ವಿಶಿಷ್ಟ

ನಾಯಿಗಳು ನಮ್ಮೊಂದಿಗೆ ಅನ್ಯೋನ್ಯವಾಗಿರಲು ಕಾರಣ ಏನು ಗೊತ್ತಾ…? ಅದಕ್ಕೆ ನಮ್ಮ ಭಾಷೆ ಅರ್ಥ ಆಗುತ್ತಾ..?

Pinterest LinkedIn Tumblr

dog

ಹೋಗೋ, ಬಾರೋ, ಕೂತ್ಕೊ. ಹೀಗೆಲ್ಲ ಹೇಳಿದ್ದಕ್ಕೆ ನಾಯಿಗಳು ಚೆನ್ನಾಗಿ ಸ್ಪಂದಿಸೋದು ಗೊತ್ತು. ಅದಕ್ಕೂ ಹೆಚ್ಚಿಗೆ ತನ್ನ ಮಾಲೀಕ/ಮನೆ ಮಂದಿ ಹೇಳಿದ್ದೆಲ್ಲವೂ ನಾಯಿಗೆ ಅರ್ಥವಾಗುತ್ತೆ ಅಂತ ಸಮೀಕ್ಷೆ ಹೇಳಿದೆ.

ಶ್ವಾನಗಳು ಮನುಷ್ಯನ ಮಾತುಗಳನ್ನು ಹೇಗೆ ಅರ್ಥಮಾಡಿಕೊಳ್ಳುತ್ತವೆ? ಎಂಬುದನ್ನು ಸಂಶೋಧನೆ ಮಾಡಲಾಗಿದೆ. ಹಂಗೇರಿಯ ಲೊರಾಂಡ್‌ ವಿಶ್ವವಿದ್ಯಾಲಯದ ಮಂದಿ ಶ್ವಾನಗಳ ಗ್ರಹಿಕೆಯ ಸಾಮರ್ಥ್ಯ, ಭಾಷೆ ಅರ್ಥ ಮಾಡಿಕೊಳ್ಳುವ ರೀತಿ ಬಗ್ಗೆ ಈ ಸಮೀಕ್ಷೆ ಮಾಡಿದ್ದಾರೆ.

ನಿರ್ದಿಷ್ಟವಾದ ಧ್ವನಿ, ಏರಿಳಿತಗಳ ಮೂಲಕ ಅವುಗಳು ಮಾನವನ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತವೆ ಎಂದು ಹೇಳಲಾಗಿದೆ. ಒಂದು ವೇಳೆ ಮಾನವ ಗಟ್ಟಿಯಾದ ದನಿಯಲ್ಲಿ ಮಾತನಾಡುತ್ತಿದ್ದರೆ, ಅಥವಾ ಕೂಗಾಡಿದರೆ, ತನ್ನ ಮೇಲೆ ಯಾಕೋ ಅಸಮಾಧಾನವಾಗಿದೆ ಎಂದು ಶ್ವಾನಗಳು ಗ್ರಹಿಸಬಲ್ಲುದಂತೆ. ಸಮೀಕ್ಷೆಗಾಗಿ ವಿವಿಧ ಧ್ವನಿ ಮಾದರಿಗಳನ್ನು ಶ್ವಾನಗಳ ಎದುರಿಟ್ಟು ಪರಿಶೀಲಿಸಲಾಗಿದೆ. ಅದಕ್ಕೆ ಅವುಗಳ ಪ್ರತಿಕ್ರಿಯೆ ಏನು ಎಂಬುದನ್ನೂ ದಾಖಲಿಸಲಾಗಿದೆ.

ವಿಶೇಷವಾಗಿ ತರಬೇತು ಕೇಂದ್ರಗಳಲ್ಲಿ ಶ್ವಾನಗಳು ವರ್ತಿಸುವ ಬಗೆಯನ್ನು ದಾಖಲಿಸಲಾಗಿದೆ. ಎಮ್‌ ಆರ್‌ಐ ಸ್ಕ್ಯಾನ್‌ ಮೂಲಕ ಅವುಗಳ ಮೆದುಳಿನಲ್ಲಾಗುವ ವ್ಯತ್ಯಾಸವನ್ನು ಕಂಡುಹಿಡಿಯಲಾಗಿದೆ. ಮಾನವರಂತೆ ಶ್ವಾನಗಳ ಬಲ ಮೆದುಳು.

Comments are closed.