ಆರೋಗ್ಯ

ಬಾದಾಮಿಯನ್ನು ಹೇಗೆ ಬಳಸುವುದರಿಂದ ನಮ್ಮ ಆರೋಗ್ಯ ಉತ್ತಮವಾಗಿರುವುದು.ತಿಳಿಯಿರಿ.

Pinterest LinkedIn Tumblr

ಬಾದಾಮಿ ಎನ್ನುವುದು ಒಂದು ಒಣ ಪಧಾರ್ಥ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯ ಒಂದು ಆಹಾರ ಪದಾರ್ಥವಾಗಿದೆ ಬಾದಾಮಿಯಲ್ಲಿ ಪೋಷಕಾಂಶಗಳು ಹೆಚ್ಚಾಗಿವೆ ಜೊತೆಗೆ ಬಾದಾಮಿ ಮಕ್ಕಳ ಬುದ್ಧಿ ಶಕ್ತಿಯನ್ನು ಹೆಚ್ಚಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಹಾಗಂತ ಯಾವಾಗ ಬೇಕು ಆಗ ತಿನ್ನುವವುದರಿಂದ ಇದರಿಂದ ಏನು ಪ್ರಯೋಜನವಿಲ್ಲ ಹಾಗಾದರೆ ಈ ಒಂದು ಲೇಖನದಲ್ಲಿ ಬಾದಾಮಿಯನ್ನು ಹೇಗೆ ಬಳಸುವುದರಿಂದ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎನ್ನುವುದನ್ನು ಈಗ ತಿಳಿಯೋಣ ಬನ್ನಿ. ಪ್ರತಿದಿನ ನೆನಸಿದ ನಾಲ್ಕು ಬಾದಾಮಿಯನ್ನು ತಿಂದರೆ ಅಂದಕ್ಕೆ ಅಂದ ಹೆಚ್ಚುವುದರ ಜೊತೆಗೆ ಆರೋಗ್ಯಕ್ಕೆ ಆರೋಗ್ಯ ಕೂಡ ಸಿಗುತ್ತದೆ

ಹಾಗೇನೇ ಬಾದಾಮಿ ಬೀಜಗಳು ಬಲ ವರ್ಧಕವಾದ ಒಂದು ಆಹಾರವಾಗಿದೆ ಇದರ ಪ್ರಯೋಜನ ಎಷ್ಟಿದೆ ಎನ್ನೋದನ್ನ ಈಗ ನೋಡಿ ಬಾದಾಮಿಯಲ್ಲಿ ಕೊಬ್ಬು ಕರಗಿಸುವಂತಹ ಗುಣ ಇದೆ ಇದರಲ್ಲಿ ವಿಟಮಿನ್ಸ್ ಮಿನರಲ್ಸ್ ಗಳು ಸಮೃದ್ಧಿಯಾಗಿ ಇದೆ ಈ ಬಾದಾಮಿಯಿಂದ ಮಿಲ್ಕ್ ಶೇಕ್ ನ ರೀತಿಯಲ್ಲಿ ಆಹಾರದಲ್ಲಿ ತಿಂದರೆ ಒಳ್ಳೆಯ ಫಲಿತಾಂಶಗಳು ಸಿಗುತ್ತವೆ. ಇದರಲ್ಲಿ ಶರೀರದಲಿನ ವ್ಯರ್ಥ ಪಧಾರ್ಥಗಳನ್ನು ತೆಗೆದು ಹಾಕುವ ಗುಣವಿದೆ ಪ್ರತಿದಿನ 8 ಬಾದಾಮಿಯಂತೆ ವಾರಕ್ಕೆ 5 ಬಾರಿ ಬೆಳ್ಳಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಹೃದಯದ ಸಮಸ್ಯೆಗಳು ನಿಯಂತ್ರಣದಲ್ಲಿ ಇರುತ್ತವೆ. ಇದರಲ್ಲಿ ವಿಟಮಿನ್ ಈ ಇದೆ ಇದರ ಜೊತೆಗೆ ಪೊಟ್ಯಾಷಿಯಂ ಜಾಸ್ತಿ ಸೋಡಿಯಮ್ ಅಂಶ ಕಡಿಮೆ ಇದೆ ಆದ್ದರಿಂದ ಬಾದಾಮಿ ಸೇವಿಸುವುದರಿಂದ ರ ಕ್ತದೊತ್ತಡ ಸಮಸ್ಯೆ ಇರುವುದಿಲ್ಲ

ರ ಕ್ತ ಪ್ರಸರಣ ಸರಿಯಾಗಿ ಆಗುತ್ತದೆ. ಹಾಗೇನೇ ಬಾದಾಮಿಯಲ್ಲಿನ ಮೆಗ್ನಿಶಿಯಮ್ ಅಂಶ ಖಂಡಗಳಲ್ಲಿನ ನೋವನ್ನು ದೂರಮಾಡಿ ದೃಢವಾಗಿ ಇರುವುದಕ್ಕೆ ಸಹಾಯ ಮಾಡುತ್ತದೆ. ಬಾದಾಮಿಯಲ್ಲಿ ಸಿಗುವ ಕ್ಯಾಲ್ಸಿಯಂ ಎಲುಬುಗಳಿಗೆ ಶಕ್ತಿಯನ್ನು ನೀಡುತ್ತದೆ. ಬಾದಾಮಿಯಲ್ಲಿ ಇರುವ ಪಿಚ್ ಪಧಾರ್ಥ ಮಾಂಸಖಂಡಗಳು ಕೊಬ್ಬನ್ನು ಕಡಿಮೆ ಮಾಡುತ್ತವೆ. ಈ ಬಾದಾಮಿಯಲ್ಲಿ ಕ್ಯಾಲೋರಿ ಅಂಶ ಕಡಿಮೆ ಇರುವುದರಿಂದ ಈ ಬಾದಾಮಿಯನ್ನು ಪ್ರತಿದಿನ ತಿಂದರೆ ಯಾವುದೇ ಸಮಸ್ಯೆ ಇರುವುದಿಲ್ಲ ಹಾಗೇನೇ ಸುಸ್ತು ಇರುವಾಗ ನಾಲ್ಕು ಬಾದಾಮಿಯನ್ನು ತಿಂದರೆ ಕೂಡಲೇ ನಮ್ಮ ದೇಹಕ್ಕೆ ಶಕ್ತಿ ಬರುತ್ತದೆ ಮಧುಮೇಹದಿಂದ ಬಳಲುತ್ತಿರುವವರು ಊಟದ ನಂತರ ನಾಲ್ಕು ಬಾದಾಮಿಯನ್ನು ತಿಂದರೆ ಇದರಿಂದ ತುಂಬಾ ಒಳ್ಳೆಯ ಫಲಿತಾಂಶ ಸಿಗುತ್ತದೆ.

ಏಕೆಂದರೆ ಇದು ರಕ್ತದಲ್ಲಿ ಇನ್ಸುಲಿನ್ ಆಂಶವನ್ನು ವೃದ್ಧಿಸುತ್ತದೆ ನಾಲ್ಕು ಬಾದಾಮಿಯನ್ನು ರಾತ್ರಿ ನೆನಸಿ ಮರುದಿನ ಮಕ್ಕಳಿಗೆ ತಿನಿಸಿದರೆ ಇದರಿಂದ ಜ್ಞಾಪಕ ಶಕ್ತಿ ಕೂಡ ಹೆಚ್ಚುತ್ತದೆ ಇರೀತಿ ಬಾದಾಮಿ ತಿಂದರೆ ದೊಡ್ಡ ಕರುಳಿನ ಕ್ಯಾನ್ಸರ್ ಕೂಡ ಬರುವುದಿಲ್ಲ. ಹಾಗಾಗಿ ಬಾದಾಮಿ ಒಂದು ಒಳ್ಳೆಯ ಆರೋಗ್ಯ ನೀಡುವಂತಹ ಒಂದು ಉತ್ತಮ ಪಧಾರ್ಥ ಎಂದೇ ಹೇಳಬಹುದು. ಹಾಗಾಗಿ ತಪ್ಪದೆ ಎಲ್ಲರೂ ಬಾದಾಮಿಯನ್ನು ತಿಂದು ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.

Comments are closed.