ಬೆಳಗಾವಿ: ಅನಿವಾಸಿ ಕನ್ನಡಿಗರ ಬಹುಕಾಲದ ಪ್ರಮುಖ ಬೇಡಿಕೆಯಾಗಿರುವ ಪ್ರತ್ಯೇಕ ಸಚಿವಾಲಯವನ್ನು ಶೀಘ್ರವೇ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಖ್ಯಾತ ಅನಿವಾಸಿ ಉದ್ಯಮಿ ಡಾ.ರೋನಾಲ್ಡ್ ಕೊಲಾಸೊ ಅವರ ನೇತೃತ್ವದಲ್ಲಿ ರೂಪುಗೊಂಡ ಹತ್ತಕ್ಕೂ ಹೆಚ್ಚು ದೇಶಗಳ 45 ಮಂದಿ ಕನ್ನಡಿಗ ಪ್ರತಿನಿಧಿಗಳ ಎನ್‌ಆರ್‌ಐ ನಿಯೋಗವು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ಭೇಟಿ ಮಾಡಿ ಅನಿವಾಸಿ ಕನ್ನಡಿಗರ ಸಮಸ್ಯೆ ಹಾಗೂ ಪ್ರತ್ಯೇಕ ಸಚಿವಾಲಯ-ಇಲಾಖೆಯನ್ನು ಸ್ಥಾಪಿಸುವಂತೆ ಮನವಿ ಸಲ್ಲಿಸಿದ್ದು, ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಗಕ್ಕೆ ಭರವಸೆ ನೀಡಿದ್ದಾರೆ.
ಹೊಸದಾಗಿ ಪ್ರತ್ಯೇಕ ಸಚಿವಾಲಯ ಹಾಗು ಇಲಾಖೆಯನ್ನು ಆರಂಭಿಸಬೇಕಾದರೆ ಪಕ್ಷದ ಹೈಕಮಾಂಡ್ ಜೊತೆ ಮಾತನಾಡಬೇಕಾಗುತ್ತೆ, ಚರ್ಚಿಸಬೇಕಾಗುತ್ತೆ. ಈ ಹಿನ್ನೆಲೆಯಲ್ಲಿ ದಿಲ್ಲಿಗೆ ಆದಷ್ಟು ಬೇಗ ತೆರಳಿ, ಅಲ್ಲಿ ಹೈಕಮಾಂಡಿನೊಂದಿಗೆ ಮಾತನಾಡಿ, ಪ್ರತ್ಯೇಕ ಸಚಿವಾಲಯ ಹಾಗು ಇಲಾಖೆ ಸ್ಥಾಪನೆಗೆ ಮುಂದಿನ ಹೆಜ್ಜೆಯನ್ನಿಡುತ್ತೇನೆ ಎಂದು ಸಿದ್ದರಾಮಯ್ಯ ಭರವಸೆಯನ್ನು ನೀಡಿದ್ದಾರೆ.
ಕಾಂಗ್ರೆಸ್ಸಿನ ಚುನಾವಣಾ ಪ್ರಣಾಳಿಕೆಯಲ್ಲಿ ಅನಿವಾಸಿ ಕನ್ನಡಿಗರಿಗಾಗಿ ನೀಡಿರುವ ಇನ್ನೊಂದು ಗ್ಯಾರಂಟಿಯಾದ ಅನಿವಾಸಿ ಕನ್ನಡಿಗರು ರಾಜ್ಯದಲ್ಲಿ ಉದ್ಯಮ ನಡೆಸಲು ಉತ್ತೇಜನ ನೀಡುವ ಉದ್ದೇಶದಿಂದ 1 ಸಾವಿರ ಕೋಟಿ ರೂ. ಆವರ್ತನ ನಿಧಿ ಬಗ್ಗೆಯೂ ಹೈಕಮಾಂಡ್ ಜೊತೆ ಮಾತನಾಡಿ, ಅದನ್ನು ಈಡೇರಿಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿಎಂ ಆಶ್ವಾಸನೆ ನೀಡಿದರು.
ಎನ್‌ಆರ್‌ಐ ನಿಯೋಗಕ್ಕೆ ಸಾಥ್ ನೀಡಿದ, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ, ವಿಧಾನ ಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣ, ಅನಿವಾಸಿ ಕನ್ನಡಿಗರ ಬೇಡೀಕೆಯನ್ನು ಈಡೇರಿಸುವಂತೆ ಸಿಎಂ ಸಿದ್ದರಾಮಯ್ಯಗೆ ವಿಶೇಷ ಮನವಿಯನ್ನು ಮಾಡಿದರು.
ವಿವಿಧ ದೇಶಗಳಲ್ಲಿ ಕಾರ್ಯನಿರ್ವಹಿಸುವ ಕನ್ನಡ ಸಂಘಟನೆಗಳ ಪ್ರತಿನಿಧಿಗಳ ಹೆಸರುಗಳ ಪಟ್ಟಿಯೊಂದಿಗೆ ಈ ಮನವಿ ಸರ್ಕಾರಕ್ಕೆ ಸಲ್ಲಿಸಲಾಯಿತು. ಮನವಿಯಲ್ಲಿ ಅನಿವಾಸಿ ಕನ್ನಡಿಗರ ದೀರ್ಘಕಾಲದ ಬೇಡಿಕೆಗಳಿಗೆ ಸರಕಾರ ತ್ವರಿತ ಮತ್ತು ಸ್ಪಷ್ಟ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
ಎನ್‌ಆರ್‌ಐ ನಿಯೋಗದ ನೇತೃತ್ವವನ್ನು ಖ್ಯಾತ ಅನಿವಾಸಿ ಉದ್ಯಮಿ ಡಾ.ರೋನಾಲ್ಡ್ ಕೊಲಾಸೊ ವಹಿಸಿದ್ದು, ಸೌದಿ ಅರೇಬಿಯಾದ ಖ್ಯಾತ ಉದ್ಯಮಿ ಝಕರಿಯಾ ಜೋಕಟ್ಟೆ, ಬಿಸಿಸಿಐ ಅಧ್ಯಕ್ಷ ಹಿದಾಯತ್ ಅಡ್ಡೂರು(ದುಬೈ), ಕೆ.ಎನ್.ಆರ್.ಐ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ(ದುಬೈ), ಮೊಹಮ್ಮದ್ ಆಯಾಝ್ ಮಜೂರು(ಸೌದಿ ಅರೆಬಿಯಾ), ರವಿಕುಮಾರ್ ಶೆಟ್ಟಿ ಮೂಡಂಬೈಲ್(ದೋಹಾ-ಖತರ್), ಸಂದೇಶ್ ಆನಂದ್(ಖತರ್), ರಾಜಕುಮಾರ್ ಭಾಸ್ಕರ್(ಬಹರೈನ್), ಅಶ್ರಫ್ ಶಾ ಮಾಂತೂರು(ದುಬೈ), ಮನೋಜ್ ದೇಶಪಾಂಡೆ (ಪೋಲೆಂಡ್), ಅಜಿತ್ ಬಂಗೇರ (ಬಹರೈನ್), ಅರುಣ್ ಕುಮಾರ್ ಎಂ.ಕೆ.(ದುಬೈ), ಸರ್ವೋತ್ತಮ ಶೆಟ್ಟಿ(ಅಬುಧಾಬಿ), ಶೇಖ್ ಮುಝಫರ್(ಶಾರ್ಜಾ), ಸಚಿನ್ ಪರ್ಥ(ಪೋಲೆಂಡ್), ತೌಫಿಕ್ ಖಲಂದರ್ (ಸೌದಿ ಅರೆಬಿಯಾ), ಮೊಹಮ್ಮದ್ ಫಿರೋಝ್(ಸೌದಿ ಅರೆಬಿಯಾ), ಮೊಹಮ್ಮದ್ ಮುಸ್ತಾಕ್(ದುಬೈ), ಶಶಿಧರ್ ನಾಗರಾಜಪ್ಪ(ದುಬೈ), ಕೆ.ವಿ.ಕನಕರಾಜ (ಅಜ್ಮಾನ್), ಎಂ.ಆರ್. ಕಾಟಿಪಳ್ಳ ಇಸ್ಮಾಯಿಲ್ (ಸೌದಿ ಅರೆಬಿಯಾ), ಮೊಹಮ್ಮದ್ ಮನ್ಸೂರ್(ಬಹರೈನ್), ಅಬ್ದುಲ್ಲಾ ಮೋಯಿದಿನ್(ಖತರ್), ಸತೀಶ್ ಕುಮಾರ್(ಸೌದಿ ಅರೆಬಿಯಾ), ಮೊಹಮ್ಮದ್ ಸಲೀಂ(ಶಾರ್ಜಾ), ಪ್ರಭಾಕರ ಬಸವರಾಜು(ಕುವೈತ್), ಮಧ್ವರಾಜ್ ಅರುಣ್ ಕುಮಾರ್(ಕುವೈತ್), ಮಲ್ಲೇಶ್ ತೋಟದ್(ಇಟಲಿ), ಮಂಜುನಾಥ ಭೀಮರೆಡ್ಡಿ(ಇಟಲಿ), ಹರ್ಷ ಜಗದೀಶ್(ಸ್ವೀಡನ್), ಪ್ರವೀಣ್ ಕಲಾಸದ್(ಆಸ್ಟ್ರೇಲಿಯಾ), ಗಗನ್ ಮಂಜುನಾಥ ಗೌಡ(ಜರ್ಮನಿ), ಡಾ.ಸುಬ್ರಹ್ಮಣ್ಯ ಭಟ್(ಯು.ಎಸ್.ಎ), ಡಾ.ಅನ್ನಪೂರ್ಣ ಭಟ್(ಯು.ಎಸ್.ಎ), ಡಾ.ಶಾಕೀಲ್ (ಸೌದಿ ಅರೆಬಿಯಾ), ಅರುಣ್ ಕುಮಾರ್(ಆಸ್ಟ್ರೇಲಿಯಾ), ಅಭಿನವ್ ದೇಶಪಾಂಡೆ(ಹಂಗೇರಿ), ಮಧು(ಯು.ಎಸ್.ಎ), ರಮೇಶ್ ರಾಮಕೃಷ್ಣಯ್ಯ (ಆಸ್ಟ್ರೇಲಿಯಾ), ಪ್ರವೀಣ್(ಮೆಲ್ಬೋರ್ನ್-ಆಸ್ಟ್ರೇಲಿಯಾ) ಉಪಸ್ಥಿತರಿದ್ದರು.
Comments are closed.