ಕರಾವಳಿ

ಮೇಯರ್‌ರಿಂದ ವಾಚ್‌ಮೆನ್ ಕುಟುಂಬದ ಮೇಲೆ ಹಲ್ಲೆ ಆರೋಪ : ಮಹಿಳಾ ಠಾಣೆಗೆ ದೂರು

Pinterest LinkedIn Tumblr

ಮಂಗಳೂರು, ಅಕ್ಟೋಬರ್. 28: ನಗರದಲ್ಲಿ ನಡೆಯುತ್ತಿರುವ ಅಕ್ರಮ ಮಸಾಜ್ ಸೆಂಟರ್, ಇಸ್ಪಿಟ್ ಕ್ಲಬ್, ವಿಡಿಯೋ ಗೆಮ್ ಸೆಂಟರ್ ಸೇರಿದಂತೆ ಹಲವಾರು ಅಕ್ರಮ ಚಟುವಟಿಕೆಗಳನ್ನು ಮಟ್ಟ ಹಾಕವಲ್ಲಿ ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ ಖ್ಯಾತಿಯ ಜೊತೆಗೆ ವಿವಾದಕ್ಕೀಡಾಗಿರುವ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಅವರ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂದ ಪಟ್ಟಂತೆ ಪಾಂಡೇಶ್ವರ ಮಹಿಳಾ ಠಾಣೆಗೆ ದೂರು ನೀಡಲಾಗಿದೆ.

ಈ ದೂರಿನಲ್ಲಿ ಖ್ಯಾತ ಕರಾಟೆ ಪಟುವು ಆಗಿರುವ ಮೇಯರ್ ಕವಿತಾ ಸನಿಲ್ ಅವರು ಮಗುವನ್ನು ಎತ್ತಿ ಬಿಸಾಡಿದ್ದಾರೆ ಎಂಬ ಬಗ್ಗೆಯೂ ಆರೋಪಿಸಲಾಗಿದೆ. ಇದೇ ಸಂದರ್ಭದಲ್ಲಿ ವಾಚ್ ಮನ್ ಕುಟುಂಬದ ಮೇಲೆ ಮೇಯರ್ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮೇಯರ್ ಕವಿತಾ ಸನಿಲ್

ಮೇಯರ್ ಕವಿತಾ ಸನಿಲ್ ಅವರು ವಾಸವಾಗಿರುವ ಬಿಜೈಯ ರೆಸಿಡೆನ್ಸಿ ಕಟ್ಟಡ ನಿರ್ವಹಣೆಗಾಗಿ ವಾಚ್ ಮ್ಯಾನ್ ನೇಮಿಸಲಾಗಿತ್ತು. ದೀಪಾಳಿಯ ಸಂದರ್ಭದಲ್ಲಿ ಮಕ್ಕಳು ಪಟಾಕಿ ಸಿಡಿಸುವ ವಿಷಯದಲ್ಲಿ ಕವಿತಾ ಸನಿಲ್ ಅವರು ತನ್ನ ಮಗುವಿನ ಮೇಲೆ ಹಲ್ಲೆ ನಡೆಸಿದಲ್ಲದೇ ತನ್ನನ್ನು ಅವಾಚ್ಯವಾಗಿ ನಿಂದಿಸಿ ಹಲೆ ನಡೆಸಿದ್ದಾರೆ ಎಂದು ವಾಚ್ ಮನ್ ಅವರ ಪತ್ನಿ ಕಮಲಾ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಮೇಯರ್ ಕವಿತಾ ಊರಲ್ಲಿ ಇರಲಿಲ್ಲ. ಈ ಕಾರಣಕ್ಕೆ ವಾಚ್ ಮನ್ ಪುಂಡಲಿಕ ಅವರ ಪತ್ನಿ ಕಮಲಾ ಅವರು ಮೇಯರ್ ಮಗುವನ್ನು ನೋಡಿಕೊಳ್ಳುತ್ತಾ ಇದ್ದರು. ಮೇಯರ್ ಕವಿತಾರ ಮಗಳು ಮತ್ತು ವಾಚ್ ಮನ್ ನ ಇಬ್ಬರು ಮಕ್ಕಳು ಆಟವಾಡುತ್ತಿದ್ದರು. ಪಟಾಕಿ ಹೊಡೆಯುವ ಸಂದರ್ಭದಲ್ಲಿ ಮೇಯರ್ ಮಗಳಿಗೆ ವಾಚ್ ಮನ್ ಗದರಿಸಿದ್ದರು ಎಂದು ಹೇಳಲಾಗಿದೆ. ಮಗಳನ್ನು ಗದರಿಸಿದ್ದಕ್ಕಾಗಿ ವಾಚ್ ಮನ್ ಹೆಂಡತಿ ಮತ್ತು ಮಗುವಿನ ಮೇಲೆ ಕವಿತಾ ಸನಿಲ್ ದರ್ಪ ತೋರಿದ್ದಾರೆ. ಕಮಲಾರ ಜುಟ್ಟು ಹಿಡಿದು ಹಲ್ಲೆ ನಡೆಸಿದ್ದಲ್ಲದೇ ಮಗುವನ್ನು ಎತ್ತಿ ಬಿಸಾಡಿದ್ದಾರೆ. ಮೇಯರ್ ಕ್ರೌರ್ಯವನ್ನು ಪ್ರಶ್ನಿಸಿದ ವಾಚ್ ಮನ್ ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಜೆಪಿ ಮುಖಂಡರಿಂದ ಖಂಡನೆ:

ಬಿಜೆಪಿ ಮುಖಂಡರು ಮೇಯರ್ ವಾಸವಿರುವ ಅಪಾರ್ಟ್ ಮೆಂಟ್ ಗೆ ತೆರಳಿ ವಾಚ್ ಮನ್ ಹಾಗೂ ಪತ್ನಿಯ ಭೇಟಿ ಮಾಡಿ, ಮಾಹಿತಿ ಸಂಗ್ರಹಿಸಿದ್ದಾರೆ . ಅಲ್ಲದೆ ಮಂಗಳೂರು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ಬಿಜೆಪಿ ಮುಖಂಡರು ಸಂತ್ರಸ್ತರ ಬೆಂಬಲಕ್ಕೆ ನಿಂತಿದ್ದಾರೆ. ಮಂಗಳೂರು ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಮೇಯರ್ ಒಬ್ಬರು ಈ ರೀತಿ ವರ್ತನೆ ತೋರಿದ್ದಾರೆ. ಈ ಮೂಲಕ ಮೇಯರ್ ಕವಿತಾ ಸನಿಲ್ ಕಳಂಕ ತಂದಿದ್ದಾರೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಧ್ಯಕ್ಷ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.