ಆರೋಗ್ಯ

ನೀವು ಬೆಳಗ್ಗೆ ಬ್ರೇಕ್ ಫಾಸ್ಟ್ ಮಾಡದಿದ್ದರೆ ಮುಂದೆ ನಿಮಗೆ ಕಾದಿದೆ ಅನಾಹುತ !

Pinterest LinkedIn Tumblr

ಬೆಂಗಳೂರು: ಬೆಳಗೆ ತಡವಾಗಿ ಏಳುವುದರಿಂದಲೋ, ಇನ್ಯಾವುದೋ ಕಾರಣಕ್ಕೋ ಬೆಳಗಿನ ಉಪಾಹಾರ ತಿನ್ನದೇ ಇರುವ ಅಭ್ಯಾಸ ಮಾಡಿಕೊಂಡಿದ್ದೀರಾ? ಹಾಗಿದ್ದರೆ ಜೋಕೆ!

ಇಸ್ರೇಲ್ ನ ವಿವಿಯ ಅಧ್ಯಯನಕಾರರ ಪ್ರಕಾರ ಬೆಳಗಿನ ಉಪಾಹಾರ ತ್ಯಜಿಸುವುದರಿಂದ ದೇಹ ತೂಕ ಹೆಚ್ಚುತ್ತದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ತೀವ್ರತರದ ಮಧುಮೇಹ ಬರುವ ಅಪಾಯವೂ ಹೆಚ್ಚಿದೆಯಂತೆ.

ಬೆಳಗಿನ ಉಪಾಹಾರ ತ್ಯಜಿಸಿ, ದಿನದ ಉಳಿದ ಹೊತ್ತಿನಲ್ಲಿ ಹೊಟ್ಟೆ ಬಿರಿಯುವಷ್ಟು ತಿನ್ನುವ ಅಭ್ಯಾಸವಿಟ್ಟುಕೊಂಡಿದ್ದರೆ ಇಂದೇ ಬಿಡುವುದು ಒಳ್ಳೆಯದು. ಇದು ತೂಕ ಹೆಚ್ಚುವಿಕೆ ಮತ್ತು ಮಧುಮೇಹಕ್ಕೆ ದಾರಿ ಮಾಡಿದಂತೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಹಾಗಾಗಿ ಹುಷಾರಾಗಿರಿ!

Comments are closed.