ಪ್ರಮುಖ ವರದಿಗಳು

ಉತ್ತರಪ್ರದೇಶದ ಪುಖರಾಯಾ ಬಳಿ ಭೀಕರ ರೈಲು ಅಪಘಾತ; 63ಕ್ಕೂ ಹೆಚ್ಚು ಜನರು ಸಾವು

Pinterest LinkedIn Tumblr

kanpur-train-accident

ಕಾನ್ಪುರ: ಉತ್ತರಪ್ರದೇಶದ ಪುಖರಾಯಾ ಬಳಿ ಭೀಕರ ರೈಲು ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ 63ಕ್ಕೂ ಹೆಚ್ಚು ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ಝಾನ್ಸಿ-ಕಾನ್ಪುರ ರೈಲ್ವೆ ಮಾರ್ಗದಲ್ಲಿ 14 ಬೋಗಿಗಳಿದ್ದ ಇಂದೋರ್ ಪಾಟ್ನಾ ಎಕ್ಸ್ ಪ್ರೆಸ್ ರೈಲು ಬೆಳಗ್ಗೆ 3.15ರ ಸುಮಾರಿಗೆ ಹಳಿತಪ್ಪಿದರಿಂದ ದುರಂತ ಸಂಭವಿಸಿದೆ.

ಪುಖರಾಯಾ ರೈಲ್ವೆ ಸ್ಟೇಷನ್ ಬಳಿ ದುರ್ಘಟನೆ ಸಂಭವಿಸಿದ್ದು ಸ್ಥಳದಲ್ಲೇ 63ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳ ಪ್ರಥಮ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಘಟನಾ ಸ್ಥಳದಲ್ಲಿ ಬಿಡುತ್ತಿರುವ ಪೊಲೀಸರು ಸ್ಥಳೀಯ ನೆರವಿನೊಂದಿಗೆ ಹಲವರನ್ನು ರಕ್ಷಿಸಿದ್ದಾರೆ. ಸದ್ಯ 30 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಭೀಕರ ರೈಲು ದುರಂತವಾಗಿರುವುದರಿಂದ ಮೃತರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.

ಝಾನ್ಸಿ-ಕಾನ್ಪುರ ರೈಲ್ವೆ ಮಾರ್ಗದಲ್ಲಿ ದುರಂತ ಸಂಭವಿಸಿದರಿಂದ ಹಲವು ರೈಲುಗಳ ಮಾರ್ಗವನ್ನು ಬದಲಿಸಲಾಗಿದೆ.

ರೈಲು ದುರಂತದ ಸಂಬಂಧ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಸೂಚನೆ ಮೇರೆಗೆ ಎನ್ಡಿಆರ್ಎಫ್ ತಂಡ ಘಟನಾ ಸ್ಥಳಕ್ಕೆ ತೆರಳಲಿದ್ದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಲಿದ್ದಾರೆ.

ರೇಲ್ವೆ ಸಹಾಯಕ ಸಂಖ್ಯೆ
ಝಾನ್ಸಿ-05101072, ಕಾನ್ಪುರ್-05151072, ಒರೈ-051621072, ಪುಖರಾಯಾ-05113-270239

Comments are closed.