ವಿಶಿಷ್ಟ

ನಿಮ್ಮ ಮೊಬೈಲ್ ಫೋನ್​ಗಳನ್ನು ತಪ್ಪಿಯು ಈ ಜಾಗದಲ್ಲಿ ಇಡಬೇಡಿ…..!

Pinterest LinkedIn Tumblr

ಮೊಬೈಲ್ ಎಂದರೆ ಈಗೀಗ ನಮ್ಮ ದಿನನಿತ್ಯದ ಭಾಗಗಳಲ್ಲೊಂದು ಎಂದೇ ಹೇಳಬಹುದು. ಬೆಳಗ್ಗೆ ಎದ್ದ ತಕ್ಷಣದಿಂದ ರಾತ್ರಿ ಮಲಗುವವರೆಗೂ ನಮ್ಮೊಂದಿಗಿರುವ ಒಂದೇ ಒಂದು ಸಾಧನ ಎಂದರೆ ಅದು ಮೊಬೈಲ್. ದಿನವಿಡೀ ಮೊಬೈಲ್ ಜತೆಯೇ ನಾವಿರುತ್ತೇವೆ. ಆದರೆ ಮೊಬೈಲ್ ಬಗ್ಗೆಯೂ ನಿಮಗೆ ಒಂದಿಷ್ಟು ಕಾಳಜಿ ಇರಲಿ. ಮೊಬೈಲ್​ನ್ನು ಕೆಲವೊಂದು ಜಾಗದಲ್ಲಿ ಇಟ್ಟರೆ ಅದು ಮೊಬೈಲ್ ಮೇಲೆ ಕೆಟ್ಟ ಪರಿಣಾಮ ಬೀಳುತ್ತದೆ. ಹಾಗಾಗಿ ಸಿಕ್ಕ ಸಿಕ್ಕ ಜಾಗದಲ್ಲಿ ನಿಮ್ಮ ಫೋನ್​ನ್ನು ಇಡಬೇಡಿ.

ಇಲೆಕ್ಟ್ರಾನಿಕ್ ವಸ್ತುಗಳ ಬಳಿ ಇಡಬೇಡಿ : ಮುಖ್ಯವಾಗಿ ಮೊಬೈಲ್​ನ್ನು ಟಿವಿ ಅಥವಾ ಕಂಪ್ಯೂಟರ್ ಸಮೀಪ ಇಡಬೇಡಿ. ಯಾಕೆಂದರೆ ಇದರಿಂದ ಹೊರಬರುವ ವಿಕಿರಣಗಳು ನಿಮ್ಮ ಸ್ಮಾರ್ಟ್ ಫೋನ್​ನ್ನು ಹಾನಿಗೊಳಿಸುತ್ತವೆ. ಇದರಿಂದ ಸಿಗ್ನಲ್​ಗಳು ಸಿಗದೇ ಇರುವ ತೊಂದರೆಗೆ ನಿಮ್ಮ ಮೊಬೈಲ್ ಒಳಗಾಗುತ್ತದೆ.

ಸೂರ್ಯನ ಕಿರಣದಿಂದ ದೂರವಿಡಿ : ಬಿಸಿಲು ಬೀಳುವಂತ ಪ್ರದೇಶದಲ್ಲಿ ಅಥವಾ ಬಿಸಿ ಇರುವ ಕಡೆ ಮೊಬೈಲ್​ನ್ನು ಇಡದಿರಿ. ಇದರಿಂದ ಸ್ಮಾರ್ಟ್ ​ಫೋನ್​ನ ಮದರ್​ಬೋರ್ಡ್​ ಹಾಗೂ ಬ್ಯಾಟರಿ ಹಾಳಾಗುವ ಸಾಧ್ಯತೆ ಇವೆ. ಕೇವಲ ಸೂರ್ಯನ ಬಿಸಿಲಿನಿಂದ ಮಾತ್ರವಲ್ಲ ಲೆಕ್ಕಕ್ಕಿಂತ ಅಧಿಕ ಸಮಯ ಚಾರ್ಜ್ ಇಟ್ಟರೆಯೂ ಈ ಸಮಸ್ಯೆಗಳು ಬರುತ್ತವೆ.

ಅಯಸ್ಕಾಂತದ ಬಳಿ ಇಡಬೇಡಿ : ಅಯಸ್ಕಾಂತದ ಬಳಿ ತಪ್ಪಿಯು ಮೊಬೈಲ್​ನ್ನು ಇಡಬೇಡಿ. ಇದು ಫೋನಿನಲ್ಲಿರುವ ಮ್ಯಾಗ್ನೆಟಿಕ್​ ಸೆನ್ಸಾರ್​ ಮೇಲೆ ನೇರಪರಿಣಾಮ ಬೀಳುತ್ತದೆ. ಅಲ್ಲದೆ NFC ಚಿಪ್ ಹಾಳಾಗುವ ಸಾಧ್ಯತೆಗಳಿವೆ. ಜತೆಗೆ ಸಿಗ್ನಲ್ ಸಮಸ್ಯೆಯೊಂದಿಗೆ ಇಂಟರ್​ನೆಟ್ ಸಮಸ್ಯೆ ಕೂಡ ಬರಬಹುದು.

ಏರೋಪ್ಲೇನ್ ಮೋಡ್​ನಲ್ಲಿಡಿ : ನಿಮಗೆ ಮೊಬೈಲ್​ ಬಳಕೆ ಇಲ್ಲದಾಗ ಏರೋಪ್ಲೇನ್ ಮೋಡ್ ಅಥವಾ ಸ್ವಿಚ್ ಆಫ್ ಮಾಡಿ ಇಡಿ. ರಾತ್ರಿ ಮಲಗುವಾಗ ನಿಮ್ಮ ದೇಹದ ಭಾಗದಿಂದ ಅಥವಾ ತಲೆಯ ಹತ್ತಿರದಿಂದ ಆದಷ್ಟು ದೂರವಿಡಿ.

ಮಕ್ಕಳ ಕೈಗೆ ಕೊಡದಿರಿ : ಚಿಕ್ಕ ಮಕ್ಕಳ ಕೈಗೆ ಸ್ಮಾರ್ಟ್​ ಫೋನ್​ನ್ನು ಕೊಡದಿರಿ. ಇದರಿಂದ ಹೊರಸೂಸುವ ವಿಕಿರಣಗಳು ಮಕ್ಕಳಲ್ಲಿ ಕ್ಯಾನ್ಸರ್​ನಂತಹ ಮಾರಕ ಕಾಯಿಲೆಗೆ ಎಡೆ ಮಾಡಿಕೊಡುತ್ತವೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಎಚ್ಚರಿಕೆಯನ್ನು ನೀಡಿದೆ.

Comments are closed.