ಕರಾವಳಿ

ತಾನು ಓದಿದ ಕೆರಾಡಿ ಶಾಲೆಯಲ್ಲಿ ಮತದಾನ ಮಾಡಿದ ರಿಷಬ್ ಶೆಟ್ಟಿ | ವೋಟ್‌ ಮಾಡುವುದು ನಮ್ಮ ಹಕ್ಕು, ನಮ್ಮ ಜವಾಬ್ದಾರಿ: ರಿಷಬ್‌

Pinterest LinkedIn Tumblr

ಉಡುಪಿ: ಕೆರಾಡಿಯಲ್ಲಿ ಮತದಾನ ಮಾಡಿ ನಟ ರಿಷಬ್ ಶೆಟ್ಟಿ ಮಾತನಾಡಿದ್ದು, ನಾನು ದೇಶಕ್ಕೆ ಮತ ಹಾಕಿದ್ದೇನೆ. ಲೋಕಸಭಾ ಚುನಾವಣೆ ನಡೆಯುವುದು ದೇಶಕ್ಕೆ. ಮತದಾನ ನಮ್ಮ ಹಕ್ಕು ಜವಾಬ್ದಾರಿ ಅದನ್ನು ಚಲಾಯಿಸಿದ್ದೇನೆ ಎಂದಿದ್ದಾರೆ.

ಕೆರಾಡಿ ಸರಕಾರಿ ಶಾಲೆಯಲ್ಲಿ ಮತದಾನ ಮಾಡಿದ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಜನ ಕಮ್ಮಿ ಇರ್ತಾರೆ ಅಂತ ಸಂಜೆ ಬಂದಿದ್ದೇನೆ. ಸರ್ಕಾರದ ನಿರೀಕ್ಷೆ ಬೇಡಿಕೆ ಬಗ್ಗೆ ಮಾತಾಡಲ್ಲ. ಜಾಸ್ತಿ ರಾಜಕೀಯದ ಬಗ್ಗೆ ಮಾತನಾಡಲ್ಲ. ನನ್ನ ಜವಾಬ್ದಾರಿಯನ್ನು ಮಾಡಿದ್ದೇನೆ ಅಷ್ಟೇ ಎಂದಿದ್ದಾರೆ.

ತಾನು ಓದಿದ ಶಾಲೆಯಲ್ಲಿ ಮತದಾನ ಮಾಡಿದ ರಿಷಬ್. ಇದೇ ಶಾಲೆಯನ್ನು ದತ್ತು ಸ್ವೀಕಾರ ಮಾಡಿ ಅಭಿವೃದ್ಧಿ ಮಾಡುತ್ತಿದ್ದು ಚುನಾವಣೆ ಇರುವುದರಿಂದ ಪೂರ್ತಿ ಕೆಲಸ ಮಾಡಲು ಆಗಿಲ್ಲ. ಶಾಲೆಯ ಗ್ರೌಂಡನ್ನು ಮಕ್ಕಳಿಗೆ ಆಟ ಆಡಲು ದೊಡ್ಡ ಮಾಡಿದ್ದೇವೆ. ಕಟ್ಟಡದ ಕೆಲಸ ಮತ್ತು ಪೀಠೋಪಕರಣ ಕೆಲಸ ಇನ್ನು ಆಗಬೇಕಾಗಿದೆ ಎಂದರು.

Comments are closed.