ಕರಾವಳಿ

ಖ್ಯಾತ ಮನೋವೈದ್ಯ ಡಾ. ಅಶೋಕ್ ಪೈ ಸ್ಕಾಟ್ಲೆಂಡ್‍ನಲ್ಲಿ ಹೃದಯಾಘಾತದಿಂದ ನಿಧನ

Pinterest LinkedIn Tumblr

ಸ್ಕಾಟ್ಲೆಂಡ್‍: ಖ್ಯಾತ ಮನೋವೈದ್ಯ ಡಾ.ಅಶೋಕ್ ಪೈ(69) ಗುರುವಾರ ಮಧ್ಯರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

dr_ashok-pai_death

ಡಾ. ಅಶೋಕ್ ಪೈ ಅವರು ಪತ್ನಿ ರಜನಿ ಪೈ ಅವರ ಜತೆಗೆ ಸ್ಕಾಟ್ಲೆಂಡ್‍ಗೆ ವಿಚಾರ ಸಂಕಿರಣವೊಂದರ ಸಲುವಾಗಿ ತೆರಳಿದ್ದರು. ಗುರುವಾರ ಅಶೋಕ್ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಶಿವಮೊಗ್ಗದಲ್ಲಿ ಮಾನಸ ನರ್ಸಿಂಗ್ ಹೋಮ್ ಆಸ್ಪತ್ರೆ ನಡೆಸುತ್ತಿದ್ದ ಪೈ ಅವರು ಕಾಡಿನ ಬೆಂಕಿ, ಉಷಾಕಿರಣ, ಆಘಾತ, ಮೊದಲಾದ ಸಿನಿಮಾಗಳನ್ನು ನಿರ್ಮಿಸಿದ್ದರು. ಕರ್ನಾಟಕ ಮಾನಸಿಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಅಶೋಕ್ ಪೈ ಅವರು ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿ ಹಾಗೂ ಗೌರವಕ್ಕೆ ಭಾಜನರಾಗಿದ್ದರು.

Comments are closed.