ವಿಶಿಷ್ಟ

ವಿಶ್ವದ ಅತ್ಯಂತ ದೊಡ್ಡ ಹೋರಿಯ ಕಥೆಯೊಮ್ಮೆ ಕೇಳಿ…

Pinterest LinkedIn Tumblr

hori

ಬ್ರಿಟನ್: ಈ ದೈತ್ಯ ಗಾತ್ರದ ಹೋರಿಗೆ ಚಂದದ ಹೆಸರಿಟ್ಟಿದ್ದಾರೆ. ಫೀಲ್ಡ್ ಮಾರ್ಷಲ್. ಜಗತ್ತಿನಲ್ಲಿಯೇ ಇಷ್ಟು ತೂಕದ, ಇದಕ್ಕಿಂತ ಎತ್ತರದ ಇನ್ನೊಂದು ಹೋರಿ ಇಲ್ಲವೆಂಬುದೇ ಇದರ ಹೆಗ್ಗಳಿಕೆ. ಅದರ ತೂಕ 1,750ಕಿಲೋಗಳಷ್ಟಿದೆ. ಎತ್ತರ ಒಬ್ಬ ಸಾಮಾನ್ಯ ಮನುಷ್ಯನಿಗಿಂತಲೂ ಹೆಚ್ಚು. ಆರು ಅಡಿ ಏಳು ಇಂಚು ಎತ್ತರವಿರುವ ಅದು 2005ರಲ್ಲಿ ಜನಿಸಿದೆ.

ಹೌದು. ಈ ಹೋರಿ ಹೆಸರು ಬ್ರಿಟನ್ ನಲ್ಲಿದ್ದು, ಫೀಲ್ಡ್ ಮಾರ್ಷಲ್ ಎಂದು ಹೆಸರು ಪಡೆದಿದೆ. ಜಗತ್ತಿನಲ್ಲಿಯೇ ಇಷ್ಟೊಂದು ಭಾರವಾದ ಹೋರಿ ಇನ್ನೊಂದಿಲ್ಲ ಎನ್ನುವ ಹೆಗ್ಗಳಿಕೆ ಇದರದ್ದು. ಜತೆಗೆ, ಒಬ್ಬ ಸಾಮಾನ್ಯ ಮನುಷ್ಯನಿಗಿಂತಲೂ ಹೆಚ್ಚು, ಆರು ಅಡಿ ಏಳು ಇಂಚು ಎತ್ತರ ಹೊಂದಿದ್ದು ಮತ್ತೊಂದು ಗರಿಮೆ ಈ ಫೀಲ್ಡ್ ಮಾರ್ಷಲ್ ಮುಡಿಗೆ.

2005ರಲ್ಲಿ ಜನಿಸಿದ ಈ ಹೋರಿ ಹೋಲ್-ಸ್ಟೆನ್ ತಳಿಗೆ ಸೇರಿದ್ದಾಗಿದೆ. ಬ್ರಿಟನ್ ನ ಅರ್ಥರ ಡಕ್ಕೆಟ್ ಎಂಬ ವೃದ್ಧ ಸಣ್ಣ ಹಿಡುವಳಿ ರೈತ ಇದನ್ನು ಸಾಕಿದ್ದ. ಆತ ಎಂಬತನ ವಯಸ್ಸಿಗೆ ಕಾಲವಾದ ನಂತರ, ಈ ಹೋರಿಯ ಒಡೆತನ ಆತನ ದೂರದ ಸಂಬಂಧಿ ಗ್ಯಾರಿ ಬೌಡೆನ್ ಎಂಬವರಿಗೆ ಸೇರಿತು. ಅವರು ಡಲ್ ಹೋರ್ನ್ ಎಂಬಲ್ಲಿ ಕೃಷಿ ಫಾರ್ಂ ಮಾಡುತ್ತಿದ್ದು, ಫೀಲ್ಡ್ ಮಾರ್ಷಲ್ ಇಲ್ಲಿ ಬಂದುದ್ದರಿಂದ ಅದೊಂದು ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.

ಈ ದೈತ್ಯ ಹೋರಿಯ ಆಹಾರ ಪ್ರಮಾಣವೂ ಸಣ್ಣದೇನಲ್ಲ. ದಿನಕ್ಕೆ ಹದಿನೇಳು ಕೆಜಿ ಪಶು ಆಹಾರ ಬೇಕೆ ಬೇಕು. ಬಳಿಕ ಓಟ್ಸ್, ಬಾರ್ಲಿಯಂಥ ಧಾನ್ಯಗಳು, ಆಲೂಗಡ್ಡೆ ಮತ್ತು ಹಸಿರು ಮೇವಿನ ಭರ್ಜರಿ ಭೋಜನ ನೀಡಬೇಕಾಗುತ್ತದೆ. ಈಗಾಗಲೇ ಈ ಫೀಲ್ಡ್ ಮಾರ್ಷಲ್ ಅನೇಕ ಜಾನುವಾರುಗಳ ಪ್ರದರ್ಶನದಲ್ಲಿ ಭಾಗವಹಿಸಿ ಸಾಕಷ್ಟು ಪ್ರಶಸ್ತಿ ಜತೆಗೆ ನಗದು ಬಹುಮಾನವನ್ನು ಪಡೆದುಕೊಂಡಿದ್ದಾನೆ ಎನ್ನುವುದು ವಿಶೇಷ.

ದಾಖಲೆ ಪ್ರಕಾರ ಈ ಹಿಂದೆ ಬ್ರಿಟನ್ ನಲ್ಲಿಯೇ ಒಂದು ಹೋರಿ, 1830 ಕೆಜಿಯಿತ್ತು. ಅದೇ ಜಗತ್ತಿನ ಅತಿ ಭಾರವಾದ ಹೋರಿಇಯ ಕೀರ್ತಿಗೆ ದಾಖಲಾಗಿತ್ತು. ಆ ದಾಖಲೆಯನು ಸಹ 11 ವರ್ಷದ ಈ ಫೀಲ್ಡ್ ಮಾರ್ಷಲ್ ಮುರಿಯುತ್ತಾನೆ ಎನ್ನಲಾಗುತ್ತಿದೆ.

Comments are closed.