ಆರೋಗ್ಯ

ಹಿಂದಿನ ಕಾಲದ ಜನ ಏಕೆ ಗಟ್ಟಿಮುಟ್ಟಾಗಿ ಬಲಿಷ್ಠವಾಗಿದ್ದರು ಗೋತ್ತೆ?

Pinterest LinkedIn Tumblr

ಹಿಂದಿನ ಕಾಲದಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿದ್ದ ತರಕಾರಿಗಳಲ್ಲಿ ಒಂದು ಈ ಸಿಹಿ ಗೆಣಸು. ಇದರಲ್ಲಿರುವಂತ ಆರೋಗ್ಯಕಾರಿ ಗುಣಗಳೇನು ಅನ್ನೋದನ್ನ ತಿಳಿಯುವುದಾದರೆ ವಿಟಮಿನ್ ಡಿ, ವಿಟಮಿನ್ ಬಿ 6, ಮಾಗ್ಯಶಿಯಂ, ಪೊಟ್ಯಾಶಿಯಂ ಹೀಗೆ ಅನೇಕ ಆರೋಗ್ಯಕಾರಿ ಗುಣಗಳನ್ನು ಸಿಹಿ ಗೆಣಸು ಹೊಂದಿದೆ. ಇದು ನಾಲಿಗೆಯ ರುಚಿಯನ್ನು ಹೆಚ್ಚಿಸೋದು ಅಷ್ಟೇ ಅಲ್ಲ ಇದರಲ್ಲಿ ಆರೋಗ್ಯದ ಪವಾಡವೇ ಇದೆ ಅನ್ನೋದನ್ನ ಹಿರಿಯರು ಹೇಳುತ್ತಿರುತ್ತಾರೆ.ಅದುದರಿಂದ ಅವರ ದೇಹಗಳು ಗಟ್ಟಿಮುಟ್ಟಾಗಿ ಬಲಿಷ್ಠವಾಗಿದೆ.

ಸಿಹಿ ಗೆಣಸು ದೇಹಕ್ಕೆ ಉತ್ತಮ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ಇದರಲ್ಲಿರುವಂತ ಹಲವು ಆರೋಗ್ಯಕಾರಿ ಗುಣಗಳು ಹಲವು ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ. ನೈಸರ್ಗಿಕವಾಗಿ ಸಿಗುವಂತ ಈ ಸಿಹಿ ಗೆಣಸು ಹೃದಯದ ಆರೋಗ್ಯಕ್ಕೆ ಹಾಗೂ ಹೊಟ್ಟೆಯ ಅಲ್ಸರ್ ಅಷ್ಟೇ ಅಲ್ದೆ ಹೊಟ್ಟೆಯ ಭಾದೆಗಳನ್ನು ನಿವಾರಿಸುವ ಔಷದಿ ಗುಣಗಳನ್ನು ಹೊಂದಿದೆ. ಇದರ ಸೇವನೆಯಿಂದ ಆಹಾರಗಳು ಜೀರ್ಣವಾಗಲು ಸಹಕಾರಿಯಾಗುತ್ತವೆ ಅಸಿಡಿಟಿ ಅಜೀರ್ಣತೆ ಮುಂತಾದ ಸಮಸ್ಯೆ ಕಾಡೋದಿಲ್ಲ.

ಅಷ್ಟು ಮಾತ್ರವಲ್ಲದೇ ಇದರಲ್ಲಿರುವ ವಿಶೇಷ ಗುಣ ಏನು ಅನ್ನೋದಾದರೆ ದೇಹಕ್ಕೆ ಯಾವುದೇ ವೈರಸ್ ಸೋಂಕು ತಗಲದಂತೆ ನಮ್ಮನ್ನು ಸಂರಕ್ಷಿಸುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಇರುವುದರಿಂದ ಇದ್ನನು ಸೇವನೆ ಮಾಡುವುದು ಅತಿ ಉತ್ತಮವಾಗಿದೆ.

Comments are closed.