ವಿಶಿಷ್ಟ

ಹಾವಿನ ಜೊತೆ ಮದುವೆಯಾಗಿ ಜೀವನ ನಡೆಸುತ್ತಿರುವ ಈ ಯುವಕನ ಕತೆಯನ್ನೊಮ್ಮೆ ನೋಡಿ…ಅಬ್ಬಾ !

Pinterest LinkedIn Tumblr

ಬ್ಯಾಂಕಾಕ್: ಮಳೆ ಬರಲಿಲ್ಲ ಅಂತ ಕಪ್ಪೆಗಳ ಮದುವೆ, ಕತ್ತೆಗಳ ಮದುವೆ ಮಾಡಿಸೋದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಸಾವನ್ನಪ್ಪಿರುವ ತನ್ನ ಪ್ರೇಯಸಿ ಹಾವಿನ ರೂಪದಲ್ಲಿ ಜನ್ಮತಾಳಿದ್ದಾಳೆಂದು ನಂಬಿರುವ ಭಗ್ನಪ್ರೇಮಿಯೊಬ್ಬ ಸುಮಾರು 10 ಅಡಿ ಉದ್ದದ ಹಾವಿನ ಜೊತೆ ವಿವಾಹವಾಗಿರುವ ಅಚ್ಚರಿಯ ಘಟನೆ ಥೈಲ್ಯಾಂಡ್ ನಲ್ಲಿ ಬೆಳಕಿಗೆ ಬಂದಿದೆ.

ಈಗ ಆತ 10 ಅಡಿ ಹಾವಿನ ಜೊತೆಯೇ ದಿನ ಕಳೆಯುತ್ತಾನಂತೆ, ಹಾವಿನ ಜೊತೆಯಲ್ಲೇ ಟೀವಿ ನೋಡೋದು, ಸುಂದರ ಸ್ಥಳಗಳಿಗೆ ಹೋಗೋವಾಗ ಹಾವನ್ನು ಜೊತೆಗೆ ಕರೆದುಕೊಂಡು ಹೋಗುತ್ತಾನೆ, ಜಿಮ್ ಗೂ ಹೋಗುವಾಗಲೂ ಹಾವು ಜೊತೆಗೇ ಇರುವುದಾಗಿ ಡೈಲಿ ಮೇಲ್ ವರದಿ ಮಾಡಿದೆ.

ಈ ಅಪರಿಚಿತ ಯುವಕ ಬುದ್ಧ ಧರ್ಮದ ಮೇಲೆ ನಂಬಿಕೆ ಹೊಂದಿದ್ದಾನೆ. ಅಲ್ಲದೇ ಮನುಷ್ಯರು ಪ್ರಾಣಿ ರೂಪದಲ್ಲಿ ಪುನರ್ ಜನ್ಮತಾಳುತ್ತಾರೆಂಬುದು ಬೌದ್ಧಮತದ ನಂಬಿಕೆಯಾಗಿದೆ. ಸುಮಾರು 5 ವರ್ಷಗಳ ಹಿಂದೆ ಈ ಯುವಕ ತನ್ನ ಪ್ರೇಯಸಿಯನ್ನು ಕಳೆದುಕೊಂಡಿದ್ದಾನೆ. ಇದೀಗ ತನ್ನ ಪ್ರೇಯಸಿ ಹಾವಿನ ರೂಪದಲ್ಲಿ ಜನ್ಮತಾಳಿದ್ದಾಳೆಂದು ನಂಬಿ ಹಾವಿನ ಜೊತೆಯೇ ವಾಸಿಸುತ್ತಿದ್ದಾನಂತೆ!

ಡೈಲಿ ಮಿರರ್ ಜೊತೆ ಮಾತನಾಡಿರುವ ಈ ಯುವಕ, ತಾನು ಯಾವಾಗಲೂ ಹಾವಿನ ಜೊತೆಯೇ ಇರುವುದಾಗಿ ಹೇಳಿದ್ದಾನೆ. ತಾನು ಎಲ್ಲಿಗೆ ಹೋದರು ಹಾವನ್ನು ಜೊತೆಗೊಯ್ಯುತ್ತಾನಂತೆ. ಇವನ ಹುಚ್ಚಾಟ ನೋಡಿದ ಸಂಬಂಧಿಕರು, ಗೆಳೆಯರೆಲ್ಲ ಇವನಿಂದ ದೂರ ಉಳಿದುಬಿಟ್ಟಿದ್ದಾರಂತೆ! ಅಷ್ಟೇ ಅಲ್ಲ ಹಾವಿನ ಸಹವಾಸ ಮಾಡಬೇಡ, ಅದರಿಂದ ನಿನಗೆ ಅಪಾಯ ಇದೆ ಎಂಬ ಬುದ್ಧಿಮಾತನ್ನು ಈತ ಕಡೆಗಣಿಸಿದ್ದಾನೆಂದು ವರದಿ ವಿವರಿಸಿದೆ!

Comments are closed.