ಕರಾವಳಿ

ಮಂಜೇಶ್ವರ | ಆ್ಯಂಬುಲೆನ್ಸ್- ಕಾರು ಮಧ್ಯೆ ಭೀಕರ ಅಪಘಾತ: ಮೂವರು ಮೃತ್ಯು

Pinterest LinkedIn Tumblr

ಮಂಜೇಶ್ವರ: ಆ್ಯಂಬುಲೆನ್ಸ್ -ಕಾರು ಭೀಕರ ಅಪಘಾತ ಸಂಭವಿಸಿ ಮೂವರು ಮೃತಪಟ್ಟು ನಾಲ್ಕು ಜನರಿಗೆ ಗಾಯಗಳಾದ ಘಟನೆ ಮಂಜೇಶ್ವರ ಕುಂಜತ್ತೂರು ಬಳಿ ಮೇ. 7ರ ಮಂಗಳವಾರ ಸಂಭವಿಸಿದೆ.

ಮಂಜೇಶ್ವರದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಈ ಅಪಘಾತ ಸಂಭವಿಸಿದ್ದು, ವಿರುದ್ದ ದಿಕ್ಕಿನಲ್ಲಿ ಬಂದ ಆ್ಯಂಬುಲೆನ್ಸ್ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಬೆಂಗಳೂರಿನಿಂದ ತ್ರಿಶೂರು ಭಾಗಕ್ಕೆ ಸಂಚರಿಸುತ್ತಿದ್ದ ಶಿವ, ಮೆನನ್, ಸೌರವ್ ಮೃತರು.

ಕಾಸರಗೋಡು ಚಟ್ಟಂಚಾಲ್ ನಿಂದ ಅಪಘಾತಕ್ಕೀಡಾಗಿದ್ದ ಗಾಯಾಳು ಹಾಗೂ ಜೊತೆಗಿದ್ದ ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್ ಹಾಗೂ ಮಂಗಳೂರಿನಿಂದ ಕಾಸರಗೋಡು ತ್ರಿಶೂರು ಕಡೆ ಹೋಗುತ್ತಿದ್ದ ಕಾರು ನಡುವೆ ಅಪಘಾತ ನಡೆದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಘಟನೆ ನಡೆದ ಸ್ಥಳದಲ್ಲಿ ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯರು ಕೆಲ ಕಾಲ ಜಂಟಿ ಕಾರ್ಯಾಚರಣೆ ನಡೆಸಿ ಕಾರಿನಲ್ಲಿದ್ದವರನ್ನು ಹೊರಗೆ ತೆಗೆದಿದ್ದು ಮೃತದೇಹಗಳನ್ಬು ಮಂಗಳ್ಪಾಡಿ ಶವಾಗಾರಕ್ಕೆ‌ ಕೊಂಡೋಯ್ಯಲಾಗಿದೆ.

Comments are closed.