ಹಾವು ಕಚ್ಚೋದು, ಇತರ ಪ್ರಾಣಿಗಳ ದಾಳಿ ಎಲ್ಲ ಸಾಮಾನ್ಯ. ಆದರೆ ಆಸ್ಟ್ರೇಲಿಯಾದ ಘಟನೆ ತೀರಾ ವಿಚಿತ್ರ. ಜೊರ್ಡಾನ್ ಹೆಸರಿನ ಆ ವ್ಯಕ್ತಿ ವಿರುದ್ಧ ಜೇಡಗಳಿಗೆ ಅದೇನು ಸೇಡೋ ಗೊತ್ತಿಲ್ಲ. ಕೇವಲ 5 ತಿಂಗಳ ಅವಧಿಯಲ್ಲಿ 2 ಬಾರಿ ಜೇಡ ಕಚ್ಚಿದೆ. ಅದೂ ಮರ್ಮಾಂಗಕ್ಕೆ!
ಸಿಡ್ನಿಯಲ್ಲಿ ತಾನು ಪುಟಾಣಿ ಟಾಯ್ಲೆಟ್ ಬಳಸಿದ್ದೆ. ಈ ವೇಳೆಯೇ ಜೇಡ ಕಚ್ಚಿದೆ. ಇದಕ್ಕೂ ಮೊದಲೇ ಕಳೆದ ಏಪ್ರಿಲ್‌ನಲ್ಲಿ ನಡೆದ ಘಟನೆ ವೇಳೆಯೂ ಹೀಗೆ ಆಗಿದೆ ಎಂದು ಜೋರ್ಡಾನ್ ಹೇಳಿದ್ದಾನೆ.
ಪುಟಾಣಿ ಟಾಯ್ಲೆಟ್ ಗೆ ಹೋಗೋದು ಅಂದ್ರೆ ಇದೀಗ ಆತನಿಗೆ ಭೀತಿಯಂತೆ. ಕಾರಣ ಅದು ರೆಡ್‌ಬ್ಯಾಕ್ ಹೆಸರಿನ ಜಾತಿ ಜೇಡ. ವಿಷಕಾರಿಯೂ ಹೌದು. ಸೂಕ್ತ ಚಿಕಿತ್ಸೆ ಪಡೆಯದಿದ್ದರೆ, ಕಥೆ ಹರೋಹರವಾಗೋದು ಗ್ಯಾರೆಂಟಿ. ಆದರೆ ತನಗೇ ಏಕೆ? ಅದೇ ಜಾಗಕ್ಕೇ ಏಕೆ ಜೇಡ ಕಡಿಯುತ್ತೆ ಅನ್ನೋದು ಜೋರ್ಡಾನ್ ಪ್ರಶ್ನೆ!