ಆರೋಗ್ಯ

ಮಂಡ್ಯದ ‘5 ರೂಪಾಯಿ ಡಾಕ್ಟರ್’ ಶಂಕರೇಗೌಡ ಅವರಿಗೆ ಹೃದಯಾಘಾತ..!

Pinterest LinkedIn Tumblr

ಮಂಡ್ಯ: ಮಂಡ್ಯದಲ್ಲಿ ಐದು ರೂಪಾಯಿ ಡಾಕ್ಟರ್ ಎಂದೇ ಪ್ರಸಿದ್ಧಿ ಪಡೆದಿರುವ ಡಾ. ಶಂಕರೇಗೌಡ ಅವರಿಗೆ ಸೋಮವಾರ ರಾತ್ರಿ ಲಘು ಹೃದಯಾಘಾತ ಸಂಭವಿಸಿದೆ.

ಸಕ್ಕರೆ ನಾಡು ಮಂಡ್ಯದಲ್ಲಿ ಹಲವಾರು ವರ್ಷಗಳಿಂದ ಐದು ರೂಪಾಯಿ ಡಾಕ್ಟ್ರು ಎಂದೇ ಪ್ರಸಿದ್ದ ಪಡೆದಿದ್ದ ಚರ್ಮ ವೈದ್ಯ ಡಾ. ಶಂಕರೇ ಗೌಡರಿಗೆ ಸೋಮವಾರ ರಾತ್ರಿ ಹೃದಯಾಘಾತವಾಗಿದ್ದು ಕೂಡಲೇ ಕುಟುಂಬದವರು ಡಾ. ಶಂಕರೇ ಗೌಡರನ್ನು ಮೈಸೂರಿನ ಅಪೊಲೋ ಆಸ್ಪತ್ರೆಗೆ ದಾಖಲಿಸಿದ್ದಾರೆ‌.

ವೈದ್ಯರು ಪರೀಕ್ಷೆ ನಡೆಸಿದ್ದು, ಹೃದಯದ ಮೂರು ರಕ್ತನಾಳಗಳಲ್ಲಿ ಬ್ಲಾಕ್ ಆಗಿರುವುದಾಗಿ ತಿಳಿಸಿದ್ದಾರೆ.
ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಕರೇ ಗೌಡ ಅವರಿಗೆ ಒಂದು ವಾರದ ಬಳಿಕ ಬೈಪಾಸ್ ಸರ್ಜರಿ ಮಾಡುವ ಸಾಧ್ಯತೆಗಳಿದ್ದು, ನಾಲ್ಕು ಸ್ಟಂಟ್ ಅಳವಡಿಸಬೇಕಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಂಡ್ಯ ಜಿಲ್ಲೆಯಲ್ಲಿ ವೈದ್ಯರಾಗಿ, ರಾಜಕಾರಣಿಯಾಗಿ ತಮ್ಮ ಸರಳ ಸಜ್ಜಿನಿಕೆಯ ವ್ಯಕ್ತಿತ್ವದಿಂದ ಐದು ರೂಪಾಯಿ ಡಾಕ್ಟರ್ ಎಂದೇ ಶಂಕರೇ ಗೌಡ ಅವರು ಪ್ರಸಿದ್ಧಿ ಪಡೆದಿದ್ದಾರೆ. ಇವರು ಚಿಕಿತ್ಸೆಯ ಶುಲ್ಕವಾಗಿ ಮಂಡ್ಯದಲ್ಲಿರುವ ತಮ್ಮ ತಾರಾ ಕ್ಲಿನಿಕ್‌ನಲ್ಲಿ ಕೇವಲ 5 ರೂಪಾಯಿ ಪಡೆಯುತ್ತಾರೆ. ತಮ್ಮ ಊರಾದ ಶಿವಳ್ಳಿಯಿಂದ ಬಂದ ರೋಗಿಗಳಿಗೆ ಯಾವುದೇ ಶುಲ್ಕ ಪಡೆಯದೆ ಉಚಿತ ಚಿಕಿತ್ಸೆ ನೀಡುತ್ತಾರೆ. ಇದೇ ಕಾರಣದಿಂದಾಗಿ ಶಂಕರೇ ಗೌಡ ಅವರು ಮಂಡ್ಯ ಜಿಲ್ಲೆಯಲ್ಲಿ ಐದು ರೂಪಾಯಿ ಡಾಕ್ಟರ್ ಎಂದು ಕರೆಯುತ್ತಾರೆ.

Comments are closed.