ಆರೋಗ್ಯ

ಮಿದುಳನ್ನು ಯಂಗ್ ಆಗಿ ಇಟ್ಟುಕೊಳ್ಳಬೇಕಾದರೆ ಪಾಲಿಸಿ ಈ ಟಿಪ್ಸ್

Pinterest LinkedIn Tumblr

ಮನುಷ್ಯನಾಗಿ ಹುಟ್ಟಿದ ಮೇಲೆ ವಯಸ್ಸು ಆಗುತ್ತಾ ಯಾರೇ ಆಗಲಿ ವೃದ್ಧರಾಗಬೇಕಾದದ್ದೇ. ಆದರೆ ಕೆಲವರು ಆ ಕ್ರೀಮು ಈ ಕ್ರೀಮು ಹಚ್ಚಿ, ವಿವಿಧ ರೀತಿಯ ಪದ್ಧತಿಗಳನ್ನು ಅನುಸರಿಸುವ ಕಾರಣಗಳಿಂದ ಸ್ವಲ್ಪ ತಡವಾಗಿ ವೃದ್ಧರಾಗಿ ಕಾಣಿಸುತ್ತಾರೆ. ಆದರೆ ಅವರ ದೇಹದಲ್ಲಿನ ಅಂಗಾಂಗಳೆಲ್ಲಾ ವೃದ್ಧಾಪ್ಯಕ್ಕೆ ಎಂದೋ ಒಳಗಾಗಿರುತ್ತವೆ. ಆದರೆ ನಿಮಗೆ ಗೊತ್ತೇ..? ಯಾವುದೇ ಅಂಗಾಂಗ ವೃದ್ಧಾಪ್ಯಕ್ಕೆ ಒಳಗಾದರೂ ಸಿಂಪಲ್ ಟಿಪ್ಸ್ ಪಾಲಿಸಿದರೆ ಮಿದುಳನ್ನು ಮಾತ್ರ ಯಾವಾಗಲೂ ಯಂಗ್ ಆಗಿ ಇಟ್ಟುಕೊಳ್ಳಬಹುದು. ಇದರಿಂದ ದೇಹ ಸಹ ಯಂಗ್ ಆಗಿ ಉತ್ಸಾಹದಿಂದ ಇರುತ್ತದೆ. ಮಿದುಳನ್ನು ಯಾವಾಗಲೂ ಯಂಗ್ ಆಗಿ ಇಟ್ಟುಕೊಳ್ಳಬೇಕಾದರೆ ಏನು ಮಾಡಬೇಕು ಎಂಬುದನ್ನು ಈಗ ತಿಳಿದುಕೊಳ್ಳೋಣ.

1. ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದು, ಪಜಲ್ಸ್ ಪೂರ್ಣ ಮಾಡುವುದು, ಇತರೆ ಮಿದುಳಿಗೆ ಮೇವಿನಂತಹ ಸಮಸ್ಯೆಗಳನ್ನು ಪರಿಹರಿಸುವುದು, ಪೇಯಿಂಟಿಂಗ್, ಡ್ರಾಯಿಂಗ್‌ನಂತಹ ಆಕ್ಟಿವಿಟೀಸ್‌ಗಳಲ್ಲಿ ನಿತ್ಯ ಪಾಲ್ಗೊಳ್ಳುವ ಮೂಲಕ ಮಿದುಳನ್ನು ಯಾವಾಗಲೂ ಯಂಗ್ ಆಗಿ ಇಟ್ಟುಕೊಳ್ಳಬಹುದು.
2. ನಿತ್ಯ ಸಾಧ್ಯವಾದಷ್ಟು ಸಮಯ ಕಾಲ ವ್ಯಾಯಾಮ ಮಾಡಬೇಕು. ಇದರಿಂದ ಮಿದುಳಿಗೆ ರಕ್ತ ಸಂಚಲನ ಹೆಚ್ಚಿ ಅದು ಆಕ್ಟೀವ್ ಆಗಿ ಇರುತ್ತದೆ. ಅದು ಮಿದುಳನ್ನು ಉತ್ಸಾಹದಿಂದ ಇರುವಂತೆ ನೋಡಿಕೊಳ್ಳುತ್ತದೆ. ಯಂಗ್ ಆಗಿ ಇರುವಂತೆ ನೋಡಿಕೊಳ್ಳುತ್ತದೆ.
3. ನಿತ್ಯ ದೇಹಕ್ಕೆ ಬೇಕಾದ ಕ್ಯಾಲರಿಗಳಿಗಿಂತ ಸ್ವಲ್ಪ ಕಡಿಮೆ ಕ್ಯಾಲರಿಗಳುಳ್ಳ ಆಹಾರವನ್ನು ತೆಗೆದುಕೊಂಡರೆ ಅದರ ಮೂಲಕ ಮಿದುಳು ಹೆಚ್ಚು ಕೆಲಸ ಮಾಡುತ್ತದಂತೆ. ಇದರಿಂದ ಮಿದುಳನ್ನು ಯಂಗ್ ಆಗಿ ಇಟ್ತುಕೊಳ್ಳಬಹುದಂತೆ.
4. ಬಿಪಿಯನ್ನು ಯಾವಾಗಲೂ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇದರಿಂದ ಸಹ ಮಿದುಳಿನ ಕೆಲಸ ಹೆಚ್ಚುತ್ತದೆ.
5. ಡಯಾಬಿಟೀಸ್ ಕಾಯಿಲೆ ಬರದಂತೆ, ರಕ್ತದಲ್ಲಿನ ಸಕ್ಕರೆ ಅಂಶ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಇದು ಸಹ ಮಿದುಳಿನ ಕೆಲಸದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
6. ಮದ್ಯಪಾನ, ಧೂಮಪಾನ ಬಿಡಬೇಕು. ಇವು ಮಿದುಳಿನ ಸಾಮರ್ಥ್ಯವನ್ನು ಕುಂಠಿತ ಮಾಡುತ್ತವೆ. ಆದಕಾರಣ ಇವಕ್ಕೆ ದೂರವಾಗಿ ಇದ್ದರೆ ಮಿದುಳು ಶಾರ್ಪ್ ಆಗುತ್ತದೆ.
7. ಯಾವಾಗಲೂ ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಬೇಕು. ಆತಂಕ, ಟೆನ್ಷನ್, ಒತ್ತಡದಂತಹವುಗಳನ್ನು ದೂರ ಓಡಿಸಬೇಕು. ಇಲ್ಲದಿದ್ದರೆ ಮಿದುಳಿನ ಮೇಲೆ ಒತ್ತಡ ಹೆಚ್ಚಾಗಿ ಬೀಳುತ್ತದೆ. ಅದು ಮಿದುಳಿನ ಕೆಲಸಕ್ಕೆ ಅಡ್ಡಿಯಾಗುತ್ತದೆ.
8. ನಿತ್ಯ ದೇಹಕ್ಕೆ ಸೂಕ್ತ ವಿಶ್ರಾಂತಿ ಅಗತ್ಯ. ಸರಿಯಾಗಿ ನಿದ್ದೆ ಮಾಡಿದರೆ ಮಿದುಳು ಶಾರ್ಪ್ ಆಗಿ ಬದಲಾಗುತ್ತದೆ.
9. ತಲೆಗೆ ಯಾವುದೇ ಪೆಟ್ಟಾಗದಂತೆ ನೋಡಿಕೊಳ್ಳಬೇಕು. ಮುಖ್ಯವಾಗಿ ವಾಹನಗಳ ಮೇಲೆ ಪ್ರಯಾಣಿಸುವಾಗ ಹೆಲ್ಮೆಟ್‌ನಂತಹ ಸುರಕ್ಷಿತೆಗಳನ್ನು ಪಾಲಿಸಬೇಕು. ತಲೆಗೆ ಪೆಟ್ಟಾದರೂ ಮಿದುಳಿನ ಕೆಲಸದ ಸಾಮರ್ಥ್ಯದಲ್ಲಿ ವ್ಯತ್ಯಾಸ ಕಂಡುಬರುತ್ತದೆ.
10. ನಾಲ್ಕು ಮಂದಿಯ ಜತೆ ಬೆರೆತು ಓಡಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ನಿತ್ಯ ಹೊಸ ವ್ಯಕ್ತಿಗಳನ್ನು ಬೆರೆಯಲು ಪ್ರಾರಂಭಿಸಬೇಕು. ಇದರಿಂದ ಮಿದುಳು ಉತ್ತೇಜನಗೊಳ್ಳುತ್ತದೆ.

Comments are closed.