ಆರೋಗ್ಯ

ಫೆ.25 ವಕ್ವಾಡಿಯಲ್ಲಿ ‘ಸ್ಪಂದನ-2024’; ಬೃಹತ್ ರಕ್ತದಾನ ಶಿಬಿರ ಹಾಗೂ ಗೌರವಾಭಿನಂದನೆ

Pinterest LinkedIn Tumblr

ಕುಂದಾಪುರ: ವಕ್ವಾಡಿ ಫ್ರೆಂಡ್ಸ್ (ರಿ) ಇವರ ಆಶ್ರಯದಲ್ಲಿ ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ, ರಕ್ತ ನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಯೋಗದೊಂದಿಗೆ ‘ಸ್ಪಂದನ- 2024’ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಹಾಗೂ ಗೌರವಾಭಿನಂದನೆ ಕಾರ್ಯಕ್ರಮ ಫೆಬ್ರವರಿ 25ರಂದು ಭಾನುವಾರ ಬೆಳಿಗ್ಗೆ 8.30 ರಿಂದ ವಕ್ವಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.

ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸನ್ಮಾನಿಸಲಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ. ವಕ್ವಾಡಿ ಫ್ರೆಂಡ್ಸ್ ವಕ್ವಾಡಿ ಅಧ್ಯಕ್ಷ ನವೀನ್ ಅವರ ಸಭಾಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡರಾದ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ, ವಕೀಲರಾದ ಎಮ್.ಕೆ ಸುವೃತ್ ಕುಮಾರ್, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ, ರಕ್ತದ ಆಪತ್ಪಾಂದವ ಸತೀಶ್ ಸಾಲಿಯಾನ್, ಎಫ್.ಎ.ಜಿ.ಇ ಚೀಪ್ ಕನ್ಸಲ್ಟೆಂಟ್ ತಪೋವನ ಲೈಫ್ ಸ್ಪೇಸ್ ಫ್ರೈ.ಲಿ. ಮಣಿಪಾಲದ ಎಂಡಿ ಡಾ. ವಾಣಿಶ್ರೀ ಐತಾಳ್, ಮಣಿಪಾಲ‌ ಕೆ.ಎಂ.ಸಿ ರಕ್ತನಿಧಿ ವಿಭಾಗದ ನಿರ್ದೇಶಕರಾದ ಡಾ. ಶಮಿ ಶಾಸ್ತ್ರೀ, ಕಾಳಾವರ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಶೆಟ್ಟಿಗಾರ್ ಉಪಸ್ಥಿತರಿರಲಿದ್ದಾರೆ.

ಸನ್ಮಾನ: ಬಾಬುರಾಯ್ ಆಚಾರ್- ಕೃಷಿ ಮತ್ತು ಕರಕುಶಲ. ವಾಸುದೇವ ಶೆಟ್ಟಿಗಾರ್- ರಂಗಕರ್ಮಿ. ರಾಜು ದೇವಾಡಿಗ- ಭಜನಕರಾರು. ಶರತ್ ಕಾಂಚನ್ ಆನಗಳ್ಳಿ- ಸ್ವಯಂ ರಕ್ತ ದಾನ. ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

 

Comments are closed.