ಉಡುಪಿ: ಇತ್ತೀಚೆಗೆ ಬೈಂದೂರಿನಿಂದ ಬೆಂಗಳೂರಿಗೆ ಸಾಗುತ್ತಿದ್ದ ‘ಅರ್ಜುನಾ’ ಹೆಸರಿನ ಖಾಸಗಿ ಬಸ್ಸಿನಲ್ಲಿ ಚಿನ್ನದ ಸರವೊಂದು ಸಿಕ್ಕಿದ್ದು ಅದನ್ನು ವಾರೀಸುದಾರರಿಗೆ ಹಿಂದಿರುಗಿಸುವ ಮೂಲಕ ಬಸ್ಸಿನ ಚಾಲಕ-ನಿರ್ವಾಹಕ ಪ್ರಾಮಾಣಿಕತೆ ಮೆರೆದು ಮಾದರಿಯಾಗಿದ್ದಾರೆ.

(ವಾರೀಸುದಾರರಿಗೆ ಹಸ್ತಾಂತರ)

ನ.1 ರಂದು ಬೆಂಗಳೂರಿಗೆ ಸಂಚರಿಸುತ್ತಿದ್ದ ಅರ್ಜುನಾ ಬಸ್ (ಮಾರ್ಗಸಂಖ್ಯೆ 5 ಬೈಂದೂರು-ವೈಟ್ಫೀಲ್ಡ್) ನಲ್ಲಿ ಪ್ರಯಾಣದ ವೇಳೆ ಪ್ರಯಾಣಿಕರೊಬ್ಬರು ಬಂಗಾರದ ಸರ ಕಳೆದುಕೊಂಡಿದ್ದು ಅದು ಬಸ್ ಸಿಬ್ಬಂದಿಗಳಿಗೆ ಸಿಕ್ಕಿದೆ. ವಾರೀಸುದಾರರ ಪತ್ತೆಗೆ ಈ ಬಗ್ಗೆ ವಿಡಿಯೋ ಹಂಚಿಕೊಳ್ಳಲಾಗಿದ್ದು ಸರವನ್ನು ಅರ್ಜುನಾ ಬಸ್ ಕಚೇರಿಗೆ ಬಸ್ನ ಕಂಡಕ್ಟರ್ ಶರತ್ ಮತ್ತು ಚಾಲಕ ರೂಪಕ್ ಒಪ್ಪಿಸಿದ್ದರು. ಮಣಿಪಾಲದಲ್ಲಿ ಬಸ್ ಏರಿದ್ದ ಮಹಿಳೆಯೋರ್ವರ ಸರ ಎಂಬುದು ಖಾತ್ರಿಪಡಿಸಿಕೊಂಡು ಅವರನ್ನು ಕಚೇರಿಯಿಂದ ಸಂಪರ್ಕಿಸಿ ಚಿನ್ನದ ಸರವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

ಡ್ರೈವರ್ ಮತ್ತು ಕಂಡಕ್ಟರ್ ಪ್ರಾಮಾಣಿಕ ಕಾರ್ಯವನ್ನು, ಪ್ರಯಾಣಿಕರು, ಸಾರ್ವಜನಿಕರು ಶ್ಲಾಘಿಸಿದ್ದಾರೆ. ಅಲ್ಲದೆ ಕೆಲವು ತಿಂಗಳ ಹಿಂದಷ್ಟೇ ಪ್ರಾರಂಭವಾದ ‘ಅರ್ಜುನಾ’ ಬಸ್ ಸಂಸ್ಥೆ ಹಾಗೂ ಸಿಬ್ಬಂದಿಗಳ ಜವಬ್ದಾರಿಯುತ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.
Comments are closed.