ರಾಷ್ಟ್ರೀಯ

ಪಂಜಾಬ್ ಸೇರಿದಂತೆ ಪಾಕ್ ಗಡಿಯಲ್ಲಿ ಹೈ ಅಲರ್ಟ್; ಗ್ರಾಮಸ್ಥರ ಸ್ಥಳಾಂತರ

Pinterest LinkedIn Tumblr

punjab-villages-evacuated-on-high-alert

ನವದೆಹಲಿ: ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ನಂತರ ಭಾರತ ಮತ್ತು ಪಾಕ್ ನಡುವಿನ ಸಂಘರ್ಷ ಇನ್ನೂ ಹೆಚ್ಚಾಗಿದ್ದು, ಪಂಜಾಬ್ ಸೇರಿದಂತೆ ಪಾಕ್ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿಯಿಂದ 10 ಕಿ.ಮೀ. ದೂರದವರೆಗೆ ಗ್ರಾಮಗಳ ಜನರನ್ನು ಕೂಡಲೇ ಸ್ಥಳಾಂತರಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಜತೆಗೆ ಗಡಿಯಲ್ಲಿ ಹೆಚ್ಚುವರಿ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಯೋಧರನ್ನು ನಿಯೋಜಿಸಲು ಗೃಹ ಸಚಿವ ರಾಜನಾಥ್ ಸಿಂಗ್ ಆದೇಶಿಸಿದ್ದಾರೆ.

ಹೆಚ್ಚುವರಿ ಪಡೆಗಳ ನಿಯೋಜನೆ ಮತ್ತು ಗ್ರಾಮಸ್ಥರ ಸ್ಥಳಾಂತರದಿಂದಾಗಿ ಈ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಯುದ್ಧದ ಮುನ್ಸೂಚನೆಗಳು ಕಾಣಿಸುತ್ತಿವೆ. ಇದೇ ಸಂದರ್ಭದಲ್ಲಿ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ತುರ್ತು ಸಭೆ ಕರೆದಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ 553 ಕಿ.ಮೀ. ಉದ್ದದ ಗಡಿಪ್ರದೇಶವನ್ನು ಪಂಜಾಬ್ ಹೊಂದಿದೆ. ಪಂಜಾಬ್ ಭಾರತ ಮತ್ತು ಪಾಕ್ ನಡುವಿನ ಪ್ರಮುಖ ಕೊಂಡಿಯಾಗಿದೆ. ಇದಕ್ಕೂ ಮುನ್ನ 1965 ಮತ್ತು 1971ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಪಂಜಾಬ್ನಲ್ಲಿ ಯುದ್ಧ ನಡೆದಿತ್ತು.

Comments are closed.