ಕರಾವಳಿ

ಬಿ.ಆರ್ ಸೇವಾಟ್ರಸ್ಟ್ ಅಲ್ತಾರು: ವಿದ್ಯಾರ್ಥಿ ವೇತನ, ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣೆ ಮತ್ತು ಸಾಧಕರಿಗೆ ಸನ್ಮಾನ

Pinterest LinkedIn Tumblr

ಕುಂದಾಪುರ: ಬಿ.ಆರ್ ಸೇವಾಟ್ರಸ್ಟ್ ಅಲ್ತಾರು ಇವರ ವತಿಯಿಂದ 3ನೇ ವರ್ಷ ನಡೆಸಲ್ಪಟ್ಟ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಅನಾರೋಗ್ಯ ಪೀಡಿತರಿಗೆ ಸಹಾಯಧನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸಾಹೇಬರಕಟ್ಟೆ ಸ್ವಾಗತ್ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು.

ಬಸ್ರೂರಿನ ನಿವೃತ್ತ ಮುಖ್ಯೋಪಾಧ್ಯಾಯರಾದ ದಿನಕರ್ ಶೆಟ್ಟಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ, ಶಿಕ್ಷಣದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ವನದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ನಿರಂಜನ್ ಹೆಗ್ಡೆ ಅಲ್ತಾರ್, ಇಂಥ ಸಮಾಜಮುಖಿ ಕಾರ್ಯಗಳಿಗೆ ಕೈ ಜೋಡಿಸಿ ಎಂದು ಕರೆಕೊಟ್ಟರು.

ಬಿ.ಆರ್ ಸೇವಾಟ್ರಸ್ಟ್ ಅಲ್ತಾರು ಇದರ ಅಧ್ಯಕ್ಷ ಚಂದ್ರ ಅಲ್ತಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ದಸಂಸ ಭೀಮಘರ್ಜನೆ ರಾಜ್ಯ ಸಂಚಾಲಕ ಉದಯಕುಮಾರ್ ತಲ್ಲೂರು, ಮುಖ್ಯ ಅತಿಥಿಗಳಾಗಿ ಪ್ರದೀಪ್ ಬಲ್ಲಾಳ್, ಸ್ವರ್ಣ ಕಾಮತ್ ಉಡುಪಿ, ವಿಜಯ್ ಕುಮಾರ್ ಶೆಟ್ಟಿ ಆವರ್ಸೆ,ರಘುರಾಮ್ ಶೆಟ್ಟಿ ಅಲ್ತಾರು, ಅಮೃತ್ ಪೂಜಾರಿ ಯಡ್ತಾಡಿ, ಶಶಿ ಬಳ್ಕೂರು, ರಾಘು ಶಿರೂರು ಬೇಬಿ ಅಂಡಾರು ಮೊದಲಾದವರು ಭಾಗವಹಿಸಿದರು.

ಪೂರ್ವಿಕ ಅಲ್ತಾರು ಸ್ವಾಗತಿಸಿದರು, ಸತೀಶ್ ಸೂರ್ಗೋಳಿ ಪ್ರಾಸ್ತಾವಿಸಿದರು. ರಕ್ಷಿತಾ ಅಂಡಾರು ನಿರೂಪಿಸಿ,  ವಂದಿಸಿದರು.

Comments are closed.