ಕರಾವಳಿ

ಮೊಬೈಲ್ ನೆಟ್‌ವರ್ಕ್ ಪ್ರಾಬ್ಲಂ; ಮತದಾನದ ಅಪ್ಡೇಟ್ ಮಾಡಲು ಅಧಿಕಾರಿಗಳು ಹೈರಾಣ- ನೆಟ್ವರ್ಕ್ ಪಡೆಯಲು ಮೊಬೈಲ್ ಮರದ ಮೇಲಕ್ಕೆ..!

Pinterest LinkedIn Tumblr

ಬೈಂದೂರು: ನೆಟ್ವರ್ಕ್ ಸಮಸ್ಯೆಯುಳ್ಳ ‌ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಳಬೇರು ಮತಗಟ್ಟೆಯಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದೆ ಮತಗಟ್ಟೆ ಅಧಿಕಾರಿಗಳು ಅಪ್ಡೇಟ್ ನೀಡಲು ಸಮಸ್ಯೆ ಅನುಭವಿಸಿದರು.

ಕಮಲಶಿಲೆ ಗ್ರಾಮದ ಯಳಬೇರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಾಡೋ ಬೂತ್ (ನೆಟ್‌ವರ್ಕ್ ಇಲ್ಲದಿರುವ ಬೂತ್) ಆಗಿದ್ದು ಗಂಟೆಗೊಮ್ಮೆ ಅಪ್ಡೆಟ್ ಮಾಡಲು ಬಹಳಷ್ಟು ಸಮಸ್ಯೆಯಾಗಿದ್ದು ಕಂಡುಬಂದಿದೆ.

ಮತಗಟ್ಟೆ ಎದುರಿನ ಮರವೊಂದರ ಮೇಲೆ ಮೊಬೈಲ್ ಇಟ್ಟು ವೈಫೈ ಪಡೆಯಲು‌ ಅಧಿಕಾರಿಗಳು ಹರಸಾಹಸಪಟ್ಟರು.

Comments are closed.