ಬೆಂಗಳೂರು: 70ನೇ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ವಿಧಾನಸೌಧಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಜನರ ಕಣ್ಮನ ಸೆಳೆಯುತ್ತಿದೆ.

ಹಳದಿ ಹಾಗೂ ಕೆಂಪು ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ವಿಧಾನಸೌಧ ಕನ್ನಡ ಧ್ವಜವನ್ನು ಮೈದಳೆದು ನಿಂತಂತೆ ಭಾಸವಾಗುತ್ತಿದೆ. ಬಣ್ಣ-ಬಣ್ಣದ ವಿದ್ಯುತ್ ದೀಪದಿಂದ ವಿಧಾನಸೌಧಕ್ಕೆ ಹೊಸ ಕಳೆಯೇ ಬಂದಿದೆ.
ಇನ್ನು ಈ ಫೋಟೋಸ್‌ಗಳನ್ನು ಜಾಲತಾಣದಲ್ಲಿ ಸಿಎಂ ಸಿದ್ಧರಾಮಯ್ಯ ಹಂಚಿಕೊಂಡಿದ್ದು ‘ಕನ್ನಡ ರಾಜ್ಯೋತ್ಸವದ ಅಂಗವಾಗಿ ಬಣ್ಣದ ದೀಪಗಳಿಂದ ಕನ್ನಡ ಧ್ವಜವನ್ನು ಮೈದಳೆದು ನಿಂತ ವಿಧಾನಸೌಧ. ಕನ್ನಡ ನಮ್ಮ ನೆಲದ ಭಾಷೆ ಮಾತ್ರ ಆಗದೆ ಬದುಕಿನ ಭಾಷೆ, ಅನ್ನದ ಭಾಷೆಯಾಗಲಿ ಎನ್ನುವ ಹಾರೈಕೆ ನನ್ನದು’ ಎಂದು ಬರೆದುಕೊಂಡಿದ್ದಾರೆ.
Comments are closed.