ಕರಾವಳಿ

ವಾಚ್‌ಮನ್ ಕುಟುಂಬದ ಮೇಲಿನ ಹಲ್ಲೆ ಆರೋಪ ಸುಳ್ಳು – ಇದು ಬಿಜೆಪಿ ಸದಸ್ಯರ ಷಡ್ಯಂತ್ರ : ಮೇಯರ್

Pinterest LinkedIn Tumblr

ಮಂಗಳೂರು, ಅಕ್ಟೋಬರ್.28: ವಾಚ್ ಮನ್ ಕುಟುಂಬದ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ಮೇಯರ್ ಕವಿತಾ ಸನಿಲ್ ಅವರು,”ಮನಪಾದ ವಿರೋಧ ಪಕ್ಷದ ಬಿಜೆಪಿ ಸದಸ್ಯೆ ಹಾಗೂ ಆಕೆಯ ಪಕ್ಷದ ಇತರ ಸದಸ್ಯರು ಸೇರಿ ನಾನು ವಾಸಿಸುತ್ತಿರುವ ಪ್ಲಾಟ್ ಗೆ ಬಂದು ಅಲ್ಲಿನ ಕಾವಲುಗಾರ (ವಾಚ್ಮನ್) ಹಾಗೂ ಆತನ ಹೆಂಡತಿಗೆ ಕುಮ್ಮಕ್ಕು ನೀಡಿ ತನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಅದರ ವಿಡಿಯೋವನ್ನು ತಯಾರಿಸಿ ವಾಟ್ಸಪ್ ಹಾಗೂ ಇತರ ಸಾಮಾಜಿಕ ಜಾಲ ತಾಣಗಳ ಮೂಲಕ ಅಪಪ್ರಚಾರದಲ್ಲಿ ತೊಡಗಿದ್ದಾರೆ. ನನ್ನ ಮೇಲಿನ ಆರೋಪದಲ್ಲಿ ಸತ್ಯಾಶವಿಲ್ಲ ಎಂದು ಯಾವ ಸ್ಥಳದಲ್ಲೂ ಹೇಳಲು ಸಿದ್ಧ ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಸೃಷ್ಟೀಕರಣ ನೀಡಿರುವ ಅವರು, ಬಿಜೆಪಿ ಮುಖಂಡರಾದ ಪೂಜಾ ಪೈ ಹಾಗೂ ರೂಪಾ ಬಂಗೇರ ಅಪಾರ್ಟ್ ಮೆಂಟ್ ಗೆ ಆಗಮಿಸಿ ವಾಚ್ ಮೆನ್ ಹಾಗೂ ಅವರ ಕುಟುಂಬಕ್ಕೆ ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸಲು ಪ್ರೋತ್ಸಾಹಿಸಿದ್ದಾರೆ .ಈ ಪ್ರಕರಣ ರಾಜಕೀಯ ಪ್ರೇರಿತ ಎಂದು ತಿಳಿಸಿದ್ದಾರೆ. ಈ ಮೂಲಕ ಅಪಾರ್ಟ್ ಮೆಂಟ್ ನ ವಾಚ್ ಮನ್, ಅವರ ಪತ್ನಿ ಹಾಗೂ ಮಗುವಿನ ಮೇಲೆ ಹಲ್ಲೆ ಮಾಡಿರುವ ಆರೋಪವನ್ನು ತಳ್ಳಿಹಾಕಿದ್ದಾರೆ.

‘ದೀಪಾವಳಿಯ ದಿನ (ನ.20ರಂದು) ನನ್ನ ಮಕ್ಕಳು ಹಾಗೂ ನಾನು ವಾಸಿಸುತ್ತಿರುವ ಪ್ಲಾಟ್ನಲ್ಲಿದ್ದ ಮಕ್ಕಳು ಸುಡುಮದ್ದನ್ನು ಸಿಡಿಸಿ ಆಟ ಆಡುತ್ತಿದ್ದರು.ಆ ಸಂದರ್ಭದಲ್ಲಿ ಕಾವಲುಗಾರನ ಹೆಂಡತಿ ನನ್ನ ಮಗಳನ್ನು ರಸ್ತೆಗೆ ಓಡಿಸಿದ್ದಾಳೆ ಎನ್ನುವುದು ನನಗೆ ತಡವಾಗಿ ಗೊತ್ತಾಯಿತು.ಈ ಬಗ್ಗೆ ನಾನು ಆಕೆಯನ್ನು ಗುರುವಾರ ವಿಚಾರಿಸಿ ಈ ರೀತಿ ಮಕ್ಕಳನ್ನು ಓಡಿಸಿದರೆ ವಾಹನ ಬರುವ ರಸ್ತೆಯಲ್ಲಿ ಮಕ್ಕಳಿಗೆ ಅಪಾಯ ಉಂಟಾಗಿದ್ದರೆ ಏನಾಗುತ್ತಿತ್ತು ?ಎಂದು ಕೇಳಿದ್ದೇನೆ.ಅದಕ್ಕೆ ಆಕೆ ತಪ್ಪಾಯಿತು ಎಂದಿದ್ದಾಳೆ.ಆಗ ನಾನು ನಿನ್ನ ವಿರುದ್ಧ ಪೊಲೀಸರಿಗೆ ದೂರು ಕೊಡ್ತೇನೆ ಎಂದು ಎಚ್ಚರಿಕೆ ನೀಡಿದ್ದೇನೆ ಹೊರತಾಗಿ ವಾಚ್ಮನ್ನ ಮಕ್ಕಳನ್ನು ಮಟ್ಟಲು ಹೋಗಿಲ್ಲ.ನನಗೂ ಮಕ್ಕಳಿದ್ದಾರೆ.ಈ ಬಗ್ಗೆ ಮನೆಯ ಆವರಣದಲ್ಲಿರುವ ಸಿ.ಸಿ ಕ್ಯಾಮರದಲ್ಲಿ ದಾಖಲಾದ ಪೋಟೇಜ್ ಇದೆ ಅದನ್ನು ನೀವು ನೋಡಿ ಯಾರ ತಪ್ಪು ಎಂದು ಜನರಿಗೆ ತಿಳಿಯುತ್ತದೆ ಎಂದು ಹೇಳಿದ್ದಾರೆ.

ಈ ಆರೋಪ ಸಮಾಜಿಕ ಜಾಲತಾಣದಲ್ಲಿ ಹರಿದಾಡುವ ಮೊದಲು ನಾನು ವಾಸಿಸುವ ಪ್ಲಾಟ್ಗೆ ಮನಪಾ ಸದಸ್ಯೆ ರೂಪಾ ಡಿ ಬಂಗೇರಾ ಮತ್ತು ಪೂಜಾ ಪೈ ಭೇಟಿ ನೀಡಿ ವಾಚ್ಮನ್ ಹಾಗೂ ಆತನ ಹೆಂಡತಿಯನ್ನು ಭೇಟಿ ಮಾಡಿರುವ ದೃಶ್ಯವೂ ಸಿ.ಸಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.ಆ ಬಳಿಕ ಅವರನ್ನು ಬಿಜೆಪಿ ಆಫೀಸಿಗೆ ಕರೆಸಿಕೊಂಡಿದ್ದಾರೆ ಎನ್ನುವುದಕ್ಕೆ ನನ್ನ ಬಳಿ ಆಧಾರವಿದೆ.ಬಳಿಕ ಅವರ ಬಾಯಿಯಿಂದ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಅದನ್ನು ಸಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿದೆ.ಈ ರೀತಿಯ ಕೀಳು ಮಟ್ಟದ ರಾಜಕೀಯಕ್ಕೆ ಬಿಜೆಪಿ ಸದಸ್ಯೆ ಇಳಿಯಬಾರದಿತ್ತು .ಇದರಿಂದ ನನಗೆ ತುಂಬಾ ನೋವಾಗಿದೆ.ಇದು ನಡೆದಿರುವ ಸತ್ಯ ಸಂಗತಿ ಇದನ್ನು ನಾನು ಯಾವ ಪುಣ್ಯ ಸ್ಥಳದಲ್ಲೂ ಸಿದ್ಧ ಎಂದು ಮೇಯರ್ ಕವಿತಾ ಸನಿಲ್ ತಿಳಿಸಿದ್ದಾರೆ.

ಪ್ಲಾಟ್ನ ಕಾವಲುಗಾರನ ವಿರುದ್ಧ ನಿವಾಸಿಗಳ ಸಹಕಾರ ಸಂಘದ ಸಭೆಯಲ್ಲಿ ಈ ಹಿಂದೆಯೂ ಬಂದಿರುವ ಆರೋಪಗಳ ಬಗ್ಗೆ ದಾಖಲೆ ಇದೆ.ಈ ಆರೋಪದಿಂದ ನನಗೆ ನೋವಾಗಿದೆ ಕಾವಲುಗಾರನ ಹೆಂಡತಿಯ ಪ್ಲಾಟ್ನ ಸಂಘದ ಅಧ್ಯಕ್ಷರಿಗೆ ದೂರು ನೀಡಿದ್ದು, ಈ ಬಗ್ಗೆ ನಾನು ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಕವಿತಾ ಸನಿಲ್ ತಿಳಿಸಿದ್ದಾರೆ.

Comments are closed.