ಕುಂದಾಪುರ: ಕೆಪಿಸಿಸಿ ಕಾರ್ಯಾಧ್ಯಕ್ಷರು, ವಿಧಾನಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಅವರ ಜನ್ಮದಿನದ ಪ್ರಯುಕ್ತ ಬುಧವಾರದಂದು ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಹಣ್ಣು ಹಂಪಲು ವಿತರಣೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಇಚ್ಚಿತಾರ್ಥ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಹಿರಿಯರು, ಕುಂದಾಪುರ ಪುರಸಭಾ ನಿಕಟಪೂರ್ವ ಸದಸ್ಯರಾದ ದೇವಕಿ ಸಣ್ಣಯ್ಯ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಭಿಜಿತ್ ಪೂಜಾರಿ ಹೇರಿಕುದ್ರು, ಕೋಣಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಸೌಮ್ಯ, ಬ್ಲಾಕ್ ಅಲ್ಪಸಂಖ್ಯಾತ ಅಧ್ಯಕ್ಷ ಮುನಾಫ್ ಕೋಡಿ, ಹಂಗಳೂರು ಗ್ರಾಮ ಪಂಚಾಯತ್ ನಿಕಟಪೂರ್ವ ಸದಸ್ಯರಾದ ರೋಶನ್ ಬರೆಟ್ಟೋ, ಜೋಸೆಫ್ ರೆಬೆಲ್ಲೋ ಆನಗಳ್ಳಿ, ಚಂದ್ರ ಪೂಜಾರಿ ಹೇರಿಕುದ್ರು, ಆದರ್ಶ ಶೆಟ್ಟಿ ಹೇರಿಕುದ್ರು , ಶಾರೂಖ್ ಕೋಡಿ, ನಿತಿನ್ ಡಿಸೋಜ ಕೋಣಿ, ಜೊಯ್ ರೆಬೆಲ್ಲೋ, ತಾಲೂಕು ವೈದ್ಯಾಧಿಕಾರಿ ಡಾ. ಪ್ರೇಮಾನಂದ, ಫಿಜಿಶಿಯನ್ ಡಾ. ನಾಗೇಶ್ ಉಪಸ್ಥಿತರಿದ್ದರು.
Comments are closed.