ಮನೋರಂಜನೆ

ಕಾರ್ಯಕ್ರಮವೊಂದರಲ್ಲಿ ನೃತ್ಯ ಪ್ರದರ್ಶನ ನೀಡುತ್ತಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ ನೃತ್ಯ ಕಲಾವಿದೆ ಅಶ್ವಿನಿ ಎಕಬೋಟೆ

Pinterest LinkedIn Tumblr

ashwini-ekbote

ನವದೆಹಲಿ: ಜನಪ್ರಿಯ ಮರಾಠಿ ನಟಿ ಮತ್ತು ನೃತ್ಯ ಕಲಾವಿದೆ ಅಶ್ವಿನಿ ಎಕಬೋಟೆ ಪುಣೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನೃತ್ಯ ಪ್ರದರ್ಶನ ನೀಡುತ್ತಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಶನಿವಾರ ರಾತ್ರಿ ಭಾರತ್ ನಾಟ್ಯ ಮಂದಿರದಲ್ಲಿ ನಡೆದ ನಾಟ್ಯತ್ರಿವಿಧ ಕಾರ್ಯಕ್ರಮದಲ್ಲಿ ಅಶ್ವಿನಿ ಪ್ರದರ್ಶನವನ್ನು ಕಣ್ತುತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದರು. ಅಶ್ವಿನಿ ಸಹ ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡದೇ ವೇದಿಕೆಗೆ ಆಗಮಿಸಿ ಹೆಜ್ಜೆ ಹಾಕಿದ್ದರು. ಈ ಸಂದರ್ಭದಲ್ಲಿ 44ರ ಹರೆಯದ ಅಶ್ವಿನಿಗೆ ಎದೆನೋವು ಕಾಣಿಸಿಕೊಂಡು, ಸ್ಥಳದಲ್ಲಿಯೇ ಮರಣವನ್ನಪ್ಪಿದರು.

ಈ ಕುರಿತು ಪೊಲೀಸರು ಮಾಹಿತಿ ನೀಡಿ, ಅಶ್ವಿನಿ ಅವರು ಸಹ ಕಲಾವಿದರಾದ ರೀವಾ ನಾತು, ಚಿನ್ಮಯ್ ಜೋಗಳೇಕರ್ ಮತ್ತು ಅನುಪಮ್ ಬಾರ್ವೆ – ಕುಲಕರ್ಣಿ ಜತೆಗೆ ಜತೆಗೆ ನರ್ತಿಸುತ್ತಿದ್ದಾಗ ಹೃದಯಾಘಾತವಾಗಿದೆ ಎಂದು ತಿಳಿಸಿದರು.

ಅಶ್ವಿನಿ ಅವರು ಗಣಪತಿ ಬಪ್ಪ ಮೋರಯಾ, ದುಹೇರಿ, ರಾಧಾ ಹೈ ಬಾವರಿ, ದುರ್ವಾ ಸೇರಿದಂತೆ ಹಲವಾರು ಕಿರುತೆರೆ ಸರಣಿಗಳಲ್ಲಿ ಅಭಿನಯಿಸಿ ಮನೆಮಾತಾಗಿದ್ದರು.

Comments are closed.