂದ ಬೆಳೆದಿದ್ದಾರೆಂದು ತಿಳಿದುಕೊಳ್ಳಬೇಕು. ಈ ರೀತಿಯ ಹಣ್ಣುಗಳನ್ನು ಯಾವುದೇ ಕಾರಣಕ್ಕು ತಿನ್ನಬಾರದು. ಇವು ತುಂಬಾ ಅಪಾಯಕಾರಿ. ಅನಾರೋಗ್ಯಗಳನ್ನು ಉಂಟು ಮಾಡುತ್ತದೆ.

Comments are closed.